ಉಮ್ರಾ ಯಾತ್ರಾರ್ಥಿಗಳ ಬಸ್‌ಗೆ ಬೆಂಕಿ: 40ಕ್ಕೂ ಹೆಚ್ಚು ಜನ ಮೃತಪಟ್ಟ ವರದಿ
ಮಕ್ಕಾ: ಮದೀನಾದಲ್ಲಿ ಉಮ್ರಾ ಯಾತ್ರಾರ್ಥಿಗಳ ಬಸ್ ಬೆಂಕಿ ಹತ್ತಿ ಉರಿದಿದ್ದು, ಸುಮಾರು ನಲವತ್ತು ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಮಕ್ಕಾದಿಂದ ಹೊರಟಿದ್ದ ಉಮ್ರಾ ಬಸ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿದೆ. ಬಸ್‌ನಲ್ಲಿ ಹೈದರಾಬಾದ್ ಮೂಲದ 43 ಮಂದಿ ಪ್ರಯಾಣಿಸುತ್ತಿದ್ದರು. ಮೃತರ ಪೈಕಿ 20 ಮಹಿಳೆಯರು ಮತ್ತು 11 ಮಕ್ಕಳು ಸೇರಿದ್ದಾರೆ ಎಂದು ತಿಳಿದುಬಂದಿದೆ.
ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ತಕ್ಷಣವೇ ಬೆಂಕಿ ತಗುಲಿದ್ದು, ಅಪಘಾತದಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ ಎಂದು ವರದಿಯಾಗಿದೆ. ಬದುಕುಳಿದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೌದಿ ಕಾಲಮಾನ ರಾತ್ರಿ 11 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮಕ್ಕಾದಲ್ಲಿ ತೀರ್ಥಯಾತ್ರೆ ಪೂರ್ಣಗೊಳಿಸಿ ಮದೀನಾಕ್ಕೆ ತೆರಳುವ ಮಾರ್ಗದಲ್ಲಿ ಈ ದುರಂತ ಸಂಭವಿಸಿದೆ. ಬದ್ರ್ ಮತ್ತು ಮದೀನಾ ನಡುವಿನ ಮುಫರಹಾತ್ ಎಂಬ ಸ್ಥಳದಲ್ಲಿ ಅಪಘಾತ ಸಂಭವಿಸಿದೆ. ಬಸ್‌ನಲ್ಲಿದ್ದ ಎಲ್ಲ ಯಾತ್ರಾರ್ಥಿಗಳು ಹೈದರಾಬಾದ್‌ನವರು ಎಂದು ಉಮ್ರಾ ಕಂಪನಿ ದೃಢಪಡಿಸಿದೆ.
What's Your Reaction?
Like
0
Dislike
0
Love
0
Funny
0
Angry
0
Sad
1
Wow
0



