1500 ನೇ ನಬಿ ಜನ್ಮದಿನಾಚರಣೆಯ ಹಿಜರಿ ವರ್ಷ ಇದಾ ನಮ್ಮೆಡೆಗೆ ಆಗಮಿಸುತ್ತಿದೆ ಮರ್ಹಬಾ ಯಾ ರಬೀ.....
ಪೈಗಂಬರ್ ﷺ ಈ ಜಗತ್ತಿಗೆ ಆಗಮಿಸಿ ಈ ಬರುವ ರಬಿವುಲ್ ಅವ್ವಲ್ 12 ಕ್ಕೆ 1500 ವರ್ಷ ತುಂಬುತ್ತಿದೆ. ಅಂದರೆ ಪೈಗಂಬರ್ ﷺ ಮಕ್ಕದಿಂದ ಮದೀನಕ್ಕೆ ಹಿಜರಿ ಹೋಗುವಾಗ ನಬಿಯರ ವಯಸ್ಸು 53. ಹಿಜರಿ ವರ್ಷದ ಪ್ರಾರಂಭ ಇಲ್ಲಿಂದ ಎಂದು ನಮಗೆಲ್ಲ ಗೊತ್ತೇ ಇದೆ. ಹಿಜರಿ 10 ಆಗುವಾಗ ಹಬೀಬರ ವಫಾತ್ ನಡೆಯುತ್ತದೆ. ಈಗ ನಮ್ಮೆಡೆಗೆ ಬರುತ್ತಿರುವುದು ಹಿಜರಿ ವರ್ಷ 1447 ಎಂಬುವುದನ್ನು ನಾವು ನೆನಪಿನಲ್ಲಿಡಬೇಕು. ( 1447+53 = 1500)
ಮರ್ಹಬಾ ಯಾ ಶಅರ್ ರಬೀ.... ಇದು ಒಬ್ಬ ಪ್ರವಾದಿ ಪ್ರೇಮಿಗಿರುವ ಸಂತೋಷದ ವರ್ಷ. ವಿವಿಧ ರೀತಿಯಲ್ಲಿ ಜನರು ತಮ್ಮ ಜನ್ಮ ದಿನಾಚರಣೆಯನ್ನು ಆಚರಿಸುವಾಗ ನಮ್ಮ ನಾಯಕ ಹೃದಯದ ಬಡಿತ ಮದೀತಾದ ಸೆಳೆತ ಪೊನ್ನು ಮುಸ್ತಫಾ ﷺ ರವರ 1500 ನೇ ಜನ್ಮ ದಿನಾಚರಣೆಯನ್ನು ನಾವು ಯಾವ ಮಟ್ಟಿಗೆ ಸಂಭ್ರಮಿಸಿ ಸಂತೋಷದಿಂದ ಆಚರಿಸಬೇಕೆಂದು ಈಗಲೇ ಪ್ಲಾನ್ ಮಾಡಿ ಇಡಬೇಕಾದ ಸಮಯ ಬಂದಿದೆ. ಅದಾಗಲೇ ಪ್ರೇಮಿಗಳು ಒಂದು ವರ್ಷದಿಂದ ಇದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬದಲಾವಣೆಯನ್ನು ತರುತ್ತಾ ಬರುತ್ತಿದ್ದಾರೆ. ನಾವು ಕೂಡ ಅದೇ ರೀತಿ ನಮ್ಮ ಈ ವರ್ಷದ ರಬೀವುಲ್ ಅವ್ವಲಿನಲ್ಲಿ ಬದಲಾವಣೆ ತರಬೇಕಿದೆ. ಇತರ ವರ್ಷದಂತೆ ನಮ್ಮ ಈ ವರ್ಷದ ರಬೀವುಲ್ ಅವ್ವಲ್ ಆಗದಂತೆ ನಾವು ನೋಡಬೇಕಿದೆ. ಇಸ್ಲಾಮಿನ ಬೌಂಡ್ರಿಯ ಒಳಗೆ ನಿಂತು ಬಗೆಬಗೆಯ ಕಾರ್ಯಕ್ರಮ ನಡೆಸಿ ನಾವು ಮದೀನಕ್ಕೆ ಕಳುಹಿಸಿ ಕೊಡಬೇಕು. ಅದಕ್ಕೆ ನಮ್ಮ ಈ 1500 ನೇ ವರ್ಷದ ನಬಿ ಜನ್ಮದಿನಾಚರಣೆ ಕಾರಣವಾಗಬೇಕು ಅಲ್ಲಾಹನು ತೌಫೀಕ್ ನೀಡಲಿ.. ಆಮೀನ್.
ಇದು ಓದಿ ಓಡಬೇಡಿ, ಸ್ವಲ್ಪ ಆಲೋಚನೆ ಮಾಡಿ, ಈ ಪುಣ್ಯ ರಬೀವುಲ್ ಅವ್ವಲ್ ವೆರೈಟಿ ಆಗಲಿ.....?
~ ಅಮೀನ್ ಹಿಮಮಿ ಕೊಳಕೆ
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



