ಗಾಝಾದ ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ: ಫೆಲೆಸ್ತೀನ್ ‌ಪತ್ರಕರ್ತ ಮೃತ್ಯು

May 14, 2025 - 14:41
ಗಾಝಾದ ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ: ಫೆಲೆಸ್ತೀನ್ ‌ಪತ್ರಕರ್ತ ಮೃತ್ಯು

ಗಾಝಾ: ಗಾಝಾಪಟ್ಟಿಯ ಆಸ್ಪತ್ರೆಯೊಂದರ ಮೇಲೆ ಇಸ್ರೇಲ್‌ ಮಂಗಳವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಫೆಲೆಸ್ತೀನ್ ‌ನ ಪತ್ರಕರ್ತ ಹಸನ್ ಅಸ್ಲಿಹ್‌ ಮೃತಪಟ್ಟಿದ್ದಾರೆ ಎಂದು ಇಲ್ಲಿನ ಆರೋಗ್ಯ ಸಚಿವಾಲಯ ಹೇಳಿದೆ.

ಕಳೆದ ತಿಂಗಳು ಇಸ್ರೇಲ್‌ ನಡೆಸಿದ್ದ ದಾಳಿಯಲ್ಲಿ ಗಾಯಗೊಂಡಿದ್ದ ಅಸ್ಲಿಹ್‌, ಖಾನ್‌ ಯೂನಿಸ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅದೇ ಆಸ್ಪತ್ರೆಯ ಮೇಲೆ ಇಸ್ರೇಲ್‌ ದಾಳಿ ನಡೆಸಿದ ಪರಿಣಾಮ ಅಸ್ಲಿಹ್‌ ಜತೆಗೆ ಮತ್ತೊಬ್ಬ ವ್ಯಕ್ತಿಯೂ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಗಾಜಾದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಸ್ಲಿಹ್‌ ಅವರು ಆಲಂ 24 ನ್ಯೂಸ್ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಯುದ್ಧ ಆರಂಭವಾದ ಬಳಿಕ ಗಾಜಾದಲ್ಲಿ ಈವರೆಗೆ 160 ಮಂದಿ ಪತ್ರಕರ್ತರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0