ದ್ಸಿಕ್ರ್ ಸ್ವಲಾತ್ ಗಳು ಅಧಿಕಗೊಳಿಸಿರಿ,ಮರಣವು ಆಕಸ್ಮಿಕವಾಗಿ ಸಂಭವಿಸುವ ಕಾಲವಿದು: ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ

Jun 17, 2025 - 09:57
ದ್ಸಿಕ್ರ್ ಸ್ವಲಾತ್ ಗಳು ಅಧಿಕಗೊಳಿಸಿರಿ,ಮರಣವು ಆಕಸ್ಮಿಕವಾಗಿ ಸಂಭವಿಸುವ ಕಾಲವಿದು: ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ

ಮಾಣಿ : ಸದಾ ಅಲ್ಲಾಹನ ಸ್ಮರಣೆಯಲ್ಲಿರಿ ದ್ಸಿಕ್ರ್ ಸ್ವಲಾತ್‌ಗಳು ಅಧಿಕಗೊಳಿಸಿರಿ, ಮರಣಗಳು ಅನಿರೀಕ್ಷಿತವಾಗಿ ಮತ್ತು ಆಕಸ್ಮಿಕವಾಗಿ ಅಧಿಕಗೊಂಡ ಕಾಲವಿದು ಪರಲೋಕ ವಿಜಯದ ಗುರಿ ಇಲ್ಲದೆ ವಟ್ರಾಸಿ  ಬದುಕುವುದು ಸತ್ಯವಿಶ್ವಾಸಿಗೆ ಭೂಷಣವಲ್ಲ ಎಂದು ಅಲ್ ಮುರ್ಶಿದ್ ಅಕಾಡೆಮಿ ಕುದುಂಬ್ಲಾಡಿ, ಕೆದಿಲ ಇದರ ಶಿಲ್ಪಿ ಬಹು| ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಹೇಳಿದರು. ಅವರು ಕರ್ನಾಟಕ ಮುಸ್ಲಿಂ ಜಮಾ‌ಅತ್, ಎಸ್‌ವೈ‌ಎಸ್, ಎಸ್ಸೆಸ್ಸೆಫ್, ಸೂರಿಕುಮೇರು ಯುನಿಟ್ ವತಿಯಿಂದ ಕೆಸಿಎಫ್ ಕಾರ್ಯಕರ್ತ ಹಾರಿಸ್ ಯೂಸುಫ್ ಸೂರಿಕುಮೇರು ರವರ ನಿವಾಸದಲ್ಲಿ ನಡೆದ ಮಹ್‌‌ಳರತುಲ್ ಬದ್ರಿಯಾ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ಮಾತನಾಡಿದರು. ನಿಝಾಂ ಸ‌ಅದಿ ಸೂರಿಕುಮೇರು, ಅಶ್ರಫ್ ಸಖಾಫಿ ಮತ್ತು ಹಾಫಿಳ್ ಮುರ್ಶಿದ್ ಮಜ್ಲಿಸ್ ಆಲಾಪನೆ ನಡೆಸಿದರು. ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಅರ್ಕ ,ಕೊಡಿಪ್ಪಾಡಿ, ಅಬ್ದುಲ್ ಕರೀಂ ನೆಲ್ಲಿ, ಯೂಸುಫ್ ಹಾಜಿ, ಹಸೈನ್ ಟೈಲರ್, ಮುಬಶ್ಶಿರ್ ಹಿಕಮಿ ಸ‌ಅದಿ ಸೂರಿಕುಮೇರು ಮುಂತಾದವರು ಉಪಸ್ಥಿತರಿದ್ದರು.

ಸಲೀಂ ಮಾಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0