ಜಪಾನ್ ಕರಾವಳಿಯಲ್ಲಿ 6.7 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ
ಜಪಾನ್: ಭಾನುವಾರ ಸಂಜೆ ಜಪಾನ್‌ನ ಉತ್ತರ ಕರಾವಳಿಯ ಬಳಿ ಭಾರೀ ಭೂಕಂಪ ಸಂಭವಿಸಿದ್ದು, ಇವಾಟೆ ಪ್ರಿಫೆಕ್ಚರ್‌ನಾದ್ಯಂತ ಕಟ್ಟಡಗಳು ಕಂಪಿಸಿದವು. ಜಪಾನ್ ಹವಾಮಾನ ಇಲಾಖೆಯ ವರದಿ ಪ್ರಕಾರ, ರಿಕ್ಟರ್ ಮಾಪಕದಲ್ಲಿ 6.7 ತೀವ್ರತೆಯ ಈ ಭೂಕಂಪವು ಸ್ಥಳೀಯ ಸಮಯ ಸಂಜೆ 5:03ಕ್ಕೆ ಸಂಭವಿಸಿದೆ. ಭೂಕಂಪದ ಕೇಂದ್ರ ಬಿಂದು ಸಂರಿಕು ಕರಾವಳಿಯ ಪೆಸಿಫಿಕ್ ಸಮುದ್ರ ಭಾಗದಲ್ಲಿ, ಭೂಮಿ ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ.
ಜಪಾನ್ ಹವಾಮಾನ ಇಲಾಖೆ ಒಂದು ಮೀಟರ್ (ಮೂರು ಅಡಿ) ಎತ್ತರದ ಸುನಾಮಿ ಉಂಟಾಗುವ ಸಾಧ್ಯತೆ ಇರುವುದಾಗಿ ಎಚ್ಚರಿಕೆ ಪ್ರಕಟಿಸಿದೆ. ಇವಾಟೆ ಪ್ರಾಂತ್ಯದ ಕೆಲವು ಭಾಗಗಳಲ್ಲಿ ಭೂಕಂಪದ ತೀವ್ರತೆ 4 ರಷ್ಟಾಗಿ ದಾಖಲಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



