ಪ್ರಥಮ ಶ್ರೀನಾರಾಯಣ ಗುರು ಸಹೋದರ್ಯ ಪ್ರಶಸ್ತಿಯನ್ನು ಎ ಪಿ ಉಸ್ತಾದರಿಗೆ ನೀಡಲಾಯಿತು.

Jan 18, 2026 - 10:08
ಪ್ರಥಮ ಶ್ರೀನಾರಾಯಣ ಗುರು ಸಹೋದರ್ಯ ಪ್ರಶಸ್ತಿಯನ್ನು ಎ ಪಿ ಉಸ್ತಾದರಿಗೆ ನೀಡಲಾಯಿತು.

ಆಲಪ್ಪುಝ: ಸ್ವಾಮಿ ಶಾಶ್ವತೀಕಾನಂದ ಸಾಂಸ್ಕೃತಿಕ ಕೇಂದ್ರದಿಂದ ಸ್ಥಾಪಿಸಲಾದ ಪ್ರಥಮ ಶ್ರೀನಾರಾಯಣ ಗುರು ಸಹೋದರ್ಯ ಪ್ರಶಸ್ತಿಯನ್ನು ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ರವರಿಗೆ ನೀಡಲಾಯಿತು. ಒಂದು ಲಕ್ಷ ರೂಪಾಯಿ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಫಲಕವನ್ನು ಒಳಗೊಂಡ ಈ ಪ್ರಶಸ್ತಿಯನ್ನು ಕಾಯಂಕುಳಂನಲ್ಲಿ ನಡೆದ “ಕೇರಳ ಯಾತ್ರಾ ಸ್ವಾಗತ ಸಮಾರಂಭ" ದ ವೇದಿಕೆಯಲ್ಲಿ ಎಸ್‌.ಎನ್‌.ಡಿ.ಪಿ. ಸಭೆಯ ಮಾಜಿ ಅಧ್ಯಕ್ಷ ಗೋಕುಳಂ ಗೋಪಾಲನ್, ಸಭೆಯ ಮಾಜಿ ಬೋರ್ಡ್ ಸದಸ್ಯ ಅಡ್ವೊ. ಎಸ್. ಚಂದ್ರಸೇನನ್ ಹಾಗೂ ಶಾಶ್ವತೀಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಅಡ್ವೊ. ವಿ.ಆರ್. ಅನೂಪ್ ರವರು ಸಂಯುಕ್ತವಾಗಿ ಈ ಪ್ರಶಸ್ತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಸಚಿವರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಮುದಾಯ ಮತ್ತು ರಾಜಕೀಯ ನಾಯಕರು ಪಾಲ್ಗೊಂಡಿದ್ದರು. ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪುನರುತ್ಥಾನವನ್ನು ಸಾಧ್ಯವಾಗಿಸುವಲ್ಲಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ನಡೆಸಿದ ಹೋರಾಟದ ಪ್ರಯತ್ನಗಳಿಗೆ ನೀಡಿದ ಗೌರವವೇ ಈ ಪ್ರಶಸ್ತಿ.

ಗುರು ಚಿಂತನೆಗಳು ಹಾಗೂ ಕೇರಳವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಇಂತಹ ಪಾತ್ರವನ್ನು ಅಂಗೀಕರಿಸಿ ಗೌರವಿಸುವ ಧ್ಯೇಯದ ಭಾಗವಾಗಿ ‘ಶ್ರೀನಾರಾಯಣ ಗುರು ಸಹೋದರ್ಯ ಪ್ರಶಸ್ತಿ’ಗಾಗಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ರವರನ್ನು ಆಯ್ಕೆ ಮಾಡಲಾಗಿದೆ ಎಂದು  ಅಡ್ವೊ. ಸಿ.ಕೆ. ವಿದ್ಯಾಸಾಗರ್ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಸಿ. ಹರಿದಾಸ್ ಹಾಗೂ ಡಾ. ರಾಜೇಶ್ ಕೋಮತ್ (ಪ್ರೊಫೆಸರ್, ಸ್ಕೂಲ್ ಆಫ್ ಸೋಶಿಯಲ್ ಸೈನ್ಸ್, ಎಂ.ಜಿ. ವಿಶ್ವವಿದ್ಯಾಲಯ) ಎಂಬವರು ಮತ್ತು ಸದಸ್ಯರಾಗಿರುವ ಜೋರಿಯೂ ಅಭಿಪ್ರಾಯ ವ್ಯಕ್ತಪಡಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0