ವಿಧಾನಸೌಧದ ಮೇಲೆ ಭಗವಾಧ್ವಜ ಹಾರಿಸುವುದೇ ನನ್ನ ಗುರಿ: ಶಾಸಕ ಯತ್ನಾಳ್‌ ವಿವಾದಾತ್ಮಕ ಹೇಳಿಕೆ

Feb 8, 2026 - 12:27
ವಿಧಾನಸೌಧದ ಮೇಲೆ ಭಗವಾಧ್ವಜ ಹಾರಿಸುವುದೇ ನನ್ನ ಗುರಿ: ಶಾಸಕ ಯತ್ನಾಳ್‌ ವಿವಾದಾತ್ಮಕ ಹೇಳಿಕೆ

ವಿಜಯಪುರ: 2028ರಲ್ಲಿ ವಿಧಾನಸೌಧದ ಮೇಲೆ ರಾಷ್ಟ್ರಧ್ವಜದ ಪಕ್ಕ ಭಗವಾ ಧ್ವಜ ಹಾರಿಸುವುದೇ ನನ್ನ ಗುರಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸುಕ್ಷೇತ್ರ ಯಲಗೂರಕ್ಕೆ ಭೇಟಿ ನೀಡಿ ಅಭಿಮಾನಿ ಬಳಗ, ದೇವಸ್ಥಾನ ಸಮಿತಿಯವರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ದೇವಸ್ಥಾನವನ್ನು ಮಲೀನಗೊಳಿಸಿದ್ದಾರೆ. ಹಲವೆಡೆ ದೇವಸ್ಥಾನದ ಪ್ರಸಾದ ಕೆಡಿಸುವಷ್ಟರ ಮಟ್ಟಿಗೆ ಅವರ ಮನಸ್ಸು ಮಲೀನವಾಗಿದೆ ಎಂದರು.

ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಹಲವು ದಶಕಗಳ ಹೋರಾಟವಿದೆ. ಹಲವಾರು ಜನ ಪ್ರಾಣತ್ಯಾಗ ಮಾಡಿದ್ದಾರೆ, ಅವರ ಬಯಕೆ ಈಗ ಈಡೇರಿದೆ. ಅದೇ ರೀತಿ ರಾಜ್ಯದಲ್ಲಿಯೂ ಸನಾತನ ಧರ್ಮ ವೃದ್ಧಿಯಾಗಲಿದೆ. ಅದಕ್ಕಾಗಿ ಸನಾತನ ಧರ್ಮ, ಹಿಂದೂ ಧರ್ಮದ ಪರವಾಗಿರುವ ವ್ಯಕ್ತಿಗೆ ತಾವು ಮತ ಹಾಕಬೇಕು ಎಂದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0