ಸುನ್ನೀ ಸೆಂಟರ್ ಕಲ್ಲುಗುಂಡಿಯಲ್ಲಿ 4ನೇ ವರ್ಷದ ಉಚಿತ ಸಾಮೂಹಿಕ ಸುನ್ನತ್ ಕಾರ್ಯಕ್ರಮ ಯಶಸ್ವಿ

Apr 14, 2026 - 11:02
ಸುನ್ನೀ ಸೆಂಟರ್ ಕಲ್ಲುಗುಂಡಿಯಲ್ಲಿ 4ನೇ ವರ್ಷದ ಉಚಿತ ಸಾಮೂಹಿಕ ಸುನ್ನತ್ ಕಾರ್ಯಕ್ರಮ ಯಶಸ್ವಿ

ಕಲ್ಲುಗುಂಡಿ: ಎಸ್ಸೆಸ್ಸೆಫ್, ಎಸ್ ವೈ ಎಸ್ ಹಾಗೂ ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಯುನಿಟ್ ಸಂಯುಕ್ತಾಶ್ರಯದಲ್ಲಿ 4ನೇ ವರ್ಷದ ಉಚಿತ ಸಾಮೂಹಿಕ ಸುನ್ನತ್(ಮುಂಜಿ) ಕಾರ್ಯಕ್ರಮ ಏಪ್ರಿಲ್ 12ರಂದು ಕಲ್ಲುಗುಂಡಿಯ ಸುನ್ನೀ ಸೆಂಟರ್‌ನಲ್ಲಿ ಯಶಸ್ವಿಯಾಗಿ ನೆರವೇರಿತು. ಡಾ. ಮುಹಮ್ಮದ್ ಫಯಾಝ್ ಮಂಜನಾಡಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು ಸಾಮಾಜಿಕ ಸೇವೆಯೊಂದಿಗೆ ಜನರ ಮೆಚ್ಚುಗೆಗೆ ಪಾತ್ರವಾಯಿತು.
 
ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಅವರು ಮಾತನಾಡಿ ಇಂತಹ ಸೇವಾ ಕಾರ್ಯಗಳ ಬಗ್ಗೆ ಶ್ಲಾಘಿಸಿದರು. ಬದ್ರಿಯಾ ಜುಮಾ ಮಸ್ಜಿದ್ ಸಂಪಾಜೆ ಅಧ್ಯಕ್ಷ ಮುಹಮ್ಮದ್ ಹಮೀದಿಯಾ ಅವರು ಕಾರ್ಯಕ್ರಮದ ಮಹತ್ವವನ್ನು ಉಲ್ಲೇಖಿಸಿದರು.
ಅತಿಥಿಗಳಾಗಿ ಸುಳ್ಯ ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಮುಹಮ್ಮದ್ ಕುಂಞಿ ಗೂನಡ್ಕ, ಎಂ.ಜೆ.ಎಂ ಕಲ್ಲುಗುಂಡಿ ಮಾಜಿ ಅಧ್ಯಕ್ಷ ಅಬ್ಬಾಸ್ ಹಾಜಿ ಸಂಟ್ಯಾರ್, ಸಿರಾಜುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷ ಎ. ಕೆ. ಇಬ್ರಾಹಿಂ, ಎಸ್ ವೈ ಎಸ್ ಸುಳ್ಯ ಝೋನ್ ಅಧ್ಯಕ್ಷ ಲತೀಫ್ ಜೌಹರಿ ಸೇರಿದಂತೆ ಹನೀಫ್ ಇ.ಆರ್., ಹಮೀದ್ ಸಂಪಾಜೆ, ಕೆ. ಎಂ. ರಫೀಕ್,  ಎಸ್ ಕೆ ಹನೀಫ್ ಸಂಪಾಜೆ ಹಾಗೂ ಎಸ್ಸೆಸ್ಸೆಫ್ ಕಲ್ಲುಗುಂಡಿ ಯುನಿಟ್ ಅಧ್ಯಕ್ಷ ಆಶಿಕ್ ಕೆ. ಹೆಚ್, ಎಸ್ ವೈ ಎಸ್ ಕೋಶಾಧಿಕಾರಿ ಜಲೀಲ್ ಕಲ್ಲುಗುಂಡಿ, ಎಸ್ಸೆಸ್ಸಫ್ ಮಾಜಿ ಅಧ್ಯಕ್ಷರುಗಳಾದ ರಂಶಾದ್, ಅಲೀ ಚಟ್ಟೆಕಲ್ಲು, ಅಝೀಝ್ ಸಂಪಾಜೆ ರವರುಗಳು ಉಪಸ್ಥಿತರಿದ್ದರು.

ಕೆ.ಎಂ.ಜೆ ಕಲ್ಲುಗುಂಡಿ ಯುನಿಟ್ ಅಧ್ಯಕ್ಷ ಹಂಝ ಟಿ.ಎ ಕೊಯನಾಡು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ.ಎಂ.ಫೈಝಲ್ ಝುಹ್ರಿ ಸ್ವಾಗತಿಸಿ, ಸ್ವಾದಿಕ್ ಮಾಸ್ಟರ್ ಧನ್ಯವಾದಗೈದರು. ಹಸೈನಾರ್ ಸಿ ಎ ಚಟ್ಟೆಕ್ಕಲ್ಲು ಕಾರ್ಯಕ್ರಮ ಸುಸೂತ್ರವಾಗಿ ನಡೆಯುವಂತೆ ಸಹಕರಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0