ಮಳ್‌ಹರಿನಲ್ಲಿ ಜಲ್ಸತುಲ್ ಅಹ್‌ಬಾಬ್ ಇಂದು

Jun 9, 2025 - 10:41
Jun 9, 2025 - 10:46
ಮಳ್‌ಹರಿನಲ್ಲಿ ಜಲ್ಸತುಲ್ ಅಹ್‌ಬಾಬ್ ಇಂದು

ಮಂಜೇಶ್ವರ: ಮಳ್‌ಹರ್ ಸಂಸ್ಥೆಗಳ ಸ್ಥಾಪಕ, ಸಮಸ್ತ ಕೇಂದ್ರ ಮುಶಾವರ ಸದಸ್ಯ ಹಾಗೂ ಹಲವಾರು ಮೊಹಲ್ಲಾಗಳ ಖಾಝಿಯೂ ಆಗಿದ್ದ ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್ ಬುಖಾರಿ (ಖ.ಸಿ)ಯವರ ವಫಾತ್ ದಿನದ ಕಾರ್ಯಕ್ರಮವಾದ ಜಲ್ಸತುಲ್ ಅಹ್‌ಬಾಬ್ ಇಂದು (09/06/2025) ಸೋಮವಾರ ಬೆಳಿಗ್ಗೆ 10 ಗಂಟೆಗೆ ಮಳ್‌ಹರ್ ಕ್ಯಾಂಪಸಿನಲ್ಲಿ ನಡೆಯಲಿದೆ.

ಕಾರ್ಯಕ್ರಮಗಳಿಗೆ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ, ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ, ಮುಹಮ್ಮದ್ ಸ್ವಾಲಿಹ್ ಸಅದಿ ತಳಿಪ್ಪರಂಬ್ ನೇತೃತ್ವ ನೀಡಲಿದ್ದಾರೆ. ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್, ಬಿ.ಎಸ್ ಅಬ್ದುಲ್ಲಾ ಕುಂಞ ಫೈಝಿ, ಪಳ್ಳಂಗೋಡ್ ಅಬ್ದುಲ್ ಖಾದಿರ್ ಮದನಿ, ಮೂಸಲ್ ಮದನಿ ಅಲ್ ಬಿಶಾರ, ಸುಲೈಮಾನ್ ಕರಿವಳ್ಳೂರು, ಮುಹಮ್ಮದ್ ಸಖಾಫಿ ಪಾತೂರು, ಹಸನ್ ಸಅದಿ ಅಲ್ ಅಫ್‌ಳಲಿ, ಉಮರುಲ್ ಫಾರೂಖ್ ಮದನಿ ಮಚ್ಚಂಪಾಡಿ, ಮೂಸ ಸಖಾಫಿ ಕಳತ್ತೂರು, ಅಬೂಬಕರ್ ಸಿದ್ದೀಖ್ ಸಅದಿ ತೌಡುಗೋಳಿ, ಅಬ್ದುಲ್ ಹಮೀದ್ ಸಖಾಫಿ ಬಾಕಿಮಾರ್, ಅಬ್ದುಲ್ ಅಝೀಝ್ ಸಖಾಫಿ ಮಚ್ಚಂಪಾಡಿ, ಅಡ್ವ. ಹಸನ್ ಕುಂಞ ಮಳ್‌ಹರ್, ಬಶೀರ್ ಪುಳಿಕ್ಕೂರ್, ಪಳ್ಳಿಕುಂಞ ಹಾಜಿ ಹೊಸಂಗಡಿ, ಇಬ್ರಾಹಿಂ ಹಾಜಿ ಉಪ್ಪಳ, ಮಹ್‌ಮೂದ್ ಹಾಜಿ ಹೊಸಂಗಡಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0