ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ನಾಳೆ ಬೃಹತ್ ಪ್ರತಿಭಟನೆ, ಯಶಸ್ವಿಗೊಳಿಸಿ : ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ‌. ಈಸ್ಟ್ ಜಿಲ್ಲೆ

Apr 17, 2025 - 19:03
ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ನಾಳೆ ಬೃಹತ್ ಪ್ರತಿಭಟನೆ,  ಯಶಸ್ವಿಗೊಳಿಸಿ : ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ‌. ಈಸ್ಟ್ ಜಿಲ್ಲೆ

ಪುತ್ತೂರು : ಮುಸಲ್ಮಾನರ ಭವ್ಯ ಬದುಕಿಗೆ, ಅವರ ಆರಾಧನಾಲಾಯಗಳಿಗೆ ಪೂರ್ವಿಕರು ದೇಣಿಗೆಯಾಗಿ ನೀಡಿದ ಜಮೀನು ಸ್ವತ್ತುಗಳಾಗಿವೆ ವಕಫುಗಳು. ಅವುಗಳು ಯಾವತ್ತೂ ಪರ ಸ್ವತ್ತು ಅಲ್ಲ. ಸರಕಾರದ ಸ್ವತ್ತೂ ಅಲ್ಲ. ಸರಕಾರವೋ ಇತರರೋ ಅದರಲ್ಲಿ ಹಸ್ತಕ್ಷೇಪ ಸಲ್ಲಿಸುವಂತಿಲ್ಲ. ಆ ಜಮೀನುಗಳೆಲ್ಲವೂ, ಆ ಸ್ವತ್ತುಗಳೆಲ್ಲವೂ ಮುಸಲ್ಮಾನರಿಗೆ ಮೀಸಲಿಡತಕ್ಕದ್ದು. ಕೇಂದ್ರ ಸರಕಾರವು ಜಾರಿಗೆ ತಂದ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ದ ಕರ್ನಾಟಕ ಉಲಮಾ ಕೋರ್ಡಿನೇಶನ್ ವತಿಯಿಂದ ಉಭಯ ಖಾಝಿಗಳ ನೇತೃತ್ವದಲ್ಲಿ ನಾಳೆ (ಎಪ್ರಿಲ್ 18 ಶುಕ್ರವಾರ)  ಮಂಗಳೂರು ಅಡ್ಯಾರ್ ಕಣ್ಣೂರು ಷಾ ಗಾರ್ಡನ್ ನಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುನ್ನಿ ಸಂಘ ಕುಟುಂಬದ  ಉಲಮಾ-ಉಮರಾ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷರಾದ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿರವರು ವಿನಂತಿಸಿದ್ದಾರೆ.

* ಕರ್ನಾಟಕ ಮುಸ್ಲಿಂ ಜಮಾಅತ್, ದ. ಕ. ಈಸ್ಟ್ ಜಿಲ್ಲೆ

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0