ದೆಹಲಿಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಮೂರು ಶವಗಳು ಪತ್ತೆ
ನವದೆಹಲಿ: ಪಶ್ಚಿಮ ದೆಹಲಿಯಲ್ಲಿ ನಿಲ್ಲಿಸಲಾಗಿದ್ದ ಕಾರಿನೊಳಗೆ ಮೂರು ಶವಗಳು ಪತ್ತೆಯಾಗಿವೆ. ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆಯ ಶವ ಕಾರಿನಲ್ಲಿ ಪತ್ತೆಯಾಗಿದೆ.
ಪೀರಾಗಡಿ ಫ್ಲೈಓವರ್ ಮೇಲೆ ಅನುಮಾನಾಸ್ಪದವಾಗಿ ಕಾರೊಂದು ನಿಂತಿದೆ ಎಂಬ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ ಅಗ್ನಿಶಾಮಕ ದಳಕ್ಕೆ, ಟವೇರಾ ಕಾರಿನೊಳಗೆ ಮೂವರು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಮೃತರನ್ನು ಗುರುತಿಸಲಾಗಿದೆ.
ಮೃತರನ್ನು ರಣ್ಹೋಲಾ ನಿವಾಸಿಗಳಾದ ರಣಧೀರ್ (62), ಶಿವನರೇಶ್ (42) ಮತ್ತು ಜಹಾಂಗೀರ್‌ಪುರಿ ನಿವಾಸಿ ಲಕ್ಷ್ಮಿ (40) ಎಂದು ಗುರುತಿಸಲಾಗಿದೆ. ಈ ಕಾರು ರಣಧೀರ್ ಅವರಿಗೆ ಸೇರಿದ್ದಾಗಿದೆ. ಮೃತದೇಹಗಳ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಇದು ಸಮೂಹ ಆತ್ಮಹತ್ಯೆ ಇರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಧಿವಿಜ್ಞಾನ (Forensic) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದುವರೆಗೆ ಯಾವುದೇ ಸಂಶಯಾಸ್ಪದ ಅಂಶಗಳು ಕಂಡುಬಂದಿಲ್ಲ ಎಂದು ಡೆಪ್ಯುಟಿ ಪೊಲೀಸ್ ಕಮಿಷನರ್ ಸಚಿನ್ ಶರ್ಮಾ ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0