ಪಶ್ಚಿಮ ಏಷ್ಯಾದಲ್ಲಿ ಶಾಂತಿ ಪುನಃಸ್ಥಾಪಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು: ಸಹಸ್ರಾರು ಮಂದಿಯ ಮಹಾಸಂಗಮಕ್ಕೆ ಸಾಕ್ಷಿಯಾದ ಮಳ್‌ಹರ್ ಬೆಳ್ಳಿ ಹಬ್ಬ ಸನದ್ ದಾನ ಸಮ್ಮೇಳನ
ಇಂದು ಪೊಸೊಟ್ ತಂಙಳ್ ಉರೂಸ್ ಮುಬಾರಕ್
ಮಂಜೇಶ್ವರಂ: ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಜೀವ ಕಾರುಣ್ಯ ಚಟುವಟಿಕೆಗಳ ಕ್ಷೇತ್ರದಲ್ಲಿ ಕಾಲು ಶತಮಾನವನ್ನು ಪೂರೈಸಿರುವ ಮಂಜೇಶ್ವರ ಮಳ್‌ಹರ್ ಸಂಸ್ಥೆಗಳ ಬೆಳ್ಳಿ ಮಹೋತ್ಸವ ಆಚರಣೆಗಳು ಮತ್ತು ಸನದ್ ದಾನ ಸಮ್ಮೇಳನವು ಅದ್ದೂರಿಯಾಗಿ ಮುಕ್ತಾಯಗೊಂಡಿತು. ಸಮಸ್ತ ಕೇಂದ್ರ ಮುಶಾವರ ಸದಸ್ಯ, ಹಲವಾರು ಮೊಹಲ್ಲಗಳ ಖಾಝಿ ಮತ್ತು ಮಳ್‌ಹರ್ ಶಿಲ್ಪಿ ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್-ಬುಖಾರಿಯವರ 10 ನೇ ಉರೂಸ್ ಮುಬಾರಕ್‌ನ ಭಾಗವಾಗಿ ಸಾವಿರಾರು ಜನರಿಗೆ ತಬರ್ರುಕ್ ವಿತರಿಸುವ ಮೂಲಕ ಇಂದು ಉರೂಸ್ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿದೆ.
ಮಳ್‌ಹರ್ ಬೆಳ್ಳಿ ಮಹೋತ್ಸವ ಸಮ್ಮೇಳನವು ಪಶ್ಚಿಮ ಏಷ್ಯಾದಲ್ಲಿ ಅಶಾಂತಿ ಬೆಳೆಸಲು ಇಸ್ರೇಲ್ ನಡೆಸುತ್ತಿರುವುದು ಅಮಾನವೀಯ ಮತ್ತು , ಯುದ್ಧ ಹರಡುವಿಕೆಯ ವಿರುದ್ಧ ಆಡಳಿತಗಾರರು ಮತ್ತು ಮಾನವ ಸಮುದಾಯವು ಒಂದಾಗಬೇಕೆಂದೂ ವಿಶ್ವಸಂಸ್ಥೆಯು ಜಗತ್ತಿನಲ್ಲಿ ಶಾಂತಿ ಪುನಃಸ್ಥಾಪಿಸಲು ಮಧ್ಯಪ್ರವೇಶಿಸಲು ಕರೆ ನೀಡಿತು. ಇಸ್ರೇಲ್‌ನ ಅಮಾನವೀಯ ದೌರ್ಜನ್ಯಗಳನ್ನು ಕೊನೆಗೊಳಿಸಲು ಮತ್ತು ವಿಶ್ವದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ವಿಶ್ವಸಂಸ್ಥೆಯು ತುರ್ತು ಕ್ರಮ ಕೈಗೊಳ್ಳಬೇಕು. ಗಾಝಾದಲ್ಲಿ ಬಂಧಿತರಾಗಿ ಸಾಯುತ್ತಿರುವ ಮುಗ್ಧ ಮಕ್ಕಳನ್ನು ರಕ್ಷಿಸಲು ಜಾಗತಿಕ ಸಮುದಾಯವು ಕೈಜೋಡಿಸಬೇಕು ಎಂದೂ ಸಮ್ಮೇಳನವು ಅಭಿಪ್ರಾಯಪಟ್ಟಿತು.
ಮಳ್‌ಹರ್‌ನಿಂದ ತಮ್ಮ ಸಮಗ್ರ ಶಿಕ್ಷಣವನ್ನು ಪೂರ್ಣಗೊಳಿಸಿದ 64 ಮಳ್‌ಹರಿ ವಿದ್ವಾಂಸರು ಮತ್ತು ಖುರ್‌ಆನ್ ಕಂಠಪಾಠ ಮಾಡಿದ 34 ಹಾಫಿಝ್‌ಗಳು ಸಾವಿರಾರು ಸಾಕ್ಷಿಗಳ ಸಮ್ಮುಖದಲ್ಲಿ ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ರವರಿಂದ ತಮ್ಮ ಸನದ್ ಪಡೆದರು.
ಸಮ್ಮೇಳನದಲ್ಲಿ ಸಯ್ಯಿದ್ ಅಲಿ ಬಾಫಖಿ ತಂಙಳ್ ಕೈೊಲಾಂಡಿ ಆರಂಭಿಕ ಪ್ರಾರ್ಥನೆಯನ್ನು ನೆರವೇರಿಸಿದರು. ಈ ಕಾರ್ಯಕ್ರಮವನ್ನು ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ ಯವರ ಅಧ್ಯಕ್ಷತೆಯಲ್ಲಿ ಸಮಸ್ತ ಅಧ್ಯಕ್ಷ ರಈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸಿದರು.ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಸನದ್ ದಾನ ಭಾಷಣ ಮಾಡಿದರು. ಖುದ್‌ವತುಸ್ಸಾದಾತ್ ಸಯ್ಯಿದ್ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಳ್, ಸಅದುಲ್ ಉಲಮಾ ಎ.ಪಿ.ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕ್ಕೋತ್, ಸಿರಾಜುಲ್ ಉಲಮಾ ಹೈದ್ರೋಸ್ ಮುಸ್ಲಿಯಾರ್, ಸಯ್ಯಿದ್ ಅತಾಳಜವುಲ್ಲಾ ತಂಙಳ್ ಉದ್ಯಾವರ, ಸಯ್ಯಿದ್ ಇಸ್ಮಾಯಿಲ್ ಬುಖಾರಿ ಕಡಲುಂಡಿ, ಸಯ್ಯಿದ್ ತ್ವಯ್ಯಿಬುಲ್ ಬುಖಾರಿ ಮುಜಮ್ಮಅ, ಸಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ ಕಡಲುಂಡಿ ,ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಜಮಲುಲ್ಲೈಲಿ ಕಾಜೂರು, ಕೆ.ಪಿ. ಅಬೂಬಕರ್ ಮುಸ್ಲಿಯಾರ್ ಪಟ್ಟುವಂ, ಮುಹಮ್ಮದಲಿ ಸಖಾಫಿ ತ್ರಿಕ್ಕರಿಪ್ಪುರ, ಡಾ.ಫಾಝಿಲ್ ರಝ್ವಿ ಕಾವಲ್ಕಟ್ಟೆ, ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ, ಪಳ್ಳಂಗೋಡ್ ಅಬ್ದುಲ್ ಖಾದಿರ್ ಮದನಿ, ಶಾಫಿ ಸಅದಿ ಬೆಂಗಳೂರು, ಸುಫ್ಯಾನ್ ಸಖಾಫಿ ಮತ್ತಿತರರು ಭಾಷಣ ನಡೆಸಿದರು.
ನಿನ್ನೆ ನಡೆದ ಸ್ಥಾನ ವಸ್ತ್ರ ವಿತರಣೆಯನ್ನು ಪ್ರೊಫೆಸರ್ ಸ್ವಾಲಿಹ್ ಸಅದಿ ತಳಿಪ್ಪರಂಬ ಉದ್ಘಾಟಿಸಿದರು. ಪ್ರಾಸ್ಥಾನಿಕ ಸಮ್ಮೇಳನದ ಅಧ್ಯಕ್ಷತೆಯನ್ನು ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ವಹಿಸಿದರು. ಕೇರಳ ಮುಸ್ಲಿಂ ಜಮಾತ್ ರಾಜ್ಯ ಉಪಾಧ್ಯಕ್ಷ ಬಿ.ಎಸ್. ಅಬ್ದುಲ್ಲಕುಂಞಿ ಫೈಝಿ ಉದ್ಘಾಟಿಸಿದರು. ಎಸ್.ಎಂ.ಎ ರಾಜ್ಯ ಕಾರ್ಯದರ್ಶಿ ಸುಲೈಮಾನ್ ಕರಿವೆಲ್ಲೂರು ಪ್ರಾಸ್ತಾವಿಕ ಭಾಷಣ ಮಾಡಿದರು ಮತ್ತು ಎಸ್.ವೈ.ಎಸ್ ರಾಜ್ಯ ಪ್ರಧಾನಕಾರ್ಯದರ್ಶಿ ರಹ್ಮತುಲ್ಲಾ ಸಖಾಫಿ ಎಳಮರಂ ಪ್ರಸ್ತಾವನೆ ಸಲ್ಲಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



