ಕನ್ನಡ ಜಾಗೃತಿ ಸಮಿತಿಗೆ ಐವರ ನೇಮಕ

Sep 16, 2025 - 12:38
ಕನ್ನಡ ಜಾಗೃತಿ ಸಮಿತಿಗೆ ಐವರ ನೇಮಕ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಐದು ಜನ ಸಾಹಿತಿಗಳನ್ನು  ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವಿಜಯಪುರ ನಗರ ಸಾಹಿತಿಗಳಾದ ಪ್ರೊ.ಬಸವರಾಜ ವಿ ಕುಂಬಾರ, ಡಾ. ಸುಜಾತಾ ಚಲವಾದಿ, ಪ್ರೊ, ಮೆಹಬೂಬಸಾಹೇಬ ವೈ.ಜೆ.,ದೇವು ಮಾಕೊಂಡ, ಹಾಗೂ ಡಾ.ಶ್ರೀನಿವಾಸ್ ದೊಡ್ಡಮನಿ ಇವರನ್ನು ನಾಮ ನಿರ್ದೇಶನ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಭಾಷಾ ನೀತಿ ಅನುಷ್ಠಾನದಲ್ಲಿ ಜನರು ಪಾಲ್ಗೊಳ್ಳುವಂತೆ ಪ್ರೇರೇಪಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ಜಾಗೃತಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ಆದೇಶ ಹೊರಡಿಸಿ ನಾಮನಿರ್ದೇಶನ ಮಾಡಿದೆ ಇವರ ಅಧಿಕಾರ ಸರ್ಕಾರದ ಮುಂದಿನ ಆದೇಶದವರೆಗೆ ಇರಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ  ಸದಸ್ಯರಾದ ಶ್ರೀಮತಿ ದಾಕ್ಷಾಯಿಣಿ ಹಾಗೂ ರಾಜ್ಯ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಆದೇಶದಲ್ಲಿ ತಿಳಿಸಿದ್ದಾರೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0