ಸುಹಾಸ್ ಶೆಟ್ಟಿ ಹತ್ಯೆಯ ರೀತಿಯಲ್ಲೇ ಪ್ರತೀಕಾರ ಮಾಡಬೇಕು: ಕೊಲೆ ಆರೋಪಿ ಭರತ್ ಕುಮ್ಡೇಲ್ ಬೆದರಿಕೆ
ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆಯ ರೀತಿಯಲ್ಲಿ ಪ್ರತೀಕಾರ ಮಾಡಬೇಕು ಎಂದು ಕೊಲೆ ಆರೋಪಿ ಭರತ್ ಕುಮ್ಡೇಲ್ ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಪುತ್ತೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ ಎನ್ನಲಾದ ವೀಡಿಯೋದಲ್ಲಿ ಭರತ್ ಕುಮ್ಡೇಲ್, “ ನಾವು ಸುಹಾಸ್ ಶೆಟ್ಟಿ ಕೊಲೆಗೆ ಕೈಕಟ್ಟಿ ಕೂರುವುದಿಲ್ಲ, ಮುಸ್ಲಿಮರನ್ನು ಕ್ರೂರವಾಗಿ ಕೊಚ್ಚಿಕೊಚ್ಚಿ ಕೊಲೆ ಮಾಡುತ್ತೇವೆ, ಈ ಹಿಂದೆಯೂ ನಮ್ಮ ಸಹೋದರರು ಮುಸ್ಲಿಮರನ್ನು ಕೊಚ್ಚಿ ಮುಂಡದಿಂದ ರುಂಡ ಬೇರೆಬೇರೆ ಮಾಡಿದ್ದಾರೆ, ಪೋಸ್ಟ್ ಮಾರ್ಟಂನಲ್ಲಿ ಸ್ಟಿಚ್ ಹಾಕಲು ಒಂದೇ ಒಂದು ಜಾಗ ಬಾಕಿಯಾಗದಂತೆ ನಮ್ಮವರು ಕೊಂದಿದ್ದಾರೆ ಎಂದಿದ್ದಲ್ಲದೆ ಈ ಕರಾವಳಿಯಲ್ಲಿ ನಾವು ಮತ್ತೆ ಪ್ರತೀಕಾರದ ಕೊಲೆ ಮಾಡಿಯೇ ಮಾಡುತ್ತೇವೆ. ಸುಮ್ಮನೆ ಕೂರಲು ಇದು ಕಾಶ್ಮೀರ ಅಲ್ಲ ಎಂದು ಹೇಳಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



