ತಲ್ಬಿಯತ್ ಮಂತ್ರಘೋಷಗಳೊಂದಿಗೆ ಮುಹಿಮ್ಮಾತ್ ಹಜ್ ಕ್ಯಾಂಪ್

Jan 30, 2026 - 11:26
ತಲ್ಬಿಯತ್ ಮಂತ್ರಘೋಷಗಳೊಂದಿಗೆ ಮುಹಿಮ್ಮಾತ್ ಹಜ್ ಕ್ಯಾಂಪ್

ಪುತ್ತಿಗೆ: ಮುಹಿಮ್ಮಾತ್ ಅಹ್ದಲ್ ಉರೂಸ್ ಮತ್ತು ಸನದ್ ದಾನ ಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿದ್ದ ಮುಹಿಮ್ಮಾತ್ ಹಜ್ ಕ್ಯಾಂಪ್ ಗಮನಸೆಳೆಯಿತು. ಸುಮಾರು ಐದು ನೂರು ಹಜ್ ಯಾತ್ರಿಕರಿಗಾಗಿ (ಮಹಿಳೆಯರು ಮತ್ತು ಪುರುಷರು) ಪ್ರತ್ಯೇಕ ಸೌಲಭ್ಯಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಈ ಕ್ಯಾಂಪ್‌ನಲ್ಲಿ ಪ್ರಾಯೋಗಿಕ ತರಗತಿಗಳೂ ನಡೆದವು.

ಮುಹಿಮ್ಮಾತ್ ಉಪಾಧ್ಯಕ್ಷರಾದ ಸಯ್ಯಿದ್ ಇಬ್ರಾಹಿಂ ಹಾದಿ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜನರಲ್ ಸೆಕ್ರೆಟರಿ ಬಿ.ಎಸ್. ಅಬ್ದುಲ್ಲಾ ಕುಂಞಿ ಫೈಜಿ ಉದ್ಘಾಟಿಸಿದರು. ಜನರಲ್ ಮ್ಯಾನೇಜರ್ ಉಮರ್ ಸಖಾಫಿ ಕರ್ನೂರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಬ್ದುಲ್ ಕರೀಂ ಸಖಾಫಿ ಇಡುಕ್ಕಿ ಅವರು ಹಜ್ ಕಲಿಕಾ ಶಿಬಿರದ ನೇತೃತ್ವ ವಹಿಸಿದ್ದರು. ಅಬ್ದುರ್ರಹ್ಮಾನ್ ಅಹ್ಸನಿ, ಹಸೈನಾರ್ ಫೈಜಿ, ಎಂ.ಪಿ. ಅಬ್ದುಲ್ಲಾ ಫೈಜಿ ನೆಕ್ರಜೆ, ಇಬ್ರಾಹಿಂ ಫೈಜಿ ಪುಳಿಕ್ಕೂರು, ಸಿ.ಎಂ. ಮೊಯ್ದು ಹಾಜಿ, ರಹ್ಮಾನಿಯ್ಯ ಖಾದರ್ ಹಾಜಿ, ಹಾಜಿ ಅಮೀರಲಿ ಚೂರಿ, ಉಮರ್ ಅನ್ನಡ್ಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0