ಸ್ಥಳೀಯ ಆಡಳಿತದ ನಿರ್ಲಕ್ಷ್ಯ: ಅಂಗನವಾಡಿಗೆ ಹೋಗುವ ವೇಳೆ ಮಗುವಿನ ಮೇಲೆ ದಾಳಿ ಮಾಡಿದ ಬೀದಿ ನಾಯಿ
ಬಂಟ್ವಾಳ: ಬೋಳಂತೂರು ನಾರ್ಶ ಬಂಗಾರಕೋಡಿ ನಿವಾಸಿ ರಿಯಾಜ್ ಎಂಬವರ ಪುತ್ರಿ ರಿಜಿಲಾ ಸಾರಮ್ಮ ಎಂಬ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ಮನೆಯ ಸಮೀಪವೇ ಅಂಗನವಾಡಿ ಕೇಂದ್ರವಿದ್ದು, ಒಬ್ಬಳೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೀದಿ ನಾಯಿ ಏಕಾಏಕಿ ದಾಳಿ ಮಾಡಿದೆ. ಮಗುವಿನ ಮುಖ ಸಹಿತ ಇಡೀ ದೇಹದ ಮೇಲೆ ಗಾಯವಾಗಿದೆ. ಮಗುವಿನ ಚೀರಾಟ ಕೇಳಿ ಸ್ಥಳೀಯ ಮನೆಯವರು ಬಂದು ನಾಯಿಯಿಂದ ಮಗುವನ್ನು ರಕ್ಷಣೆ ಮಾಡಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಮಗುವನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ವಾರದಲ್ಲಿ ಬಂಟ್ವಾಳ ತಾಲೂಕಿನಲ್ಲಿ ನಾಯಿ ಕಡಿತ ಮಾಡಿದ ಎರಡನೇ ಪ್ರಕರಣವಾಗಿದೆ. ಬೀದಿ ನಾಯಿಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕ್ರಮವನ್ನು ತೆಗೆದುಕೊಳ್ಳುವಂತೆ ಸರಕಾರದ ಸೂಚನೆ ಇದೇಯಾದರೂ ಸ್ಥಳೀಯ ಆಡಳಿತ ಯಾವುದೇ ಕಠಿಣ ಕ್ರಮ ತೆಗೆದುಕೊಂಡಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಅನೇಕ ಘಟನೆ ನಿತ್ಯ ನಿರಂತರವಾಗಿ ನಡೆಯುತ್ತಿದ್ದರೂ ಅಧಿಕಾರಿಗಳ ಮೌನ ಯಾಕೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0