ಇಸ್ರೇಲ್ ಪರ ಬೇಹುಗಾರಿಕೆ ಆರೋಪ: ಇರಾನ್ ನಲ್ಲಿ ವಿದೇಶಿ ಪ್ರಜೆ ಬಂಧನ
ಟೆಹ್ರಾನ್: ಇಸ್ರೇಲ್ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಇರಾನ್ ನಲ್ಲಿ ವಿದೇಶಿ ಪ್ರಜೆಯೊಬ್ಬನನ್ನು ಬಂಧನ ಮಾಡಿರುವ ಬಗ್ಗೆ ವರದಿಯಾಗಿದೆ. ಇರಾನ್ ನಲ್ಲಿ ಆಡಳಿತದ ವಿರುದ್ಧ ಪ್ರತಿಭಟನೆಗಳು ತೀವ್ರವಾಗುತ್ತಿರುವ ವೇಳೆಯಲ್ಲೇ ಈ ಬೆಳವಣಿಗೆ ನಡೆದಿದೆ. ದೊಡ್ಡ ತೊಂದರೆಯಲ್ಲಿದೆ ಇರಾನ್ ನಾದ್ಯಂತ ಪ್ರತಿಭಟನೆಗಳು ತೀವ್ರವಾಗುತ್ತಿದ್ದಂತೆ ಇರಾನ್ ದೊಡ್ಡ ತೊಂದರೆಯಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಮಾರಕ ಬಲಪ್ರಯೋಗದ ವಿರುದ್ಧ ಇರಾನ್ ಗೆ ಎಚ್ಚರಿಕೆ ನೀಡಿದೆ.
"ಇರಾನ್ ದೊಡ್ಡ ತೊಂದರೆಯಲ್ಲಿದೆ. ಕೆಲವು ವಾರಗಳ ಹಿಂದೆ ನಿಜವಾಗಿಯೂ ಸಾಧ್ಯ ಎಂದು ಯಾರೂ ಭಾವಿಸದ ಕೆಲವು ನಗರಗಳನ್ನು ಜನರು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ನನಗೆ ತೋರುತ್ತದೆ" ಎಂದು ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಖಮೇನಿ ಹೇಳಿದ್ದೇನು?
ಯಾವುದೇ ಕಾರಣಕ್ಕೂ ಆಡಳಿತ "ಹಿಂದೆ ಸರಿಯುವುದಿಲ್ಲ" ಎಂದು ಅಯತೊಲ್ಲಾ ಅಲಿ ಖಮೇನಿ ಹೇಳಿದ್ದಾರೆ. ಪ್ರತಿಭಟನಾಕಾರರು ಅಮೆರಿಕವನ್ನು ಮೆಚ್ಚಿಸುವ ಉದ್ದೇಶದಿಂದ ವಿಧ್ವಂಸಕ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳು ಇಸ್ರೇಲ್ ಮತ್ತು ಅಮೆರಿಕ ಅಶಾಂತಿಯನ್ನು ಪ್ರಚೋದಿಸುತ್ತಿದ್ದಾರೆ ಎಂದು ಪದೇ ಪದೇ ದೂಷಿಸಿದ್ದಾರೆ.
40ಕ್ಕೂ ಹೆಚ್ಚು ಸಾವು
ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ತುಳುಕುತ್ತಿವೆ. ತುರ್ತು ವಾರ್ಡ್‌ಗಳು ಗಾಯಗೊಂಡ ಪ್ರತಿಭಟನಾಕಾರರು ಮತ್ತುಮೃತ ದೇಹಗಳಿಂದ ತುಂಬಿವೆ ಎಂದು ವೈದ್ಯರು ಮತ್ತು ದಾದಿಯರು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಡಿಸೆಂಬರ್ ಅಂತ್ಯದಲ್ಲಿ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಅನೇಕ ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ವರದಿ ಮಾಡಿವೆ. ನಾಲ್ಕು ದಿನಗಳ ಅವಧಿಯಲ್ಲಿ ಕನಿಷ್ಠ 28 ಸಾವುಗಳನ್ನು ಅಮ್ಮೆಸ್ಟಿ ಇಂಟರ್‌ನ್ಯಾಷನಲ್ ದೃಢಪಡಿಸಿದರೆ, ಇತರ ಮೇಲ್ವಿಚಾರಣಾ ಗುಂಪುಗಳು ಸಾವಿನ ಸಂಖ್ಯೆ 40 ಮೀರಿದೆ ಎಂದು ಅಂದಾಜಿಸಿವೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



