ಯಲ್ಲಾಪುರ ಸಮೀಪ ಭೀಕರ ರಸ್ತೆ ಅಪಘಾತ : ಮೂವರು ಸಾವು – ಏಳು ಪ್ರಯಾಣಿಕರು ಗಾಯಾಳು

Aug 16, 2025 - 09:10
ಯಲ್ಲಾಪುರ ಸಮೀಪ ಭೀಕರ ರಸ್ತೆ ಅಪಘಾತ : ಮೂವರು ಸಾವು – ಏಳು ಪ್ರಯಾಣಿಕರು ಗಾಯಾಳು

ಕಾರವಾರ : ಸರ್ಕಾರಿ ಬಸ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮಹಿಳೆಯರು ಸೇರಿ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಯಲ್ಲಾಪುರ ತಾಲೂಕಿನ ಮಾವಳ್ಳಿ ಕ್ರಾಸ್ ಬಳಿ ಬೆಳಗಿನ ಜಾವ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಸಮೀಪೆ ಗುಳೆದಗುಡ್ಡ ಗ್ರಾಮದವರು ಎಂದು ತಿಳಿದು ಬಂದಿದೆ. ನಿಲವ್ವ ಹರದೊಳ್ಳಿ (40),ಜಾಲಿಹಾಳ ಗ್ರಾಮದ ಗಿರಿಜವ್ವ ಬೂದನ್ನವರ (30) ಹಾಗೂ ಮತ್ತೊಬ್ಬ ಪ್ರಯಾಣಿಕ 45 ವರ್ಷದ ವ್ಯಕ್ತಿ ಯಾಗಿದ್ದಾನೆ. ಮಕ್ಕಳು ಸಹಿತ 7 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ‌. ಇವರು ಸಹ ಬಾಗಲಕೋಟೆ ಮೂಲದವರು. ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ‌ .

ಹೆದ್ದಾರಿ ಪಕ್ಕ ಕೇರಳ ಮೂಲದ ಲಾರಿ ಕೆಟ್ಟು ನಿಂತಿತ್ತು‌. ಮಳೆ ಹಾಗೂ ಮಂಜಿನಲ್ಲಿ ನಿಂತಿದ್ದ‌ ಲಾರಿ ಸರ್ಕಾರಿ ಬಸ್ ಚಾಲಕನಿಗೆ ಕಾಣದೆ ಹೋದ ಪರಿಣಾಮ ಅಪಘಾತವಾಗಿದೆ. ಬಸ್ ಚಾಲಕ ಯಮುನಪ್ಪನ ಮೇಲೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0