ಪೊಸೋಟ್ ತಂಙಳ್ ಸಂಘಟನೆಗೆ ಶಕ್ತಿ ನೀಡಿದ ನಾಯಕ: ಕುಂಬೋಲ್ ತಂಙಳ್

Jun 21, 2025 - 17:03
ಪೊಸೋಟ್ ತಂಙಳ್ ಸಂಘಟನೆಗೆ ಶಕ್ತಿ ನೀಡಿದ ನಾಯಕ:  ಕುಂಬೋಲ್ ತಂಙಳ್

ಮಂಜೇಶ್ವರ: ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್-ಬುಖಾರಿ ಜಿಲ್ಲೆಯಲ್ಲಿ ಸುನ್ನಿ ಸಂಘಟನಾ ಚಟುವಟಿಕೆಗಳನ್ನು ಧೈರ್ಯದಿಂದ ಮುನ್ನಡೆಸಿದ ನಾಯಕ ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯ ಸಯ್ಯಿದ್ ಕೆ.ಎಸ್. ಅಟಕೋಯ ತಂಙಳ್ ಹೇಳಿದರು.  ಖಾಝಿ ಮತ್ತು ಮುದರ್ರಿಸಾಗಿ ಮಿಂಚಿದ ತಂಙಳ್ ಕಾಲು ಶತಮಾನದ ಹಿಂದೆ ನಿರ್ಮಿಸಿದ ಮಳ್‌ಹರ್ ಎಂಬ ಬಹುಮುಖಿ ಸಂಸ್ಥೆ ಇಂದು ಕೇರಳ ಮತ್ತು ಕರ್ನಾಟಕದಲ್ಲಿ ಪ್ರಸಿದ್ಧ ಸಂಸ್ಥೆಯಾಗಿ ಬೆಳೆದಿದೆ. ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಕ್ಷೇತ್ರದಲ್ಲಿ ನವೀನ ಕ್ರಾಂತಿಯನ್ನು ಸೃಷ್ಟಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ ತಂಙಳ್. 

ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್-ಬುಖಾರಿ (ಖ.ಸಿ) ರವರ ಹತ್ತನೇ ಉರೂಸ್ ಮುಬಾರಕ್ ಹಾಗೂ ಮಳ್‌ಹರ್ ಬೆಳ್ಳಿ ಹಬ್ಬವನ್ನು ಉದ್ಘಾಟಿಸಿ  ಅವರು ಮಾತನಾಡಿದರು. ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಯಶಸ್ಸೇ ಇಂದು ನಾವು ನೋಡುತ್ತಿರುವ ಸಂಸ್ಥೆಗಳ ಬೆಳವಣಿಗೆಗೆ ಕಾರಣ ಎಂದು ಕುಂಬೋಲ್ ತಂಙಳ್ ಹೇಳಿದರು.
ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅಧ್ಯಕ್ಷತೆ ವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0