ಧರ್ಮಸ್ಥಳ: ಡ್ರೋಣ್ ಹಾರಿಸಿ GPR ಸರ್ವೆ ಆರಂಭ: ಸ್ಥಳಕ್ಕೆ ಆಗಮಿಸಿದ SIT ಮುಖ್ಯಸ್ಥ ಪ್ರಣಬ್ ಮೊಹಾಂತಿ
ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಹತ್ಯೆ ಪ್ರಕರಣದ ತನಿಖೆ ಮಹತ್ವದ ಹಂತ ತಲುಪಿದ್ದು, ವಿಶೇಷ ತನಿಖಾ ತಂಡ (SIT) ದೂರುದಾರನ ಸಮ್ಮುಖದಲ್ಲಿ ಡ್ರೋನ್ ಬಳಸಿ ಗ್ರೌಂಡ್ ಪೆನಿಟ್ರೇಟಿಂಗ್ ರಾಡಾರ್ (GPR) ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯನ್ನು ಪ್ರಮುಖವಾಗಿ ಪ್ರಕರಣದ ಪ್ರಮುಖ ಸ್ಥಳವಾದ ಸ್ಪಾಟ್ ನಂಬರ್ 13 ನಲ್ಲಿ ನಡೆಸಲಾಗಿದೆ. ತನಿಖೆಯ ಉಸ್ತುವಾರಿ ವಹಿಸಿಕೊಂಡಿರುವ SIT ಮುಖ್ಯಸ್ಥ ಪ್ರಣಬ್ ಮೊಹಾಂತಿ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಎಸ್‌ಐಟಿ ಕಾರ್ಯಾಚರಣೆಯಲ್ಲಿ ಈಗಾಗಲೇ ಕೆಲವು ಸ್ಥಳಗಳಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದು, ಸ್ಪಾಟ್ ನಂಬರ್ 13 ತನಿಖೆಯ ಪ್ರಮುಖ ಕೇಂದ್ರಬಿಂದುವಾಗಿದೆ.
ಈ ಸ್ಥಳವು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮತ್ತು ಡ್ಯಾಮ್‌ಗೆ ಹತ್ತಿರದಲ್ಲಿರುವುದರಿಂದ ಹಸ್ತಚಾಲಿತ ಅಗೆಯುವಿಕೆ ಕಷ್ಟವಾಗಿತ್ತು. ಈ ಕಾರಣದಿಂದ, ಎಸ್‌ಐಟಿ ಅಧಿಕಾರಿಗಳು ಮಣ್ಣನ್ನು ಅಗೆಯದೇ ಭೂಮಿಯ ಆಳವನ್ನು ಸ್ಕ್ಯಾನ್ ಮಾಡಲು ಜಿಪಿಆರ್ ತಂತ್ರಜ್ಞಾನ ಹೊಂದಿರುವ ಡ್ರೋನ್ ಅನ್ನು ಬಳಸಿದ್ದಾರೆ. ಇದು ಭೂಗತ ರಚನೆಗಳು, ಹೂತುಹೋಗಿರುವ ವಸ್ತುಗಳು ಅಥವಾ ಮಣ್ಣಿನಲ್ಲಿನ ವ್ಯತ್ಯಾಸಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.
ಜಿಪಿಆರ್ ತಂತ್ರಜ್ಞಾನ ತಜ್ಞರ ಜೊತೆಗೆ ಎಸ್‌ಐಟಿ ಅಧಿಕಾರಿಗಳು ಈ ವೈಮಾನಿಕ ಸಮೀಕ್ಷೆ ನಡೆಸಿ ಭೂಗತ ರಚನೆಗಳ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಈ ಸಮೀಕ್ಷೆಯ ಫಲಿತಾಂಶಗಳು ಮಾನವ ಅವಶೇಷಗಳು ಇವೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ನಿರ್ಣಾಯಕವಾಗಿದ್ದು, ತನಿಖೆಯ ಮುಂದಿನ ಹಂತಕ್ಕೆ ಮಾರ್ಗದರ್ಶನ ನೀಡುವ ನಿರೀಕ್ಷೆಯಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



