ಪಾಲಿಬೆಟ್ಟ ಮುಹಿಮ್ಮಾತ್ತುದ್ದೀನ್ ಮದ್ರಸಾ ವಿದ್ಯಾರ್ಥಿಗೆ ರಾಷ್ಟ ಮಟ್ಟದಲ್ಲಿ ದ್ವಿತೀಯ ಸ್ಥಾನ

Nov 17, 2025 - 09:27
ಪಾಲಿಬೆಟ್ಟ ಮುಹಿಮ್ಮಾತ್ತುದ್ದೀನ್ ಮದ್ರಸಾ ವಿದ್ಯಾರ್ಥಿಗೆ ರಾಷ್ಟ ಮಟ್ಟದಲ್ಲಿ ದ್ವಿತೀಯ ಸ್ಥಾನ

ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ರಿ) SSF ರಾಷ್ಟ್ರೀಯ ಸಾಹಿತ್ಯೋತ್ಸವ ನವಂಬರ್ 14,15,16 ತಾರೀಖುಗಳಲ್ಲಿ ರಾಜ್ಯದ ಗುಲ್ಬರ್ಗಾದಲ್ಲಿ ಜರಗಿತು. ರಾಷ್ಟ್ರದ 26 ರಾಜ್ಯಗಳಿಂದ ಸ್ಪರ್ಧಾರ್ಥಿಗಳು ಭಾಗವಹಿಸಿದರು‌.

 ಜೂನಿಯರ್ ವಿಭಾಗದ ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಪಾಲಿಬೆಟ್ಟ ಮುಹಿಮ್ಮಾತುದ್ದೀನ್ ಮದ್ರಸಾದ ಒಂಭತ್ತನೇ ತರಗತಿಯ ವಿದ್ಯಾರ್ಥಿ ಆದಿಲ್ ಬಿ.ಎ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಆದಿಲ್ ನ ಈ ವಿಶೇಷ ಸಾಧನೆಗೆ ಪಾಲಿಬೆಟ್ಟ ಮುಹ್ಯುದ್ದೀನ್ ಜುಮಾ ಮಸ್ಜಿದ್ ಮತ್ತು ಮುಹಿಮ್ಮಾತುದ್ದೀನ್ ಮದ್ರಸ ಆಡಳಿತ ಸಮಿತಿ ಪದಾಧಿಕಾರಿಗಳು, ಸ್ಟಾಫ್ ಕೌನ್ಸಿಲ್ ಮತ್ತು SBS ಯುನಿಟ್ ಸಮಿತಿ ಅಭಿನಂದನೆಗಳು ಸಲ್ಲಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0