ಯೋಗ್ಯತಾ ಪರವಾನಗಿ ಇಲ್ಲದೆ ಎಂಟು ಬಾರಿ ವಿಮಾನ ಹಾರಾಟ: ಏರ್ ಇಂಡಿಯಾಕ್ಕೆ 1 ಕೋಟಿ ರೂ.ದಂಡ!

Feb 16, 2026 - 10:54
ಯೋಗ್ಯತಾ ಪರವಾನಗಿ ಇಲ್ಲದೆ ಎಂಟು ಬಾರಿ ವಿಮಾನ ಹಾರಾಟ: ಏರ್ ಇಂಡಿಯಾಕ್ಕೆ 1 ಕೋಟಿ ರೂ.ದಂಡ!

ನವದೆಹಲಿ: ವಿಮಾನಯಾನ ಯೋಗ್ಯತಾ ಪರವಾನಗಿ ಇಲ್ಲದೆ ಕಳೆದ ವರ್ಷ ಎಂಟು ಬಾರಿ ಏರ್ ಬಸ್ A320 ವಿಮಾನವನ್ನು ಚಲಾಯಿಸಿದ್ದಕ್ಕಾಗಿ ಏರ್ ಇಂಡಿಯಾಕ್ಕೆ 110,350 ಯುಎಸ್ ಡಾಲರ್ ಸುಮಾರು 1 ಕೋಟಿ ರೂ. ದಂಡವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA)ವಿಧಿಸಿದೆ.

ಕಳೆದ ವರ್ಷ ಡಿಸೆಂಬರ್ 2 ರಂದು ಏರ್ ಇಂಡಿಯಾ ಕನಿಷ್ಠ ಎಂಟು ಮಾರ್ಗಗಳಲ್ಲಿ ಅಗತ್ಯವಾದ ಯೋಗ್ಯತಾ ಪರವಾನಗಿ ಇಲ್ಲದೆ A320 ನಿಯೋ ವಿಮಾನವನ್ನು ಚಲಾಯಿಸಿದ ಘಟನೆಯ ಬಗ್ಗೆ DGCA ತನಿಖೆ ನಡೆಸುತ್ತಿದೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ಏರ್ ಇಂಡಿಯಾಕ್ಕೆ 1 ಕೋಟಿ ರೂಪಾಯಿ ದಂಡ ವಿಧಿಸಿದೆ ಎಂದು ಮೂಲಗಳು ತಿಳಿಸಿವೆ.

ಏರ್ ಇಂಡಿಯಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 2025ರಲ್ಲಿ ಸ್ವಯಂ ಪ್ರೇರಣೆಯಿಂದ ವರದಿಯಾದ ಘಟನೆಗೆ ಸಂಬಂಧಿಸಿದಂತೆ ಡಿಜಿಸಿಎ ಆದೇಶವನ್ನು ಸ್ವೀಕರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಎಲ್ಲಾ ಅಂತರಗಳನ್ನು ತೃಪ್ತಿಕರವಾಗಿ ಪರಿಹರಿಸಲಾಗಿದೆ ಮತ್ತು ಪ್ರಾಧಿಕಾರದೊಂದಿಗೆ ಹಂಚಿಕೊಳ್ಳಲಾಗಿದೆ. ಕಾರ್ಯಾಚರಣೆಯ ಸಮಗ್ರತೆ ಮತ್ತು ಸುರಕ್ಷತೆಯ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವ ಬದ್ದತೆಯಲ್ಲಿ ಏರ್ ಇಂಡಿಯಾ ಅಚಲವಾಗಿದೆ ಎಂದು ತಿಳಿಸಿದೆ.

ಎಂಟು ಮಾರ್ಗಗಳಲ್ಲಿ ಯೋಗ್ಯತಾ ಪರವಾನಗಿ ಇಲ್ಲದೆ (ARC) A320 ವಿಮಾನದ ಹಾರಾಟದ ಕುರಿತು ನವೆಂಬರ್ 26, 2025 ರಂದು ಏರ್‌ಲೈನ್ DGCA ಗೆ ಮಾಹಿತಿ ನೀಡಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0