ಮುಹಿಮ್ಮಾತ್ ಅಹ್ದಲ್ ಉರೂಸ್: ಬೆಂಗಳೂರು ಪ್ರಚಾರ ಸಭೆ ಇಂದು
ಬೆಂಗಳೂರು: ಈ ತಿಂಗಳ 28 ರಿಂದ 31 ರವರೆಗೆ ನಡೆಯಲಿರುವ ಸಯ್ಯಿದ್ ತಾಹಿರುಲ್ ಅಹ್ದಲ್ ಅವರ 20ನೇ ಉರೂಸ್ ಮತ್ತು ಮುಹಿಮ್ಮಾತ್ ಸನದ್ ದಾನ ಸಮ್ಮೇಳನದ ಅಂಗವಾಗಿ, ಮುಹಿಮ್ಮಾತ್ ಬೆಂಗಳೂರು ಸಮಿತಿಯು ಹಮ್ಮಿಕೊಂಡಿರುವ ಪ್ರಚಾರ ಸಭೆಯು ಇಂದು ರಾತ್ರಿ 10 ಗಂಟೆಗೆ ಅಲ್ಸೂರು ಮರ್ಕಜುಲ್ ಹುದಾ ಮಸೀದಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ರಾಫಿ ಹಿಮಮಿ ಕಾಮಿಲ್ ಸಖಾಫಿ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಸಯ್ಯಿದ್ ಶೌಕತ್ತಲಿ ಹಿಮಮಿ ಸಖಾಫಿ ಅವರು ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ. ಅಬ್ದುಲ್ ಖಾದರ್ ಹಾಜಿ ಬಳ್ಳೂರು, ಅನಸ್ ಸಿದ್ದೀಕಿ, ಇಸ್ಮಾಯಿಲ್ ಸಅದಿ ಕಿನ್ಯಾ, ಫಾರೂಕ್ ಅಮಾನಿ, ಇಬ್ರಾಹಿಂ ಸಖಾಫಿ ಪಯೋಟಾ, ಅಬ್ದುರಹಮಾನ್ ಹಾಜಿ ಅಲ್ಸೂರು, ಹಕೀಂ ಆರ್.ಟಿ ನಗರ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



