ಜಟ್ಟಿಪಳ್ಳ ಬುಸ್ತಾನುಲ್ ಉಲೂಂ ಮದ್ರಸ ಉತ್ತಮ ಪಲಿತಾಂಶದ ದಾಖಲು
ಹಯಾತುಲ್ ಇಸ್ಲಾಂ ಕಮಿಟಿ ರಿ.ಜಟ್ಟಿಪಳ್ಳದ ಬುಸ್ತಾನುಲ್ ಉಲೂಂ ಮದ್ರಸದ ಜನರಲ್ ಪರೀಕ್ಷಾ ತರಗತಿಗಳ ಪಲಿತಾಂಶ ಶೇಕಡಾ ನೂರರಂತೆ ಉತ್ತಮ ಪಲಿತಾಂಶದ ದಾಖಲಾಗಿದೆ
ಈ ಮೊದಲು ಪ್ರಕಟವಾದ ಮದ್ರಸ ಪಬ್ಲಿಕ್ ಪಲಿತಾಂಶಗಳಲ್ಲಿ ಏಳನೇ ತರಗತಿ ಶೇಕಡಾ ನೂರು ಪಲಿತಾಂಶ ಪಡೆದು ಉಳಿದಂತೆ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಹೊಂದಿರುತ್ತಾರೆ.
ಪ್ರಸಕ್ತ ಅಧ್ಯಯನ ವರ್ಷದಲ್ಲಿ ಉತ್ಸಾಹಿ ಅದ್ಯಾಪಕರುಗಳ ಮಾರ್ಗದರ್ಶನದಲ್ಲಿ ಪಾಠದೊಂದಿಗೆ ಬಹಳಷ್ಟು ಪಠ್ಯೇತರ ಚಟುವಟಿಕೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ
ರಾಷ್ಟ್ರೀಯ ಹಬ್ಬಗಳ ಆಚರಣೆ,ಸಾಂಧರ್ಬಿಕ ಮೋಟಿವೇಶನ್ ತರಗತಿಗಳು,ಶೈಕ್ಷಣಿಕ ಪ್ರವಾಸ,ಪ್ರತಿಭಾ ಪೋಷಣೆ,ವಿವಿಧ ಸ್ಪರ್ಧೆಗಳು, ಮುಂತಾದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಗಮನ ಸೆಳೆಯಲಾಗಿದೆ.
ಮದ್ರಸ ಮುಖ್ಯೋಪಾಧ್ಯಾಯರಾಗಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಹಾಗೂ ಸಹಾಧ್ಯಾಪಕರಾಗಿ ಸಿರಾಜ್ ಸಅದಿ ಅಲೆಕ್ಕಾಡಿಯವರು ಉತ್ತಮವಾಗಿ ಸೇವೆಗೈಯ್ಯುತ್ತಿದ್ದು,ಅವರೊಂದಿಗೆ ಹಯಾತುಲ್ ಕಮಿಟಿ ರಿ.ಜಟ್ಟಿಪಳ್ಳ ಸಾಥ್ ನೀಡುತ್ತಿದ್ದು ರಕ್ಷಕ ಪೋಷಕರು ಬೆಂಬಲಿಸುತ್ತಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



