ಸಜ್ಜನಿಕೆ ಮತ್ತು ಮಂದಹಾಸದ ಒಡೆಯ: ಬಹು| ಮುಹಮ್ಮದ್ ಫಾಳಿಲಿ ಉಸ್ತಾದ್ ಇನ್ನಿಲ್ಲ

Jan 20, 2026 - 12:28
ಸಜ್ಜನಿಕೆ ಮತ್ತು ಮಂದಹಾಸದ ಒಡೆಯ:  ಬಹು| ಮುಹಮ್ಮದ್ ಫಾಳಿಲಿ ಉಸ್ತಾದ್ ಇನ್ನಿಲ್ಲ

ಯುವ ವಿದ್ವಾಂಸ ಅಪ್ರತಿಮ ಪಂಡಿತರೂ ಆದಂತಹ ಪೇರಮೊಗರು ಜುಮ್ಮಾ ಮಸೀದಿಯ ಮುದರ್ರಿಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಮುಹಮ್ಮದ್ ಫಾಳಿಲಿ ಕಾಮಿಲ್ ಸಖಾಫಿ, ಅಲ್ ಫುರ್ಖಾನಿ, ಅಲ್ ಅರ್ಶದಿ  ಉಸ್ತಾದರು ನಮ್ಮಿಂದ ವಿದಾಯ ಹೇಳಿದರು.

ತಾಜುಲ್ ಮುಹಕ್ಕಿಕೀನ್ ಕೋಟೂರು ಉಸ್ತಾದರ ಪ್ರಮುಖ ಶಿಷ್ಯರಾಗಿದ್ದು ಅಲ್ಲಿಂದ ಫಾಳಿಲಿ ಬಿರುದನ್ನೂ ವಿಶ್ವವಿಖ್ಯಾತ ಪಂಡಿತರಾದ ಸುಲ್ತಾನುಲ್ ಉಲಮಾರ ಬಳಿಯಿಂದ ಕಾಮಿಲ್ ಸಖಾಫಿ ಬಿರುದನ್ನೂ, ತೋಕೆ ಉಸ್ತಾದರ ಬಳಿಯಿಂದ ಫುರ್ಖಾನಿ ಬಿರುದನ್ನೂ, ಅಲವಿ ಉಸ್ತಾದರ ಬಳಿಯಿಂದ ಅರ್ಶದಿ ಬಿರುದನ್ನೂ ಕರಗತಗೊಳಿಸಿ ಗುರುವಿನಂತೆಯೇ ಸರಳತೆಯನ್ನು ಮೈಗೂಡಿಸಿಕೊಂಡಿದ್ದರು. ಕೊಡಗು ಸುನ್ನೀ ಜಂಯ್ಯಿಯ್ಯತುಲ್ ಉಲಮಾದ ಸದಸ್ಯರಾಗಿ, ಕೆಮ್ಮಾಯಿ ಜುಮಾ ಮಸೀದಿ, ಟಿಪ್ಪುನಗರ, ಉಲ್ತೂರು ಸೇರಿದಂತೆ ಹಲವೆಡೆ ದೀನಿ ಸೇವೆಗೈದರು. 

ಉಸ್ತಾದರ ವ್ಯಕ್ತಿತ್ವದ ಅತ್ಯಂತ ಸುಂದರ ಅಂಶವೆಂದರೆ ಅವರ "ಸದಾ ನಗುಮುಖ". ಎಷ್ಟೇ ಒತ್ತಡಗಳಿದ್ದರೂ, ಯಾರೇ ಎದುರಾದರೂ ಮುಖದಲ್ಲಿ ಮಂದಹಾಸವಿಲ್ಲದೆ ಅವರು ಮಾತನಾಡುತ್ತಿರಲಿಲ್ಲ. ಅವರ ಆ ನಿಷ್ಕಲ್ಮಷ ನಗು ಎಂತವರನ್ನೂ ಸೆಳೆಯುತ್ತಿತ್ತು. ಎಲ್ಲರೊಂದಿಗೂ ಅತೀ ಸರಳವಾಗಿ ಬೆರೆಯುವ ಅವರ ಉತ್ತಮ ಸ್ವಭಾವವು ಅವರನ್ನು ಜನಮಾನಸದಲ್ಲಿ ನೆನಪಿಸಿದೆ. ಉಲಮಾಗಳ ವಿಯೋಗವು ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.  ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಅದ್ಯಕ್ಷರಾದ ಶೈಖುನಾ ಮಾಣಿ ಉಸ್ತಾದ್, ಕಾರ್ಯದರ್ಶಿ ತೋಕೆ ಉಸ್ತಾದ್ ಸಹಿತವಿರುವ ಹಲವಾರು ಉಲಮಾ ಗಣ್ಯರು, ಉಮರಾ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಮರ್ಹೂಂ ಫಾಳಿಲಿ ಉಸ್ತಾದರು ಹಲವಾರು ವಿದ್ವಾಂಸರನ್ನೂ, ಶಿಷ್ಯ ವೃಂದವನ್ನೂ, ಬಂದು ಮಿತ್ರಾದಿಗಳನ್ನೂ ಅಗಲಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 3
Wow Wow 0