ನೇತ್ರಾವತಿ ಕಾಮಗಾರಿ, ಆದಷ್ಟು ಬೇಗ ಮುಗಿಸಿ ಕೊಡಲು ರಾ.ಹೆ. ಅಧಿಕಾರಿಗಳಿಗೆ ಸೂಚನೆ

Apr 16, 2025 - 13:35
ನೇತ್ರಾವತಿ ಕಾಮಗಾರಿ, ಆದಷ್ಟು ಬೇಗ ಮುಗಿಸಿ ಕೊಡಲು ರಾ.ಹೆ. ಅಧಿಕಾರಿಗಳಿಗೆ ಸೂಚನೆ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್.‌17ರ ನೇತ್ರಾವತಿಯ ಹಳೆಯ ಸೇತುವೆಯ ದುರಸ್ತಿ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆ ಸಭಾಧ್ಯಕ್ಷ ಯು.ಟಿ. ಖಾದರ್ ಎ.15ರ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ.

ಸೇತುವೆಯ ಅಡಿ ಭಾಗದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ನುರಿತ ತಂಡದ 4-5 ಜನ ಮಾತ್ರ ನಿಂತು ಕೆಲಸ ಮಾಡುವ ಅವಕಾಶವಿದ್ದು,ಆದಾಗ್ಯೂ ಈ ತಿಂಗಳ 25ರ ಒಳಗಾಗಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ದೇರಳಕಟ್ಟೆ, ಕೊಣಾಜೆ, ಮುಡಿಪು, ಸಜೀಪ ಭಾಗದ ಸಾರ್ವಜನಿಕರು ಹಾಗೂ ಕೇರಳ ಸಂಪರ್ಕಿಸುವ ಕೆಲ ವಾಹನ ಸವಾರರು ಈಗಾಗಲೇ ಯು.ಟಿ.ಖಾದರ್ ಅವರ ದೂರ ದೃಷ್ಟಿಯ ಯೋಜನೆಯಲ್ಲಿ ನಿರ್ಮಾಣವಾದ ಅಡ್ಯಾರು ಸೇತುವೆಯಲ್ಲಿ ಸಂಚರಿಸುತ್ತಿದ್ದು, ನೇತ್ರಾವತಿ ಸೇತುವೆಯಲ್ಲಿ ಸ್ವಲ್ಪ ಮಟ್ಟಿನ ಜನದಟ್ಟಣೆ ಕಡಿಮೆಯಾಗಿದೆ. ಆದರೂ ನೇತ್ರಾವತಿ ಸೇತುವೆ ಕಾಮಗಾರಿ ಆದಷ್ಟು ಬೇಗನೆ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0