ಎಸ್ ವೈ ಎಸ್ ಪುತ್ತೂರು ಝೋನ್ ವತಿಯಿಂದ 'ಮಾದರಿ ಮದುವೆ': ಅನಾಚಾರಗಳಿಂದ ದೂರ ನಿಂತು ಪ್ರವಾದಿಯವರು ಕಲಿಸಿದ ಕಡಿಮೆ ವೆಚ್ಚದ ಸಮೃದ್ದಿಯ ಮದುವೆ ಕಡೆ ಸಮುದಾಯ ಗಮನಹರಿಸಬೇಕು: ರಾಶಿದ್ ಬುಖಾರಿ
ಪುತ್ತೂರು: ಎಸ್ ವೈ ಎಸ್ ಪುತ್ತೂರು ಝೋನ್ ಸಮಿತಿ ಕೂರ್ನಡ್ಕದಲ್ಲಿ 'ಮಾದರಿ ಮದುವೆ' ಎಂಬ ವಿಷಯದಲ್ಲಿ ಕಾರ್ಯಕ್ರಮ ನಡೆಯಿತು.ಸ್ವಾಗತ ಸಮಿತಿ ಚೇರ್ಮಾನ್ ಸಮೀರ್ ಬನ್ನೂರು ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜಂಇಯ್ಯತುಲ್ ಉಲಮಾ ನಾಯಕರಾದ ಹಂಝ ಉಸ್ತಾದ್ ದುಆ ನಡೆಸಿದರು. ಎಸ್ ವೈ ಎಸ್ ಈಸ್ಟ್ ಜಿಲ್ಲಾ ಅಧ್ಯಕ್ಷರಾದ ಅಶ್ರಫ್ ಸಖಾಫಿ ಕಾರ್ಯಕ್ರಮವನ್ನು ಉದ್ಘಟಿಸಿದರು.ಇಸ್ಲಾಮಿನ ಮಾದರಿ ಸರಳ ವಿವಾಹದ ಕುರಿತು ಎಸ್ ವೈ ಎಸ್ ರಾಜ್ಯ ಪ್ರಧಾನಕಾರ್ಯದರ್ಶಿ ಕೆ ಎಂ ಮೊಂಟುಗೋಳಿ ಮಾತನಾಡಿದರು.
ಮುಖ್ಯ ಪ್ರಭಾಷಣಗೈದ ಕೇರಳ ರಾಜ್ಯ ಎಸ್ಸೆಸ್ಸೆಫ್ ಮಾಜಿ ಅಧ್ಯಕ್ಷರಾದ ರಾಶಿದ್ ಬುಖಾರಿ ಯವರು 'ಮಾದರಿ ಮದುವೆ' ಎಂಬ ವಿಷಯದಲ್ಲಿ ಸವಿಸ್ತಾರವಾಗಿ ಮಾತನಾಡಿದರು.ದುಂದುವೆಚ್ಚ,
ಅನಾಚಾರಗಳಿಂದ ದೂರ ನಿಂತು ಪ್ರವಾದಿಯವರು ಕಲಿಸಿದ ಕಡಿಮೆ ವೆಚ್ಚದ ಸಮೃದ್ದಿಯ ಮದುವೆ ಕಡೆ ಸಮುದಾಯ ಗಮನಹರಿಸಬೇಕೆಂದು ಕರೆ ನೀಡಿದರು.
ಪೀರ್ ಮೊಹಲ್ಲಾ ಮುಹ್ಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾದ ಕೆ ಎಚ್ ಕಾಸಿಂ ಹಾಜಿ,ಕೊಶಾಧಿಕಾರಿ ರಿಯಾಝ್ ಹಾಜಿ ಭೂಮಿ,
ಪುತ್ತೂರು ಪುರಸಭಾ ಕೌನ್ಸಿಲರ್ ಯೂಸುಫ್ ಡ್ರೀಮ್ಸ್,ಕೂರ್ನಡ್ಕ ಸಲ್ ಸಬೀಲ್ ಯಂಗ್‌ಮೆನ್ಸ್ ಅಧ್ಯಕ್ಷರಾದ ಹೈದರ್ ಚೋಯ್ಸ್,ಸಾಮಾಜಿಕ ಕಾರ್ಯಕರ್ತ ಹಕೀಮ್ ಕೂರ್ನಡ್ಕ,ಝೋನ್ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಸಖಾಫಿ ಅಬ್ದುಸ್ಸಮದ್ ಬಾವ ಹಾಜಿ ಕೂರ್ನಡ್ಕ,ಯೂಸುಫ್ ಹಾಜಿ ಕೈಕಾರ,ಯೂಸುಫ್ ಸಾಜ ಗೌಸಿಯ, ಮೂಸ ಕುಂಞ್ಞಿ ಕೀಲಂಪಾಡಿ, ಅಬೂಬಕರ್ ಹಾಜಿ ಆರ್ಲಪದವು, ಝೈನುದ್ದೀನ್ ಹಾಜಿ ಮುಕ್ವೆ, ಕರೀಮ್ ಹಾಜಿ ಕಾವೇರಿ, ಇಸ್ಮಾಈಲ್ ಹಾಜಿ ಕೊಂಬಾಳಿ, ಅಡ್ವಕಟ್ ಶಾಕಿರ್ ಹಾಜಿ, ಅಬ್ದುರ್ರಝಾಕ್ ನೆಕ್ಕಿಲ್, ಉಮರ್ ಹಾಜಿ ಬನ್ನೂರು.
ಹಮೀದ್ ಕೊಯಿಲ, ಇಕ್ಬಾಲ್ ಬಪ್ಪಳಿಗೆ,ಸ್ವಾಲಿಹ್ ಮುರ, ಹೈದರ್ ಸಖಾಫಿ ಶೇರ,ಅಬ್ದುಲ್ ಅಝೀಝ್ ಚೆನ್ನಾರ್, ಕಬಕ,ಅಬ್ದುಲ್ಲ ಕಾವು,ಫವಾಝ್ ಕಟ್ಟತ್ತಾರು,ಅಬ್ಬಾಸ್ ರಾಯಲ್,ಅಬ್ದುಲ್ ಮಜೀದ್ ಅಕ್ಕರೆ,ಸಲಾಂ ಹನೀಫಿ ಕಬಕ,ಶಾಕಿರ್ ಕೊಳ್ತಿಗೆ,ಕಲಂದರ್ ಕಬಕ,ಶಮೀರ್ ಕೊಡಿಪ್ಪಾಡಿ, ಮುಹ್ಸಿನ್ ಕಟ್ಟತ್ತಾರು ಉಪಸ್ಥಿತಿರಿದ್ದರು.
ಸಾಮಾಜಿಕ ಕಾರ್ಯಕರ್ತ ಹಕೀಂ ಕೂರ್ನಡ್ಕರವರು ಕುಡಿಯುವ ತಂಪುಪಾನೀಯ ವ್ಯವಸ್ಥೆ ಮಾಡಿದ್ದರು.ಸ್ವಾಗತ ಸಮಿತಿ ಕನ್ವೀನರ್ ಅಬೂಶಝ ಅಬ್ದುರ್ರಝಾಕ್ ಖಾಸಿಮಿ ಸ್ವಾಗತಿಸಿ ಸಂಚಾಲಕ ಅಬ್ದುರ್ರಝಾಕ್ ಹಿಮಮಿ ಧನ್ಯವಾದ ಅರ್ಪಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



