ಯಲಬುರ್ಗಾ ಪಟ್ಟಣಕ್ಕೆ ಬೇಕಿದೆ ಸಾಹಿತ್ಯ ಭವನ ಮತ್ತು ಕೇಂದ್ರೀಯ ಗ್ರಂಥಾಲಯ.

Aug 11, 2025 - 12:39
ಯಲಬುರ್ಗಾ ಪಟ್ಟಣಕ್ಕೆ ಬೇಕಿದೆ ಸಾಹಿತ್ಯ ಭವನ ಮತ್ತು  ಕೇಂದ್ರೀಯ ಗ್ರಂಥಾಲಯ.

ಕೋಟಿ ಕೋಟಿ ವೆಚ್ಚದ ಮೂಲ ಸೌಕರ್ಯಗಳಗೊಂಡ ಕಟ್ಟಡಗಳು, ರಸ್ತೆಗಳು, ಶಾಲಾ ಕಾಲೇಜುಗಳು, ಮತ್ತು   ಕೆರೆಗಳು  ಇನ್ನಷ್ಟು ಅಭಿವೃದ್ಧಿ ಕಾರ್ಯಗಳು  ನಮ್ಮ ತಾಲೂಕುನಿಂದ   ಕರ್ನಾಟಕಕ್ಕೆ ಮಾದರಿಯಾಗಿದ್ದು ಶ್ಲಾಘನೀಯ.
ಇದೊಂದು  ಸದಾ ಅಭಿವೃದ್ಧಿ ಮಂತ್ರ ಜಪಿಸುವ ಕಾರ್ಯವಾಗಿದೆ.
ಆದರೆ... ಸದ್ಯ ಪಟಟ್ಟಕ್ಕೆ  ಶೈಕ್ಷಣಿಕವಾಗಿ , ಸಾಹಿತ್ಯಿಕವಾಗಿ ರಂಗಾಯಣ ಮಾದರಿಯ ಸಾಹಿತ್ಯ ಭವನ‌ವೊಂದು ಮತ್ತು  ದೆಹಲಿ , ಬೆಂಗಳೂರು ಮಾದರಿಯ ಕೇಂದ್ರ ಗ್ರಂಥಾಲಯ‌ ಇಲ್ಲದಿರುವುದು ಯಲಬುರ್ಗಾದ ತಾಲೂಕಿನ ಒಟ್ಟು ಆಡಳಿತದ ವ್ಯವಸ್ಥೆಯಲ್ಲಿ ಇಂತಹ ಎರಡು ಕಟ್ಟಡಗಳು 
ನಮ್ಮ ಪಟ್ಟಣದಲ್ಲಿ ಇಲ್ಲದೇರುವುದು ವಿಪರ್ಯಾಸ.
ವಿವಿಧ ಹಳ್ಳಿ , ತಾಲೂಕುಗಳಿಂದ  ಪಿಯುಸಿ , ಪದವಿ , ಸ್ನಾತಕೋತ್ತರ ಮತ್ತು ಬಿ ಈಡಿ ಅಧ್ಯಯನಕ್ಕೆಂದು ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೆ  ಈಗ ಯಲಬುರ್ಗಾ ಪಟ್ಟಣಕ್ಕೆ ಬರುತ್ತಿದ್ದಾರೆ ಜೋತೆಗೆ ಅನೇಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ತಮ್ಮ ಕನಸಿನ‌ ನೌಕರಿಯನ್ನು  ನನಸಾಗಿಸಲು ಅನೇಕ ಯುವಕರು ಧಾರವಾಡ , ವಿಜಯಾಪುರ ಮತ್ತು  ಬೆಂಗಳೂರಿನಂತ ಪಟ್ಟಣಗಳಿಗೆ ವಲಸೆ ಹೋಗುತ್ತಾರೆ ಮತ್ತು ಅದಕ್ಕಾಗಿ ಬಹಳಷ್ಟು ಖರ್ಚು ಬರಿಸಬೇಕಾಗುತ್ತದೆ. ಆದ್ರೆ ಬಡವರ ಪಾಲಿಗೆ ಅದೊಂದು ಕಬ್ಬಿಣದ ಕಡೆಲೆಯಾಗಿದೆ.
ಇಂತಹದೊಂದು ಜನಟಿಕ್ ಸಂಪ್ರಾದಾಯ ನಮ್ಮ ಭಾಗದ ಜನರಿಗೆ ಶಾಪವಾಗಿ ದಶಕದಿಂದಲೂ ಬಂದಿದೆ.
ಇದಕ್ಕೆ ನಾಂದಿ ಹಾಡಬೇಕಿರುವುದು ಒಂದು ಸಂದರವಾದ ಅತ್ಯಾಧುನಿಕ ಸಂಪನ್ಮೂಲ‌ಭರಿತ ವಿದ್ಯುನ್ಮಾನ ಆಧರಿತ ಕೇಂದ್ರ ಗ್ರಂಥಾಲಯದಿಂದ ಮಾತ್ರ ಸಾದ್ಯ ಅಲ್ಲವೇ.
ಇನ್ನೂ ಸಾಹಿತ್ಯಿಕವಾಗಿ ನಮ್ಮ‌ ತಾಲೂಕು ತನ್ನದೆಯಾದ ಇತಿಹಾಸವನ್ನು ಹೊಂದಿದೆ ಮತ್ತು  ಕನ್ನಡ ಸಾಹಿತ್ಯಕ್ಕೆ ನಮ್ಮ‌ ತಾಲೂಕು ಬಹಳಷ್ಟು ಕೊಡುಗೆಯನ್ನು ನೀಡಿದೆ‌, ಅದರಲ್ಲಿ ಮುಖ್ಯವಾಗಿ ೧೯ ನೇ ಶತಮಾನದ  ಕಾವ್ಯಾನಂದ ಸಿದ್ದಯ್ಯ ಪುರಾಣಿಕ ರವರ ಕೊಡುಗೆ ಅಗಾಧವಾಗಿದೆ.
ಜೋತೆಗೆ ಈ ಕಾಲದ ಹಿರಿಯ , ಕವಿಗಳು ಬರಹಗಾರರು,ಕಲಾವಿದರು, ನಾಟಕಗಾರರ ಸಾಹಿಯ್ಯ ಕೃಷಿಯು ಅನನ್ಯವಾಗಿದೆ.ಇಂತಹ ಪರಿಸರ ಹೊಂದಿರುವ ನಮ್ಮ ಪಟ್ಟಣ
ಒಂದು ಪುಸ್ತಕ ಬಿಡುಗಡೆಗೆ , ಕವಿ ಗೋಷ್ಠಿ , ಮತ್ತು ಪಠ್ಯ ಆಧಾರಿತ ನಾಟಕಗಳನ್ನು  ವಿಚಾರಣ  ಸಂರ್ಕಿಣಗಳಂತ ಇತ್ಯಾದಿ ಚಟುವಟಿಕೆಗಳಿಗಾಗಿ ಯಾವುದೇ ಒಂದು ನಿರ್ದಿಷ್ಠವಾದ ಕಟ್ಟಡವಿಲ್ಲ‌  ಸ್ಥಳವಿಲ್ಲ  ಇದರಿಂದ ನಾಡಿನ ಸಂಸ್ಕಾರ ಭಾಷೆ,ಆಚರಣೆ ಕನ್ನಡದ ಪರಂಪರೆಯ ಮೌಲ್ಯಗಳನ್ನು
 ಈ ಕಾಲ ಘಟ್ಟದ ಯುವ ಪೀಳಿಗೆಗೆ  ಜೋತೆಗೆ ಕೊಂಡೊಯ್ಯುವುದಕ್ಕೆ ಈ ಎರಡು ಕಟ್ಟಡಗಳು ಅತ್ಯಾವಶ್ಯಕವಾಗಿದೆ .

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0