ಎಸ್ ಎಸ್ ಎಲ್ ಸಿ ಪರೀಕ್ಷೆ: ಮೊದಲ ದಿನ 220 ವಿದ್ಯಾರ್ಥಿಗಳು ಗೈರು

Mar 21, 2025 - 18:13
ಎಸ್ ಎಸ್ ಎಲ್ ಸಿ ಪರೀಕ್ಷೆ: ಮೊದಲ ದಿನ 220 ವಿದ್ಯಾರ್ಥಿಗಳು ಗೈರು

ಕಾರವಾರ : ಎಸ್ ಎಸ್ ಎಲ್ ಸಿ ಪರೀಕ್ಷೆ ಶುಕ್ರವಾರ ಪ್ರಾರಂಭವಾಗಿದ್ದು, ಘಟ್ಟದ ತಾಲೂಕುಗಳಲ್ಲಿ 94 ವಿದ್ಯಾರ್ಥಿಗಳು ಗೈರು, ಕರಾವಳಿ ತಾಲೂಕು ಗಳಲ್ಲಿ 126 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಅನಾರೋಗ್ಯ ಕಾರಣದಿಂದ ಗೈರು ಹಾಜರಾದವರು ಹೆಚ್ಚು ಎನ್ನಲಾಗಿದೆ.‌

ಮೊದಲ ದಿನ ಇಂಗ್ಲಿಷ್ ಭಾಷಾ ಪತ್ರಿಕೆ ಇತ್ತು . ಕಾರವಾರ ಶೈಕ್ಷಣಿಕ ತಾಲೂಕಿನಲ್ಲಿ 9335 ವಿದ್ಯಾರ್ಥಿಗಳು ಪರೀಕ್ಷೆ ಕಟ್ಟಿದ್ದು, 9209 ಹಾಜರಾಗಿದ್ದಾರೆ. ಅಂಕೋಲಾ ದಿಂದ 8 , ಭಟ್ಕಳದಲ್ಲಿ 12, ಹೊನ್ನಾವರ 15, ಕಾರವಾರ 81, ಕುಮಟಾ ದಿಂದ 10 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ.

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 9654 ಪರೀಕ್ಷೆ ಕಟ್ಟಿದ್ದು, 9560 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಶಿರಸಿಯಿಂದ 27, ಸಿದ್ದಾಪುರ 3,ಯಲ್ಲಾಪುರ 9, ಮುಂಡಗೊಡ 18, ಹಳಿಯಾಳ 27, ಜೊಯಿಡಾ ದಿಂದ 10 ಜನ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಪರೀಕ್ಷೆ ಗಳು ಸುಗಮವಾಗಿ ನಡೆದಿವೆ ಎಂದು ಜಿಲ್ಲಾಡಳಿತ ಹೇಳಿದೆ. ಡಿಡಿಪಿಐ ಲತಾ, ಡಿಡಿಪಿಐ ಬಸವರಾಜ ಪರೀಕ್ಷೆ ಕೇಂದ್ರಗಳ ಮೇಲೆ ನಿಗಾ ಇಟ್ಟಿದ್ದರು .

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0