SSF ಬೆಳ್ತಂಗಡಿ ಡಿವಿಷನ್ ನಾಯಕರ ಸೆಕ್ಟರ್ ಭೇಟಿ.

Jul 28, 2025 - 09:31
SSF ಬೆಳ್ತಂಗಡಿ ಡಿವಿಷನ್ ನಾಯಕರ ಸೆಕ್ಟರ್ ಭೇಟಿ.

ಸಕ್ರೀಯತೆಗೆ ಮನಸ್ಸುಗಳನ್ನು ಪೋಣಿಸುವ ಎಂಬ ಧ್ಯೇಯ ವಾಕ್ಯದೊಂದಿಗೆ SSF ಬೆಳ್ತಂಗಡಿ ಡಿವಿಷನ್ ಸಮಿತಿಯು ಹಮ್ಮಿಕೊಂಡಿದ್ದ ಸೆಕ್ಟರ್ ಸಂಚಾರ ಕಾರ್ಯಕ್ರಮವು SSF ಬೆಳ್ತಂಗಡಿ ಸೆಕ್ಟರ್ ವ್ಯಾಪ್ತಿಯಲ್ಲಿ ದಿನಾಂಕ 27 ಜುಲೈ 2025 ರಂದು ನಾವೂರು ಮಸೀದಿ ವಠಾರದಲ್ಲಿ ನಡೆಯಿತು. 
ಧ್ವಜಾರೋಹಣವನ್ನು ಅಧ್ಯಕ್ಷರು ಹಾಗೂ ಡಿವಿಷನ್ ನಾಯಕರು ನೇರೆವೇರಿಸಿದರು. ದುವಾ ನೇತೃತ್ವ ಡಿವಿಷನ್ ಉಪಾಧ್ಯಕ್ಷರಾದ ಲತೀಫ್ ಅಹ್ಸನಿ ಮಾಡಿದರು ಹಾಗೂ ಸೆಕ್ಟರ್ ಅಧ್ಯಕ್ಷರಾದ ಹಾಫೀಲ್ ಬಾಸೀತ್ ಹಿಮಮಿ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಕಾರ್ಯಕ್ರಮವನ್ನು ಸೆಕ್ಟರ್ ಪ್ರ.ಕಾರ್ಯದರ್ಶಿ ಶಮೀರ್ ಲಾಯಿಲ ಸ್ವಾಗತಿಸಿದರು. ನಾವೂರು ಮಸೀದಿ ಖತೀಬರಾದ ಬಶೀರ್ ಸಅದಿ ಉಸ್ತಾದ್ ಇವರು  ಉದ್ಘಾಟಿಸಿದರು. ಡಿವಿಷನ್ ಪ್ರ.ಕಾರ್ಯದರ್ಶಿ ನಾಸೀರ್ ಪಡ್ಡಂದಡ್ಕ ತರಗತಿ ಮಂಡನೆ ಮಾಡಿದರು. ಡಿವಿಷನ್  ಕ್ಯಾಂಪಸ್ ಕನ್ವೀನರ್ ರಾಝೀಕ್ ಮಡಂತ್ಯಾರ್ ಸೆಕ್ಟರ್ ಹಾಗೂ ಯುನಿಟ್ ಬಗ್ಗೆ ಅವಲೋಕನ ನಡೆಸಿದರು. SSF ಬೆಳ್ತಂಗಡಿ  ಡಿವಿಷನ್ ಅಧ್ಯಕ್ಷರಾದ ಇಸಾಕ್ ಅಳದಂಗಡಿಯವರು ಉಪಸ್ಥಿತರಿದ್ದರು ಹಾಗೂ ಡಿವಿಷನ್ ನಾಯಕರು ,KMJ ಮತ್ತು SYS ನಾಯಕರು, ಸೆಕ್ಟರ್ ವ್ಯಾಪ್ತಿಯ SSF ಯೂನಿಟ್ ಕ್ಯಾಬಿನೆಟ್ ಸದಸ್ಯರು ಉಪಸ್ಥಿತರಿದ್ದರು.
ಸೆಕ್ಟರ್ GD ಕಾರ್ಯದರ್ಶಿಗಳಾದ  ಫೈರೋಝ್ ಧನ್ಯವಾದ ಮಾಡಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0