ಆನ್‌ಲೈನ್ ಗೇಮ್ ಆಡುವುದನ್ನು ತಡೆದಿದ್ದಕ್ಕೆ ಉತ್ತರ ಪ್ರದೇಶದಲ್ಲಿ ಮೂವರು ಸಹೋದರಿಯರು ಕಟ್ಟಡದಿಂದ ಜಿಗಿದು ಆತ್ಮಹತ್ಯೆ

Feb 4, 2026 - 14:55
ಆನ್‌ಲೈನ್ ಗೇಮ್ ಆಡುವುದನ್ನು ತಡೆದಿದ್ದಕ್ಕೆ ಉತ್ತರ ಪ್ರದೇಶದಲ್ಲಿ ಮೂವರು ಸಹೋದರಿಯರು ಕಟ್ಟಡದಿಂದ ಜಿಗಿದು ಆತ್ಮಹತ್ಯೆ

ಲಕ್ನೋ: ಪೋಷಕರು ಆನ್‌ಲೈನ್ ಗೇಮ್ ಆಡುವುದನ್ನು ನಿಷೇಧಿಸಿದ್ದಕ್ಕಾಗಿ ಮೂವರು ಸಹೋದರಿಯರು ಕಟ್ಟಡದಿಂದ ಕೆಳಕ್ಕೆ ಜಿಗಿದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಭಾರತ್ ಸಿಟಿ ಪ್ರದೇಶದಲ್ಲಿ ನಡೆದಿದೆ. ಇಂದು ಮುಂಜಾನೆ 2.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ನಿಶಿಕಾ (16), ಪ್ರಾಚಿ (14) ಮತ್ತು ಪಾಖಿ (12) ಮೃತಪಟ್ಟವರು. ಪೋಷಕರಲ್ಲಿ ಕ್ಷಮೆ ಕೇಳಿರುವ ಮಕ್ಕಳ ಡೆತ್ ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಒಂಬತ್ತನೇ ಮಹಡಿಯ ಫ್ಲಾಟ್‌ನಿಂದ ಇವರು ಜಿಗಿದಿದ್ದಾರೆ. ಮಕ್ಕಳು ಕೊರಿಯನ್ ಆನ್‌ಲೈನ್ ಗೇಮ್‌ಗಳಿಗೆ ವ್ಯಸನಿಗಳಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಕ್ಕಳು ಮೊಬೈಲ್ ಫೋನ್‌ನಲ್ಲಿ ಅತಿಯಾದ ಸಮಯ ಕಳೆಯುತ್ತಿದ್ದರು ಮತ್ತು ಕೊರಿಯನ್ ಆನ್‌ಲೈನ್ ಟಾಸ್ಕ್ ಆಧಾರಿತ ಗೇಮಿಂಗ್ ಆ್ಯಪ್‌ನಲ್ಲಿ ತೊಡಗಿಸಿಕೊಂಡಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕುಟುಂಬ ಸದಸ್ಯರ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು, ಮಕ್ಕಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0