SSF ಬೆಳ್ತಂಗಡಿ ಡಿವಿಷನ್ ನಾಯಕರ ಸೆಕ್ಟರ್ ಭೇಟಿ.

Jul 21, 2025 - 17:59
SSF ಬೆಳ್ತಂಗಡಿ ಡಿವಿಷನ್ ನಾಯಕರ ಸೆಕ್ಟರ್ ಭೇಟಿ.

ಸಕ್ರೀಯತೆಗೆ ಮನಸ್ಸುಗಳನ್ನು ಪೋಣಿಸುವ ಎಂಬ ಧ್ಯೇಯ ವಾಕ್ಯದೊಂದಿಗೆ SSF ಬೆಳ್ತಂಗಡಿ ಡಿವಿಷನ್ ಸಮಿತಿಯು ಹಮ್ಮಿಕೊಂಡಿದ್ದ ಸೆಕ್ಟರ್ ಸಂಚಾರ ಕಾರ್ಯಕ್ರಮವು SSF ಉಜಿರೆ ಸೆಕ್ಟರ್ ವ್ಯಾಪ್ತಿಯಲ್ಲಿ ದಿನಾಂಕ 20 ಜುಲೈ 2025 ರಂದು ಮಲ್ಜಹ್ ಕ್ಯಾಂಪಸ್ ಉಜಿರೆಯಲ್ಲಿ ನಡೆಯಿತು. 
ದುವಾ ನೇತೃತ್ವ ಮತ್ತು ತರಗತಿ ಮಂಡನೆ  ಸಯ್ಯಿದ್ ಫಹೀಮ್ ಅಹ್ಸನಿ ಅಲ್ ಕಾಮಿಲ್ ಸಖಾಫಿಯವರು ಮಾಡಿದರು ಹಾಗೂ
ಸೆಕ್ಟರ್ ಅಧ್ಯಕ್ಷರಾದ ಶಾಕೀರ್  ಅಧ್ಯಕ್ಷತೆಯನ್ನು ಹಾಗೂ  ಸ್ವಾಗತಿಸಿದರು.
ಈ ಕಾರ್ಯಕ್ರಮವನ್ನು
 ಉಜಿರೆ ಸರ್ಕಲ್ KMJ ಅಧ್ಯಕ್ಷರಾದ ಅಲ್ ಹಾಜಿ ಹೈದರ್ ಮದನಿ ಇವರು  ಉದ್ಘಾಟಿಸಿದರು
ಪ್ರಾಸ್ತಾವಿಕ ಭಾಷಣವನ್ನು  KMJ ಉಜಿರೆ ಸರ್ಕಲ್ ಪ್ರ.ಕಾರ್ಯದರ್ಶಿ ಖಾಲಿದ್ ಮುಸ್ಲಿಯಾರ್ ಮಾತನಾಡಿದರು
ಡಿವಿಷನ್ ಉಪಾಧ್ಯಕ್ಷರಾದ ಲತೀಫ್ ಅಹ್ಸನಿ  ತರಗತಿ ಮಂಡನೆ ಮಾಡಿದರು.
ಡಿವಿಷನ್ ಕಾರ್ಯದರ್ಶಿಯಾದ ನಾಸೀರ್ ಪಡ್ಡಂದಡ್ಕ  ಸೆಕ್ಟರ್ ಹಾಗೂ ಯುನಿಟ್ ಬಗ್ಗೆ ಅವಲೋಕನ ನಡೆಸಿದರು. SSF ಬೆಳ್ತಂಗಡಿ  ಡಿವಿಷನ್ ಅಧ್ಯಕ್ಷರಾದ ಇಸಾಕ್ ಅಳದಂಗಡಿಯವರು ಉಪಸ್ಥಿತರಿದ್ದರು ಹಾಗೂ ಡಿವಿಷನ್ ನಾಯಕರು KMJ ಮತ್ತು SYS ಉಜಿರೆ ಸರ್ಕಲ್ ನಾಯಕರು, ಸೆಕ್ಟರ್ ವ್ಯಾಪ್ತಿಯ SSF ಯೂನಿಟ್ ಕ್ಯಾಬಿನೆಟ್ ಸದಸ್ಯರು ಉಪಸ್ಥಿತರಿದ್ದರು.
ಸೆಕ್ಟರ್ ಪ್ರ.ಕಾರ್ಯದರ್ಶಿಗಳಾದ ರಿಯಾಝ್ ನಿಡಿಗಲ್ ಧನ್ಯವಾದ ಮಾಡಿದರು.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 1