ಮುಹಿಮ್ಮಾತ್ ಅಹ್ದಲ್ ಉರೂಸ್; 300 ಮೊಹಲ್ಲಾಗಳಲ್ಲಿ ಅನುಸ್ಮರಣಾ ಸಂಗಮಗಳು: ಉದ್ಘಾಟನೆ 6ರಂದು ಮದೀನಾ ಮಖ್ದೂಮಿನಲ್ಲಿ

Nov 3, 2026 - 14:25
ಮುಹಿಮ್ಮಾತ್ ಅಹ್ದಲ್ ಉರೂಸ್; 300 ಮೊಹಲ್ಲಾಗಳಲ್ಲಿ ಅನುಸ್ಮರಣಾ ಸಂಗಮಗಳು: ಉದ್ಘಾಟನೆ 6ರಂದು ಮದೀನಾ ಮಖ್ದೂಮಿನಲ್ಲಿ

ಪುತ್ತಿಗೆ: 2027ರ ಜನವರಿ 8, 9 ಮತ್ತು 10ರಂದು ಮುಹಿಮ್ಮಾತ್‌ನಲ್ಲಿ ನಡೆಯಲಿರುವ ಸಯ್ಯಿದ್ ತ್ವಾಹಿರುಲ್ ಅಹ್ದಲ್ ಅವರ 21ನೇ ಉರೂಸ್ ಹಾಗೂ ಮುಹಿಮ್ಮಾತ್ ಸನದ್ ದಾನ ಸಮ್ಮೇಳನದ ಪ್ರಚಾರಾರ್ಥವಾಗಿ ಆಯೋಜಿಸಲಾಗುತ್ತಿರುವ ಮೊಹಲ್ಲಾ ಸಂಗಮಗಳ ಉದ್ಘಾಟನೆಯು ಈ ತಿಂಗಳ 6ರಂದು ಕಳತ್ತೂರು ಮದೀನಾ ಮಖ್ದೂಮಿನಲ್ಲಿ ನಡೆಯಲಿದೆ.

ಸಂಸ್ಥೆಯ ಕಾರ್ಯದರ್ಶಿ ಹಾಗೂ ಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷರಾದ ಸಯ್ಯಿದ್ ಮುನೀರುಲ್ ಅಹ್ದಲ್ ತಂಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸುಲೈಮಾನ್ ಸಖಾಫಿ ದೇಶಂಕುಳಂ ಅನುಸ್ಮರಣಾ ಭಾಷಣ ಮಾಡಲಿದ್ದಾರೆ. ಮೂಸ ಸಖಾಫಿ ಕಳತ್ತೂರು, ಉಮರ್ ಸಖಾಫಿ ಕೊಂಬೋಡು, ಮನ್ಶಾದ್ ಅಹ್ಸನಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0