ಜಟ್ಟಿಪಳ್ಳ ಮದ್ರಸ ಪೇರೆಂಟ್ಸ್ ಮೀಟ್ ಹಾಗೂ ಸನ್ಮಾನ ಸಮಾರಂಭ
ಶ್ರಮದ ಮೂಲಕ ಪಡೆದ ಪ್ರಶಸ್ತಿ ಶ್ರೇಷ್ಟ - ಸಿರಾಜುದ್ದೀನ್ ಸಖಾಫಿ
ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ತಾಯಂದಿರುಗಳ ಪಾತ್ರ ಹಿರಿದು - ಲತೀಫ್ ಸಖಾಫಿ
ಹಯಾತುಲ್ ಇಸ್ಲಾಂ ಕಮಿಟಿ ರಿ .ಜಟ್ಟಿಪಳ್ಳ ಬುಸ್ತಾನುಲ್ ಉಲೂಂ ಮದ್ರಸ ಇದರ ಪೇರೆಂಟ್ಸ್ ಮೀಟ್ ಹಾಗೂ ಸನ್ಮಾನ ಸಮಾರಂಭವು ಹಯಾತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಬಿ ಎಂ ರವರ ಅಧ್ಯಕ್ಷತೆಯಲ್ಲಿ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಎಸ್ ಜೆ ಎಂ ರಾಜ್ಯ ಮಟ್ಟದ ಮುಅಲ್ಲಿಂ ಅವಾರ್ಡ್ ಪಡೆದ,ಮುಅಲ್ಲಿಂ ಮೆಹರ್ಜಾನ್ ಮದ್ರಸ ಅಧ್ಯಾಪಕರ ಸ್ಪರ್ಧೆಯಲ್ಲಿ ರೇಂಜ್ ಮಟ್ಟದ ಹೈ ಝೋನ್ ವಿಭಾಗದ ಕಲಾ ಪ್ರತಿಭೆಯಾಗಿ ಹೊರಹೊಮ್ಮಿ, ಜಿಲ್ಲೆಯಿಂದ ರಾಜ್ಯಕ್ಕೆ ಆಯ್ಕೆಯಾಗಿ,ರಾಜ್ಯ ಹೈ ಝೋನ್ ವಿಭಾಗ ಮಲಯಾಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಊರಿನ ಕೀರ್ತಿಗೆ ಕಾರಣರಾದ ಬುಸ್ತಾನುಲ್ ಉಲೂಂ ಮದ್ರಸ ಸದರ್ ಉಸ್ತಾದ್ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ರವನ್ನು ಹಯಾತುಲ್ ಇಸ್ಲಾಂ ಕಮಿಟಿ ಹಾಗೂ ಊರ ರವರ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.ಕಾರ್ಯಕ್ರಮಗಳನ್ನು
ಗಾಂಧಿನಗರ ಮದ್ರಸ ಸದರ್ ಮುಅಲ್ಲಿಂ ಸಿರಾಜುದ್ದೀನ್ ಸಖಾಫಿ ಚಿಕ್ಕಮಗಳೂರು ಉದ್ಘಾಟಿಸಿ ಮಾತನಾಡಿ,ಲತೀಫ್ ಸಖಾಫಿಯವರ ನಿರಂತರ ಶ್ರಮ,ಚುರುಕು ಯಶಸ್ವಿಗೆ ದಾರಿಯಾಯಿತು.ಯಾವತ್ತೂ ಶ್ರಮದ ಮೂಲಕ ಪಡೆದ ಪ್ರಶಸ್ತಿ ಶ್ರೇಷ್ಟವಾದುದ್ದು,ಇನ್ನಷ್ಟು ಉತ್ಸಾಹದಿಂದ ಸೇವೆಗೈದು ಶೈಕ್ಷಣಿಕ ಕ್ರಾಂತಿ ಉಂಟುಮಾಡಲು ಸಾಧ್ಯವಾಗಲೆಂದು ಶುಭ ಹಾರೈಸಿದರು.ಇದೇ ಸಂಧಂರ್ಭ ತಮ್ಮ ಮದ್ರಸ ಅದ್ಯಾಪಕರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದ ಹಯಾತುಲ್ ಇಸ್ಲಾಂ ಕಮಿಟಿ ರಿ.ಜಟ್ಟಪಳ್ಳ ಇದರ ಕಾರ್ಯವೈಖರಿಗಳನ್ನು ಶ್ಲಾಘಿಸಿದರು.ಕಮಿಟಿ ಪ್ರಧಾನ ಕಾರ್ಯದರ್ಶಿ ಶರೀಫ್ ಸುದ್ದಿ ಸ್ವಾಗತಿಸಿ ಪ್ರಾಸ್ಥಾವಿಕ ಭಾಷಣಗೈದರು.ಕಾರ್ಯದರ್ಶಿ ಕಬೀರ್ ಜಟ್ಟಿಪಳ್ಳ ಸನ್ಮಾನ ಪತ್ರ ವಾಚಿಸಿದರು.ರಾಜ್ಯ ಮುಅಲ್ಲಿಂ ಮೆಹರ್ಜಾನ್ ಸ್ಪರ್ಧಾಕಾರ್ಯಕ್ರಮದಲ್ಲಿ ಸಾಧನೆಗೈದ ಗಾಂಧಿನಗರ ಮದ್ರಸ ಮುಅಲ್ಲಿಂ ಇರ್ಫಾನ್ ಸಅದಿ ಜೋಗಿಬೆಟ್ಟು ಹಾಗೂ ಬುಸ್ತಾನುಲ್ ಉಲೂಂ ಮದ್ರಸ ಜಟ್ಟಿಪಳ್ಳ ಮದ್ರಸ ಮುಅಲ್ಲಿಂ ಸಿರಾಜ್ ಸಅದಿ ಅಲೆಕ್ಕಾಡಿಯವರನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಅಬ್ದುಲ್ಲ ಮುಸ್ಲಿಯಾರ್ ಗೂನಡ್ಕ,ಕಮಿಟಿ ಗೌರವಾಧ್ಯಕ್ಷ ಅಬೂಬಕ್ಕರ್ ಕೆ ಎ ಜಟ್ಟಿಪಳ್ಳ, ಕೋಶಾಧಿಕಾರಿ ಎನ್ ಎ ಅಬ್ದುಲ್ಲ,ಸದಸ್ಯರುಗಳಾದ ತಾಜುದ್ದೀನ್,ಅಬ್ದುರ್ರಝಾಖ್,ಗಾಂಧಿನಗರ ಮುಅಲ್ಲಿಮರುಗಳಾದ ರಿಹಾನ್ ಸಅದಿ,ಶಿಹಾಬುದ್ದೀನ್ ಫಾಳಿಲಿ,ಸ್ಥಳೀಯ ಹಿರಿಯರಾದ ಸಿ ಎ ಅಬ್ದುಲ್ಲ,ಮೊಯಿದೀನ್,ಇಸ್ಮಾಯೀಲ್, ಮುಸ್ತಫ ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಜೊತೆಯಲ್ಲಿ ನಡೆದ ಪೇರೆಂಟ್ಸ್ ಮೀಟ್ ನಲ್ಲಿ ಹೆಚ್ಚಿನ ಸಂಖ್ಯೆಯ ತಾಯಂದಿರುಗಳು ಭಾಗವಹಿಸಿದರು.
ವಿಷಯ ಮಂಡನೆಗೈದ ಸದರ್ ಮುಅಲ್ಲಿಂ ಲತೀಫ್ ಸಖಾಫಿಯವರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ತಾಯಂದಿರ ಪಾತ್ರ ಹಿರಿದೆಂದರು. ಕಲಿತ ಧಾರ್ಮಿಕ ಚೌಕಟ್ಟುಗಳನ್ನು ಮಕ್ಕಳು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವ ಬಗ್ಗೆ ತಾಯಂದಿರುಗಳು ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆ ನೀಡಿದರು.ಮದ್ರಸ ಉಸ್ತುವಾರಿ ರಶೀದ್ ಜಟ್ಟಿಪಳ್ಳ ನಿರೂಪಿಸಿ ವಂದಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



