ಎಸ್ ವೈ ಎಸ್ ಗೂನಡ್ಕ ಶಾಖೆ ವತಿಯಿಂದ ಸ್ವಾತಂತ್ರೋತ್ಸವ ಕಾರ್ಯಕ್ರಮ

Aug 18, 2025 - 10:24
ಎಸ್ ವೈ ಎಸ್ ಗೂನಡ್ಕ ಶಾಖೆ ವತಿಯಿಂದ ಸ್ವಾತಂತ್ರೋತ್ಸವ ಕಾರ್ಯಕ್ರಮ

ಎಸ್ ವೈ ಎಸ್ ಗೂನಡ್ಕ ಶಾಖೆ ವತಿಯಿಂದ ಸ್ವತಂತ್ರ ಸಂಜೆ ವಿಶೇಷ ಕಾರ್ಯಕ್ರಮ. ದಿನಾಂಕ @15.08.2025 ರಂದು ನಡೆದ 79ನೇ ಸ್ವಾತಂತ್ರ ಉತ್ಸವದ ಪ್ರಯುಕ್ತ ಗೂನಡ್ಕ ಹುಳಿಯಡಿ ವಠಾರದಲ್ಲಿ ನಿನ್ನೆಯ ನೆನಪು ನಾಳೆಯ ನಿರೀಕ್ಷೆ ಎಂಬ ಧ್ಯೇಯ ವಾಕ್ಯದೊಂದಿಗೆ.. ಗ್ರಾಮದ ಸರ್ವ ಧರ್ಮದ ಪ್ರತಿನಿಧಿಗಳು ಹಾಗೂ ನಿವೃತ್ತ ಸೈನಿಕರೊಂದಿಗೆ ಸಂವಾದ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ವೈ ಎಸ್ ಗೂನಡ್ಕ ಅಧ್ಯಕ್ಷರಾದ ಮುನೀರ್ ಪ್ರಗತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವಧರ್ಮ ಭಾಂದವರು ಗತ ಕಾಲದ ಭಾವೈಕ್ಯದ ಕ್ಷಣಗಳನ್ನು ಮೆಲುಕು ಹಾಕಿದರು. ನಮ್ಮ ಗ್ರಾಮದ ಕೋಮು  ಸೌಹಾರ್ದಕ್ಕೆ ಸಾಕ್ಷಿಯಾದ ಹಲವು ಘಟನೆಗಳನ್ನು ಮೆಲುಕು ಹಾಕಿದರು. ನಮ್ಮ ಈ ಸೌಹಾರ್ದ ವಾತಾವರಣ ವನ್ನು ಮುಂದಿನ ಪೀಳಿಗೆಗೂ ತಿಳಿಸಿ ಕೊಡಬೇಕಾದ ಅನಿವಾರ್ಯತೆಯ ಬಗ್ಗೆ ಗಂಭೀರ ವಿಷಯವಾಗಿ ಚರ್ಚಿಸಲಾಯ್ತು. ಸಂಪಾಜೆ ಗ್ರಾಮವೂ ಕೋಮು ಸೌಹಾರ್ದಕ್ಕೆ ಹೆಸರು ವಾಸಿಯಾಗಿದ್ದು ಅದನ್ನು ಮುಂದಿನ ಪೀಳಿಗೆ ಮುಂದುವರಿಸಿಕೊಂಡು ಹೋಗಬೇಕೆಂದು ಸೇರಿದ ಮುಖಂಡರು ಯುವಕರಿಗೆ ಕಿವಿಮಾತು ಹೇಳಿದರೆ ಸೇರಿದ ಅತಿಥಿ ಗಳು ಎಲ್ಲರೂ ಭಾವೈಕ್ಯದೊಂದಿಗೆ ಈ ಹಿಂದೆ ನಡೆಸಿದ ಜೀವನದ ಅನುಭವಗಳನ್ನು ಬಹಳ ಭಾವನಾತ್ಮಕ ವಾಗಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮದ ಪವರ್ ಮ್ಯಾನ್ ಸಂಗಮೇಶ ಹಾಗೂ ಕೆ ಎಸ್ ಆರ್ ಟಿ ಸಿ ಯಲ್ಲಿ ಸುಮಾರು 30ವರ್ಷ ಗಳ ಕಾಲ ಅಪಘಾತ ರಹಿತ ಚಾಲಕನಾಗಿ ಸೇವೆಗೈದು ಮುಖ್ಯಮಂತ್ರಿ ಗಳ ಚಿನ್ನದ ಪದಕ ಪಡೆದು ನಿವೃತ್ತಿ ಆದ ಮಹಮ್ಮದ್ ಕಡೆಪಾಲ ಇವರುಗಳನ್ನು ಸನ್ಮಾನಿಸಲಾಯ್ತು.
ಮುಖ್ಯ ಅತಿಥಿ ಗಳಾಗಿ ಸಂಪಾಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ಅಧ್ಯಕ್ಷರಾದ ಶ್ರೀ ಸೋಮಶೇಖರ್ ಕೊಯಿoಗಾಜೆ ನಿರ್ದೇಶಕರಾದ ಶ್ರೀ ಗಣಪತಿ ಭಟ್.. ಎಸ್ ಪಿ ಲೋಕನಾಥ್.ನಿವೃತ್ತ ಸೈನಿಕರಾದ ಪದ್ಮನಾಭ ಗೌಡ ಗೂನಡ್ಕ. ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗೂನಡ್ಕ ಮುಕ್ಯೋಪಾಧ್ಯಾಯ ಶ್ರೀ ಹನುಮಂತಪ್ಪ,ವೆಂಕಪ್ಪ ಪೆರಂಗೊಡಿ, ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೂನಡ್ಕ ಇದರ ಆಡಳಿತ ಮಂಡಳಿ ಅಧ್ಯಕ್ಷರಾದ ರಾಮಚಂದ್ರ ಕಲ್ಲುಗದ್ದೆ, ನಿವೃತ ಉಪದ್ಯಾಯ ಚಿದಾನಂದ ಮಾಸ್ಟರ್,ತೊಡಿಕಾನ ದೇವಸ್ಥಾನ ಸಮಿತಿ ಸದಸ್ಯರಾದ ವಸಂತ ಪೆಲ್ತಡ್ಕ , ರಂಜನ್ ಕಲ್ಲುಗದ್ದೆ,ಸಮಾಜ ಸೇವಕ ಬಾಲಚಂದ್ರ ದರ್ಕಾಸ್,ನವೀನ ಗೂನಡ್ಕ, ಚಿದಾನಂದ ಮೂಡನ ಕಜೆ , ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷರಾದ ಮಹಮ್ಮದ್ ಕುಞ ಗೂನಡ್ಕ ಬದ್ರಿಯಾ ಜುಮಾ ಮಸೀದಿ ಖತೀಬರಾದ ಅಬೂಬಕ್ಕರ್ ಸಖಾಫಿ. ಸವಾದ್ ಮದನಿ.. ಎಸ್ ವೈ ಎಸ್ ಉಪಾಧ್ಯಕ್ಷರು ಲತೀಫ್ ಸಖಾಫಿ ಗೂನಡ್ಕ.. ಬದ್ರಿಯಾ ಜುಮಾ ಮಸೀದಿ ಉಪಾಧ್ಯಕ್ಷ ಉಮರ್ ಪುತ್ರಿ.. ಕಾರ್ಯದರ್ಶಿ ಅಶ್ರಫ್ ದೊಡ್ಡಡ್ಕ.ಎಸ್ ವೈ ಎಸ್ ಸಾಂತ್ವನ ಕಾರ್ಯದರ್ಶಿ ಹಾರಿಸ್ ಕೆ ಎಸ್. ಹಾಗೂ ಊರಿನ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು. ಕಾರ್ಯಕ್ರಮದ ಉದ್ದೇಶವನ್ನು ಸ್ವಭಾಹ್ ಹಿಮಮಿ ಸಖಾಫಿ ಸುಳ್ಯ ಸಭಿಕರಿಗೆ ತಿಳಿಸಿದರು. ಸಿದ್ದೀಕ್ ಗೂನಡ್ಕ ಕಾರ್ಯಕ್ರಮ ನಿರೂಪಿಸಿದರು. ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಜಾಬಿರ್ ಎಂ ಬಿ ಧನ್ಯವಾದ ಸಮರ್ಪಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0