ಪಲ್ಲಂಗೋಡು ಅಬ್ದುಲ್ ಖಾದಿರ್ ಮದನಿಗೆ 7ನೇ ಸಯ್ಯದ್ ತಾಹಿರುಲ್ ಅಹ್ದಲ್ ಪ್ರಶಸ್ತಿ ಪ್ರದಾನ

Feb 2, 2026 - 09:36
ಪಲ್ಲಂಗೋಡು ಅಬ್ದುಲ್ ಖಾದಿರ್ ಮದನಿಗೆ 7ನೇ ಸಯ್ಯದ್ ತಾಹಿರುಲ್ ಅಹ್ದಲ್ ಪ್ರಶಸ್ತಿ ಪ್ರದಾನ

ಪುತ್ತಿಗೆ: ಮಾಲಿಕ್ ದೀನಾರ್ ಕಲ್ಚರಲ್ ಫೋರಂ ನೀಡುವ ಏಳನೇ ಸಯ್ಯದ್ ತ್ವಹಿರುಲ್ ಅಹ್ದಲ್ ಪ್ರಶಸ್ತಿಯನ್ನು ಕೇರಳ ಮುಸ್ಲಿಂ ಜಮಾಅತ್ ಕಾಸರಗೋಡು ಜಿಲ್ಲಾ ಜನರಲ್ ಸೆಕ್ರೆಟರಿ ಪಲ್ಲಂಗೋಡು ಅಬ್ದುಲ್ ಖಾದಿರ್ ಮದನಿಗೆ ಪ್ರದಾನ ಮಾಡಲಾಯಿತು. ಪುತ್ತಿಗೆ ಮುಹಿಮ್ಮಾತ್‌ನಲ್ಲಿ ನಡೆದ ತ್ವಾಹಿರ್ ತಂಙಳ್ ಅವರ 20ನೇ ಉರೂಸ್ ಅಂಗವಾಗಿ ಆಯೋಜಿಸಲಾದ ಅಹ್ದಲಿಯ್ಯ ಆಧ್ಯಾತ್ಮಿಕ ಸಮ್ಮೇಳನದಲ್ಲಿ ಸಮಸ್ತ ಅಧ್ಯಕ್ಷರಾದ ಇ. ಸುಲೈಮಾನ್ ಮುಸ್ಲಿಯಾರ್ ಪ್ರಶಸ್ತಿ ಪತ್ರವನ್ನು ಹಾಗೂ ಮರ್ಕಜ್ ಅಧ್ಯಕ್ಷರಾದ ಸಯ್ಯದ್ ಅಲಿ ಬಾಫಕಿ ತಂಙಳ್ ಅವರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಸಯ್ಯದ್ ಹಸನುಲ್ ಅಹ್ದಲ್ ತಂಙಳ್ ಮತ್ತು ಬಿ.ಎಸ್. ಅಬ್ದುಲ್ಲಾ ಕುಂಞಿ ಫೈಸಿ ಅವರು ಶಾಲು ಹೊದಿಸಿದರು. ಹಜ್ ಸಮಿತಿಯ ಮಾಜಿ ಅಧ್ಯಕ್ಷರಾದ ಸಿ. ಮುಹಮ್ಮದ್ ಫೈಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಹಿಮ್ಮಾತ್ ಕಾರ್ಯದರ್ಶಿ ಸಯ್ಯದ್ ಮುನೀರ್ ಅಹ್ದಲ್ ತಂಙಳ್ ಸ್ವಾಗತಿಸಿದರು. ಮಾಲಿಕ್ ದೀನಾರ್ ಕಲ್ಚರಲ್ ಫೋರಂ ಅಧ್ಯಕ್ಷರಾದ ಅಬ್ದುಲ್ ಲತೀಫ್ ಸಅದಿ ಉರ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿ.ಪಿ.ಎಂ. ಫೈಸಿ ವಿಲ್ಯಪ್ಪಳ್ಳಿ, ಕೆ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಪಟ್ಟುವಂ, ಮುಹಮ್ಮದ್ ಫಾಸಿಲ್ ರಸ್ವಿ ಕಾವಲ್ ಕಟ್ಟೆ, ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ, ಕೆ.ಪಿ. ಹುಸೈನ್ ಸಅದಿ ಕೆ.ಸಿ. ರೋಡ್, ಕೊಲ್ಲಂಬಾಡಿ ಅಬ್ದುಲ್ ಖಾದರ್ ಸಅದಿ, ಸಯ್ಯದ್ ಇಬ್ರಾಹಿಂ ಹಾದಿ ತಂಙಳ್ ಚೂರಿ, ಸಯ್ಯದ್ ಹಬೀಬ್ ಅಹ್ದಲ್ ತಂಙಳ್, ಸಯ್ಯದ್ ಹಮೀದ್ ಅನ್ವರ್ ಅಹ್ದಲ್ ತಂಙಳ್, ಸಿ.ಕೆ. ರಾಶಿದ್ ಬುಖಾರಿ, ಸಯ್ಯದ್ ಯು.ಪಿ.ಎಸ್. ತಂಙಳ್ ಅರ್ಲಡ್ಕ, ಮೊಯ್ದು ಸಅದಿ ಚೇರೂರ್, ಎ.ಕೆ.ಎಂ. ಅಶ್ರಫ್ ಎಂ.ಎಲ್.ಎ., ಕರೀಂ ಹಾಜಿ ಚಾಲಿಯಂ, ಸಿ.ಎನ್. ಅಬ್ದುಲ್ ಖಾದರ್ ಮಾಸ್ಟರ್, ಬಶೀರ್ ಪುಳಿಕೂರು, ವೈ.ಎಂ. ಅಬ್ದುಲ್ ರಹಮಾನ್ ಅಹ್ಸನಿ, ಹಾಜಿ ಅಮೀರಲಿ ಚೂರಿ, ಸುಲೈಮಾನ್ ಕರಿವೆಳ್ಳೂರು, ಹಂಸ ಸಖಾಫಿ ಬಂಟ್ವಾಳ, ಸಿದ್ದೀಕ್ ಮೊಂಡುಗೋಳಿ, ಅಬ್ದುಲ್ ರಝಾಕ್ ಸಖಾಫಿ ಕೊಟ್ಟಕುನ್ನು, ಅಬ್ದುಲ್ ಖಾದರ್ ಸಅದಿ ಚುಳ್ಳಿಕಾನಂ ಮುಂತಾದವರು ಉಪಸ್ಥಿತರಿದ್ದರು. ಫೋರಂ ಪದಾಧಿಕಾರಿಗಳಾದ ಇರ್ಫಾದ್ ಮಾಯಿಪ್ಪಾಡಿ ಮತ್ತು ಶಿಹಾಬ್ ಉರ್ಮಿ ನೇತೃತ್ವ ನೀಡಿದರು.

ವಿವಿಧ ದೇಶಗಳಲ್ಲಿ ಉದ್ಯೋಗದಲ್ಲಿರುವ ಕಾಸರಗೋಡು ಜಿಲ್ಲೆಯ ಜನರ ಒಕ್ಕೂಟವಾದ ಮಲಿಕ್ ದೀನಾರ್ ಕಲ್ಚರಲ್ ಫೋರಂ, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದವರಿಗೆ ಸಯ್ಯದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ ಹೆಸರಿನಲ್ಲಿ ಕಳೆದ ಆರು ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ. ಈ ವರ್ಷದ ಪ್ರಶಸ್ತಿಗೆ ಆಯ್ಕೆಯಾದ ಪಲ್ಲಂಗೋಡು ಅಬ್ದುಲ್ ಖಾದಿರ್ ಮದನಿ ಅವರು 1986 ರಿಂದ ಎಸ್.ಎಸ್.ಎಫ್. ಮತ್ತು ಎಸ್.ವೈ.ಎಸ್. ಸಂಘಟನೆಗಳ ಯುನಿಟ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸದ್ಯ ಅವರು ಕೇರಳ ಮುಸ್ಲಿಂ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಅದಿಯ್ಯ ಕ್ಯಾಬಿನೆಟ್ ಸದಸ್ಯ, ಮುಹಿಮ್ಮಾತ್ ಉಪಾಧ್ಯಕ್ಷ, ಮಳ್‌ಹರ್ ಸೆಕ್ರೆಟರಿ, ಕಲ್ಲಕಟ್ಟ ಮಜ್ಮಹ್ ಮತ್ತು ಮದನೀಸ್ ಅಸೋಸಿಯೇಷನ್ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಹಿಮ್ಮಾತ್‌ನ ಆರಂಭದ ಕಾಲದಿಂದಲೂ ತ್ವಾಹಿರ್ ತಂಙಳ್ ಅವರೊಂದಿಗೆ ಕೆಲಸ ಮಾಡಿರುವ ಅವರು, ಜಿಲ್ಲೆಯ ಸಾದಾತುಗಳು, ವಿದ್ವಾಂಸರು ಹಾಗೂ ರಾಜಕೀಯ-ಸಾಂಸ್ಕೃತಿಕ ಮುಖಂಡರೊಂದಿಗೆ ಆಪ್ತ ಸಂಬಂಧವನ್ನು ಹೊಂದಿದ್ದಾರೆ ಮತ್ತು ಜಿಲ್ಲೆಯ ಸುನ್ನೀ ಪ್ರಸ್ಥಾನದ ಮುಖವಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ವೈ.ಎಂ. ಅಬ್ದುಲ್ ರಹಮಾನ್ ಅಹ್ಸನಿ, ಎಂ. ಅಂದುಂಞಿ ಮೊಗರ್, ಬಿ.ಎಸ್. ಅಬ್ದುಲ್ಲಾ ಕುಂಞಿ ಫೈಸಿ, ಸಿ.ಎನ್. ಅಬ್ದುಲ್ ಖಾದಿರ್ ಮಾಸ್ಟರ್, ಹಾಜಿ ಅಮೀರಲಿ ಚೂರಿ, ಸಿ. ಅಬ್ದುಲ್ಲಾ ಹಾಜಿ ಚಿತ್ತಾರಿ ಮತ್ತು ಇತ್ತಿಹಾದ್ ಮುಹಮ್ಮದ್ ಹಾಜಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿತ್ತು. ಜಿಲ್ಲೆಯ ಸಂಘಟನಾ ಮತ್ತು ಸಾಂಸ್ಥಿಕ ರಂಗಗಳಲ್ಲಿ ಉತ್ತಮ ಪ್ರದರ್ಶನ ನೀಡುವವರಿಗೆ ಪ್ರೋತ್ಸಾಹ ನೀಡಲು ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದರೊಂದಿಗೆ ಮದ್ರಸಾ ಅಧ್ಯಾಪಕರನ್ನು ಗೌರವಿಸಲು ನೂರುಲ್ ಉಲಮಾ ಪ್ರಶಸ್ತಿಯನ್ನೂ ಈ ಫೋರಂ ನೀಡುತ್ತಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0