ಮುಹಿಮ್ಮಾತ್ ಅಹ್ದಲ್ ಉರೂಸ್: ಧ್ವಜಾರೋಹಣದೊಂದಿಗೆ ಆಧ್ಯಾತ್ಮಿಕ ಸಂಗಮಕ್ಕೆ ಭವ್ಯ ಚಾಲನೆ

Jan 28, 2026 - 19:29
ಮುಹಿಮ್ಮಾತ್ ಅಹ್ದಲ್ ಉರೂಸ್: ಧ್ವಜಾರೋಹಣದೊಂದಿಗೆ ಆಧ್ಯಾತ್ಮಿಕ ಸಂಗಮಕ್ಕೆ ಭವ್ಯ ಚಾಲನೆ

ಕಾಸರಗೋಡು: ಮುಹಿಮ್ಮಾತ್ ಸಂಸ್ಥಾಪಕ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ 20ನೇ ಉರೂಸ್ ಮತ್ತು ಸನದ್ ದಾನ (ಪದವಿ ಪ್ರದಾನ) ಸಮ್ಮೇಳನಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಮುನ್ನಾ ದಿನ ನಡೆದ ಇಚ್ಚಿಲಂಕೋಡ್ ಮಖಾಂ ಝಿಯಾರತ್‌ಗೆ ಸಯ್ಯಿದ್ ಮುಹಮ್ಮದ್ ಮದನಿ ತಂಙಳ್ ಮೊಗ್ರಾಲ್ ನೇತೃತ್ವ ನೀಡಿದರು. ಮುಗು ರಸ್ತೆಯಿಂದ ಆರಂಭಗೊಂಡ ಘೋಷಯಾತ್ರೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು.

ಬಳಿಕ ನಡೆದ ಮಖಾಂ ಝಿಯಾರತ್‌ಗೆ ಸಯ್ಯಿದ್ ಅಬ್ದುಲ್ ಅಜೀಜ್ ಹೈದ್ರೂಸಿ ಮತ್ತು ಖತ್ಮಲ್ ಕುರಾನ್ ಮಜ್ಲಿಸ್‌ಗೆ ಸಯ್ಯಿದ್ ಮುಹಮ್ಮದ್ ಇಬ್ರಾಹಿಂ ಪೂಕುಂಞಿ ತಂಙಳ್ ಕಲ್ಲಕಟ್ಟ ನೇತೃತ್ವ ನೀಡಿದರು. ಉದ್ಘಾಟನಾ ಸಮಾರಂಭವು ಸಯ್ಯಿದ್ ಇಬ್ರಾಹಿಂ ಹಾದಿ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಎ.ಪಿ. ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕ್ಕೋತ್ ಉದ್ಘಾಟಿಸಿದರು. ಸಯ್ಯಿದ್ ಫಕ್ರುದ್ದೀನ್ ಹದ್ದಾದ್ ತಂಙಳ್ ಪ್ರಾರ್ಥನೆ ನೆರವೇರಿಸಿದರು.

ನಾಳೆ ಬೆಳಿಗ್ಗೆ 10 ಗಂಟೆಗೆ ನಡೆಯುವ ಹಜ್ ಅಧ್ಯಯನ ಶಿಬಿರಕ್ಕೆ ಅಬ್ದುಲ್ ಕರೀಂ ಸಖಾಫಿ ಇಡುಕ್ಕಿ ನೇತೃತ್ವ ನೀಡಲಿದ್ದಾರೆ. ಮಧ್ಯಾಹ್ನ ಎರಡಕ್ಕೆ ತಮಿಳು ಪ್ರತಿನಿಧಿ ಸಮ್ಮೇಳನವನ್ನು ಸಯ್ಯಿದ್ ಹಬೀಬ್ ತಂಙಳ್ ಅವರ ಅಧ್ಯಕ್ಷತೆಯಲ್ಲಿ ಎಸ್.ಎಸ್.ಎಫ್ ರಾಷ್ಟ್ರೀಯ ಕಾರ್ಯದರ್ಶಿ ಕಮಾಲುದ್ದೀನ್ ಸಖಾಫಿ ಚೆನ್ನೈ ಉದ್ಘಾಟಿಸಲಿದ್ದಾರೆ. ಸಂಜೆ 6.30ಕ್ಕೆ ನಡೆಯುವ ಸ್ವಲಾತ್ ಮಜ್ಲಿಸ್ ಅನ್ನು ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ಉದ್ಘಾಟಿಸಲಿದ್ದಾರೆ. ರಾಫಿ ಹಿಮಮಿ ಕಾಮಿಲ್ ಸಖಾಫಿ ಧಾರ್ಮಿಕ ಪ್ರವಚನ ನೀಡಲಿದ್ದು, ಸಯ್ಯಿದ್ ಶಹೀರ್ ಅಲ್ ಬುಖಾರಿ ಮಳ್ಹರ್ ಸಮಾರೋಪ ಪ್ರಾರ್ಥನೆ ನಡೆಸಲಿದ್ದಾರೆ.

ಶುಕ್ರವಾರ ಮಧ್ಯಾಹ್ನ ಎರಡಕ್ಕೆ ರಿಫಾಯಿ ರಾತೀಬ್ ಮತ್ತು ಸಂಜೆ ನಾಲ್ಕಕ್ಕೆ ಮುಹಿಯುದ್ದೀನ್ ರಾತೀಬ್ ನಡೆಯಲಿದೆ. ಸಯ್ಯಿದ್ ಪೂಕುಂಞಿ ತಂಙಳ್ ಆದೂರು, ಸಯ್ಯಿದ್ ಸೈನುಲ್ ಆಬಿದೀನ್ ಮುತ್ತು ತಂಙಳ್ ಕಣ್ಣವಂ, ಅಲ್ಲಾಮಾ ಖಿಯಾಮ್ ರಜಾ ಖಾದಿರಿ ಅಜ್ಮೀರ್ ಮತ್ತು ಹಮ್ಮಾದ್ ಚಿಸ್ತಿ ಅಜ್ಮೀರ್ ನೇತೃತ್ವ ನೀಡಲಿದ್ದಾರೆ. ರಾತ್ರಿ ಏಳು ಗಂಟೆಗೆ ನೌಫಲ್ ಸಖಾಫಿ ಕಳಸ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಸಮಾರೋಪ ಪ್ರಾರ್ಥನೆಗೆ ಸಯ್ಯಿದ್ ಪಿ.ಎಸ್. ಆಟಕ್ಕೋಯ ತಂಙಳ್ ಬಾಹಸನ್ ಪಂಜಿಕಲ್ ನೇತೃತ್ವ ನೀಡಲಿದ್ದಾರೆ.

ಸಮಾಪನ ದಿನವಾದ ಶನಿವಾರ ಬೆಳಿಗ್ಗೆ ಕುರಾನ್ ಅಧ್ಯಯನ ಪೂರ್ಣಗೊಳಿಸಿದ ಹಾಫಿಜ್‌ಗಳಿಗೆ ಮತ್ತು ಹಿಮಮಿ ಪಂಡಿತರಿಗೆ ಸನದ್ ಮತ್ತು ಗೌರವ ವಸ್ತ್ರಗಳನ್ನು ವಿತರಿಸಲಾಗುವುದು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಮುಹಮ್ಮದಲಿ ಸಖಾಫಿ ತೃಕ್ಕರಿಪುರ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 9.30ಕ್ಕೆ ಮೌಲಿದ್ ಮಜ್ಲಿಸ್‌ಗೆ ಸಯ್ಯಿದ್ ಜಲಾಲುದ್ದೀನ್ ಅಲ್ಬುಖಾರಿ ಸಅದಿ ಮತ್ತು ಸಯ್ಯಿದ್ ಸ್ವಲಿಹ್ ತುರಾಬ್ ತಂಙಳ್ ನೇತೃತ್ವ ನೀಡಲಿದ್ದಾರೆ. ಬೆಳಿಗ್ಗೆ 11ಕ್ಕೆ ಖತ್ತಂ ದುಆ ಮಜ್ಲಿಸ್‌ಗೆ ಸ್ವಲಿಹ್ ಸಅದಿ ತಳಿಪರಂಬ ನೇತೃತ್ವ ನೀಡಲಿದ್ದಾರೆ.

ಮಧ್ಯಾಹ್ನ ಎರಡಕ್ಕೆ ಸಾಂಸ್ಕೃತಿಕ ಸಮ್ಮೇಳನವನ್ನು ಎ.ಕೆ.ಎಂ. ಅಶ್ರಫ್ ಎಂ.ಎಲ್.ಎ ಉದ್ಘಾಟಿಸಲಿದ್ದಾರೆ. ಕೂಟಂಪಾರ ಅಬ್ದುರ್ರಹ್ಮಾನ್ ದಾರಿಮಿ ಮತ್ತು ಸಿ.ಎನ್. ಜಹ್ಫರ್ ವಿಷಯ ಮಂಡನೆ ಮಾಡಲಿದ್ದಾರೆ. ಎನ್.ಎ. ನೆಲ್ಲಿಕುನ್ನು ಎಂ.ಎ.ಎಲ್, ಅಡ್ವ. ಸಿ.ಎಚ್. ಕುಂಜಂಬು ಎಂ.ಎಲ್.ಎ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ, ಜಿಲ್ಲಾ ಪಂಚಾಯತ್ ಸದಸ್ಯರಾದ ಅಜೀಜ್ ಕಳತ್ತೂರು ಮತ್ತು ಸೋಮಶೇಖರ್ ಮೊದಲಾದವರು ಪ್ರಸಂಗಿಸಲಿದ್ದಾರೆ.

ಸಂಜೆ 6.30ಕ್ಕೆ ನಡೆಯುವ ಸನದ್ ದಾನ ಅಹ್ದಲಿಯ್ಯಾ ಆತ್ಮೀಯ ಸಮ್ಮೇಳನವು ಸಯ್ಯಿದ್ ಅಲಿ ಬಾಫಕಿ ತಂಙಳ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಗಲಿದೆ. ಮುಹಿಮ್ಮಾತ್ ಕಾರ್ಯದರ್ಶಿ ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಬಿ.ಎಸ್. ಅಬ್ದುಲ್ಲಾ ಕುಂಞಿ ಫೈಸಿ ಅವರ ಅಧ್ಯಕ್ಷತೆಯಲ್ಲಿ ಸಮಸ್ತ ಅಧ್ಯಕ್ಷ ರಈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಸನದ್ ದಾನ ನೆರವೇರಿಸಲಿದ್ದಾರೆ. ಸಮಸ್ತ ಉಪಾಧ್ಯಕ್ಷ ಸಯ್ಯಿದ್ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಳ್ ಸನದ್ ದಾನ ಪ್ರಭಾಷಣ ಮಾಡಲಿದ್ದಾರೆ. ಖಾಜಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಕೂಟಂಪಾರ ಅಬ್ದುರ್ರಹ್ಮಾನ್ ದಾರಿಮಿ, ಸಯ್ಯಿದ್ ಹಸನ್ ಅಹ್ದಲ್ ತಂಙಳ್, ಸಿ. ಮುಹಮ್ಮದ್ ಫೈಸಿ, ವಿ.ಪಿ.ಎಂ. ಫೈಸಿ ವಿಲ್ಯಪಳ್ಳಿ, ಕೆ.ಪಿ. ಅಬೂಬಕ್ಕರ್ ಮುಸ್ಲಿಯಾರ್, ಅಬ್ದುಲ್ ಹಕೀಮ್ ಅಝ್ಹರಿ, ಮುಹಮ್ಮದ್ ಫಾಸಿಲ್ ರಜ್ವಿ ಕಾವಲ್ ಕಟ್ಟೆ ಮೊದಲಾದವರು ಪ್ರಸಂಗಿಸಲಿದ್ದಾರೆ. ಸಾವಿರಾರು ಜನರಿಗೆ ತಬರುಕ್ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಈ ವರ್ಷ ಮುಹಿಮ್ಮಾತ್‌ನಿಂದ 68 ಹಿಮಮಿಗಳು ಮತ್ತು 11 ಹಾಫಿಜ್‌ಗಳು ಶಿಕ್ಷಣ ಪೂರೈಸಿ ಸನದ್ ಸ್ವೀಕರಿಸುತ್ತಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0