ವಿಟ್ಲ | ಚೂರಿ ಇರಿತ; ಇಬ್ಬರು ವಿದ್ಯಾರ್ಥಿಗಳಿಗೆ ಗಾಯ

Feb 11, 2026 - 17:09
ವಿಟ್ಲ | ಚೂರಿ ಇರಿತ; ಇಬ್ಬರು ವಿದ್ಯಾರ್ಥಿಗಳಿಗೆ ಗಾಯ

ವಿಟ್ಲ: ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದಲ್ಲಿ ಇಬ್ಬರು ಐಟಿಐ ವಿದ್ಯಾರ್ಥಿಗಳು ಚೂರಿ ಇರಿತಕ್ಕೊಳಗಾಗಿ ಗಾಯಗೊಂಡ ವಿಟ್ಲ ಐಟಿಐಯಲ್ಲಿ ನಡೆದಿದೆ.

ಚೂರಿ ಇರಿತದಿಂದ ಮಹಮ್ಮದ್ ರಿಯಾನ್ (18) ಮತ್ತು ಯಜ್ಞೇಶ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಥಮ ವರ್ಷದ ಎಲೆಕ್ಟ್ರಿಷಿಯನ್ ಕೋರ್ಸ್ ಕಲಿಯುತ್ತಿರುವ ರಿಯಾನ್ ಹಾಗೂ ವಿಟ್ಲ ನಿವಾಸಿ ಹೇಮಂತ್ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ತಿಳಿದು ಬಂದಿದೆ. ಹೇಮಂತ್ ಚೂರಿ ತಂದು ರಿಯಾನ್‌ಗೆ ಇರಿದಿದ್ದಾನೆ ಎನ್ನಲಾಗಿದೆ. ಈ ವೇಳೆ ತಡೆಯಲು ಮುಂದಾದ ಯಜ್ಞೇಶ್‌ಗೂ ಗಾಯವಾಗಿದೆ. ಮಾಹಿತಿ ತಿಳಿದ ತಕ್ಷಣ ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆರೋಪಿ ಹೇಮಂತ್ ನನ್ನು ವಶಕ್ಕೆ ಪಡೆದಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0