ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ಸುಳ್ಯ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಉಮ್ರಾ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭ

Jul 7, 2025 - 16:41
ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ಸುಳ್ಯ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಉಮ್ರಾ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭ

ಸುಳ್ಯ: 2025 ಜುಲೈ 4 ಶುಕ್ರವಾರ ರಾತ್ರಿ 9 ಗಂಟೆಗೆ ಅನ್ಸಾರ್ ಕಾಂಪ್ಲೆಕ್ಸ್ ಸುನ್ನಿ ಸೆಂಟರ್ ಸುಳ್ಯದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ಸುಳ್ಯ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಉಮ್ರಾ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬೂಬಕ್ಕರ್ ಜಟ್ಟಿಪಳ್ಳ ವಹಿಸಿದರು.
ಪವಿತ್ರವಾದ ಮಕ್ಕಾ ಮದೀನಾ ಉಮ್ರಾ ನಿರ್ವಹಿಸಲು ತೆರಳುತ್ತಿರುವ ಎಸ್ ವೈ ಎಸ್ ಮಾಜಿ ಉಪಾಧ್ಯಕ್ಷರಾದ ಸಯ್ಯದ್ ತ್ವಾಹಿರ್ ಸಅದಿ ತಂಙಳ್ ರವರಿಗೆ ಬೀಳ್ಕೊಡಲಾಯಿತು.
ಪಿಯುಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ನಿಶಾಲ್ ಮುಹಮ್ಮದ್, ನಿಶಾಲ್ ಅಹ್ಮದ್, ಮಹಮ್ಮದ್ ಆಶಿಕ್, ಫಾತಿಮತ್ ಆಶಿಕಾ, ಆಯಿಷತ್ ರಿಂಗ್ಶಾ, ಆಯಿಷತ್ ಝಿಯಾನಾ, ಫಾತಿಮತ್ ಶೈಮಾ ಎಸ್ ಎಂ, ಹಲೀಮಾ ಶಿಫಾನಾ, ಆಯಿಷತ್ ಫೀಝಾ ಕಟ್ಟೆಕಾರ್,ಹಾಗೂ ಮುಹಮ್ಮದ್ ಸ್ವಾಲಿಹ್ ಅವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು, ಅನ್ಸಾರಿಯ ಹಿಪ್ಪುಲ್ ಕುರಾನ್ ಕಾಲೇಜಿನಿಂದ ಮೊದಲ ಬಾರಿಗೆ ಕುರಾನ್ ಕಂಠಪಾಠ ಮಾಡಿದ ವಿದ್ಯಾರ್ಥಿಗಳಾದ ಮಹಮ್ಮದ್ ಶಾಝ್, ಹಾಗೂ ಮಹಮ್ಮದ್ ಮುಸ್ತಫಾ ಇವರುಗಳನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಯ್ಯದ್ ತ್ವಾಹಿರ್ ಸಅದಿ ತಂಙಳ್ ದುಆ ನೆರವೇರಿಸಿದರು, ಇಸ್ಮಾಯಿಲ್ ಅಹ್ಸನಿ ಕಾರ್ಯಕ್ರಮ ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ನೆರವೇರಿದ ಕಾರ್ಯಕರ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಲಾಂ ಕಡಮಕ್ಕಲ್ ವಿಷಯ ಮಂಡಿಸಿದರು, ಕಾರ್ಯಕ್ರಮಕ್ಕೆ ಹಮೀದ್ ಬೀಜಕೊಚ್ಚಿ, ಕಬೀರ್ ಜಟ್ಟಿಪಳ್ಳ ಶುಭ ಹಾರೈಸಿದರು, ಮುಖ್ಯ ಅತಿಥಿಗಳಾಗಿ ಖಾದರ್ ಸಂಗಂ, ಸಿದ್ದೀಕ್ ಕಟ್ಟೆಕಾರ್, ಮಜೀದ್ ನಾವೂರು, ಸಿದ್ದೀಕ್ ಬಿ ಎ, ಸಾದಿಕ್ ಪಿ ಜಿ, ಬಶೀರ್ ಕಲ್ಲುಮುಟ್ಲು, ಮುನೀರ್ ಪರಿವಾರಕಾನ,ಹಾರಿಸ್ ಎಸ್ ಹೆಚ್ ಹಾಗೂ ಸಂಘಟನೆಯ ಕಾರ್ಯಕರ್ತರು, ವಿಧ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು, ನೆರೆದ ಸರ್ವರನ್ನು ಸುಳ್ಯ ಸೆಕ್ಟರ್ ಅಧ್ಯಕ್ಷ ಆಬಿದ್ ಕಲ್ಲುಮುಟ್ಲು ಸ್ವಾಗತಿಸಿದರು, ಹಾರಿಸ್ ಸಿ ಎ ವಂದಿಸಿದರು, ನೌಶಾದ್ ಕೆ ಎಂ ಕಾರ್ಯಕ್ರಮ ನಿರೂಪಿಸಿದರು, ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0