ತಮಿಳುನಾಡು | ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಡಿಎಂಡಿಕೆ

Feb 19, 2026 - 15:05
ತಮಿಳುನಾಡು | ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಡಿಎಂಡಿಕೆ

ಚೆನ್ನೈ: ಚೆನ್ನೈನಲ್ಲಿರುವ ಡಿಎಂಕೆ ಕೇಂದ್ರ ಕಚೇರಿಗೆ ಭೇಟಿ ನೀಡಿದ ಡಿಎಂಡಿಕೆ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ವಿಜಯಕಾಂತ್, ತಮ್ಮ ಡಿಎಂಡಿಕೆ ಪಕ್ಷವು ಡಿಎಂಕೆ ನೇತೃತ್ವದ ಮೈತ್ರಿಕೂಟ ಸೇರ್ಪಡೆಯಾಗುವುದನ್ನು ಖಚಿತಗೊಳಿಸಿದರು. 2005ರಲ್ಲಿ ಡಿಎಂಡಿಕೆ ಸ್ಥಾಪನೆಯಾದಾಗಿನಿಂದ ಇದೇ ಪ್ರಥಮ ಬಾರಿಗೆ ಡಿಎಂಡಿಕೆ ಪಕ್ಷವು ಡಿಎಂಕೆ ಮೈತ್ರಿಕೂಟದೊಂದಿಗೆ ಕೈಜೋಡಿಸಿದೆ.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೇಮಲತಾ, ಮೈತ್ರಿ ಪಕ್ಷಗಳ ನಡುವೆ ಸೀಟು ಹಂಚಿಕೆಯ ಕುರಿತು ಮಾತುಕತೆ ನಡೆಸಲು ಡಿಎಂಕೆ ರಚಿಸಲಿರುವ ತಂಡಗಳನ್ನು ಆಧರಿಸಿ ಸ್ಥಾನಗಳ ಸಂಖ್ಯೆಯನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು. 

ಡಿಎಂಡಿಕೆಯನ್ನು ಡಿಎಂಕೆ ಮೈತ್ರಿಕೂಟಕ್ಕೆ ಸ್ವಾಗತಿಸಿರುವ ಎಂ.ಕೆ.ಸ್ಟಾಲಿನ್, “ಡಿಎಂಡಿಕೆಯು ಡಿಎಂಕೆ ಮೈತ್ರಿಕೂಟವನ್ನು ಪ್ರವೇಶಿಸಿರುವುದು ತಮಿಳುನಾಡಿನಲ್ಲಿ ಡಿಎಂಕೆ ಆಡಳಿತದ ಮುಂದುವರಿಕೆಯನ್ನು ದೃಢಪಡಿಸಿದೆ” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 

https://twitter.com/mkstalin/status/2024354134909165801?ref_src=twsrc%5Etfw%7Ctwcamp%5Etweetembed%7Ctwterm%5E2024354134909165801%7Ctwgr%5E08d91e11d8db85ad60ed3c350a9f8a0991b14a40%7Ctwcon%5Es1_&ref_url=https%3A%2F%2Fwww.varthabharati.in%2Fnational%2Ftamil-nadu-dmdk-joins-dmk-led-alliance-ahead-of-polls-2115431

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0