ಮದ್ರಸಾ ಪಬ್ಲಿಕ್ ಪರೀಕ್ಷೆ: ಮರು ಮೌಲ್ಯಮಾಪನದಲ್ಲಿ ಹಫ್ಸಾ ನಾಹಿದ್'ಗೆ 99% ಅಂಕ

Apr 9, 2025 - 10:23
ಮದ್ರಸಾ ಪಬ್ಲಿಕ್ ಪರೀಕ್ಷೆ: ಮರು ಮೌಲ್ಯಮಾಪನದಲ್ಲಿ ಹಫ್ಸಾ ನಾಹಿದ್'ಗೆ 99% ಅಂಕ

ಉಡುಪಿ: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಉಡುಪಿ ರೇಂಜ್ ವ್ಯಾಪ್ತಿಯ ಹೂಡೆ ದಾರುಸ್ಸಲಾಮ್ ಮದ್ರಸಾದ ಏಳು ಮತ್ತು ಐದನೆಯ ತರಗತಿಯ ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. 

ಏಳನೆಯ ತರಗತಿಯ ಹಫ್ಸಾ ನಾಹಿದ್ ತಝ್ಕಿಯಾದಲ್ಲಿ 100 ರಲ್ಲಿ 94 ಅಂಕ ಪಡೆದರೆ ಉಳಿದ ಎಲ್ಲಾ ವಿಷಯಗಳಲ್ಲಿ ನೂರಕ್ಕೆ ನೂರು ಪಡೆದು 600 ರಲ್ಲಿ 594 ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಇವರು ಮರ್ಹೂಮ್ ಉಸ್ತಾದ್ ಆಸಿಫ್ ಖಾದರ್ ಬಾಷಾ ಮತ್ತು ನದೀಲಾ ಝರೀನ್ ದಂಪತಿಗಳ ಪುತ್ರಿ. 

ಐದನೆಯ ತರಗತಿಯ ಅಖ್ಸಾ ಫಾತಿಮಾಳಿಗೆ ಮರು ಮೌಲ್ಯಮಾಪನದಲ್ಲಿ ತಾರೀಖ್ ನಲ್ಲಿ 10 ಮತ್ತು ಫಿಖ್ಹ್ ನಲ್ಲಿ 9 ಅಂಕಗಳು ಹೆಚ್ಚುವರಿಯಾಗಿ ಲಭಿಸಿದ್ದು, ಒಟ್ಟು 600 ರಲ್ಲಿ 534 (89% ) ಅಂಕ ಪಡೆದು ಉಡುಪಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರು ದಾರುಸ್ಸಲಾಮ್ ಎಜುಕೇಶನ್ ಸೊಸೈಟಿ ಹೂಡೆ ಇದರ ಅಧ್ಯಕ್ಷರಾದ ಅಶ್ರಫ್.ಜಿ ತೋನ್ಸೆ ಮತ್ತು  ರೌಳತ್ ರವರ ಪುತ್ರಿ. ವಿದ್ಯಾರ್ಥಿಗಳ‌ ಸಾಧನೆಗೆ ದಾರುಸ್ಸಲಾಮ್ ಎಜುಕೇಶನ್ ಸೊಸೈಟಿ ಹೂಡೆ ಸಮಿತಿಯು ಅಭಿನಂದನೆಗಳನ್ನು ಸಲ್ಲಿಸಿದೆ.

What's Your Reaction?

Like Like 2
Dislike Dislike 0
Love Love 2
Funny Funny 0
Angry Angry 0
Sad Sad 0
Wow Wow 0