ದಾರುಲ್ ಹುದಾ ದಅವಾ ಕಾಲೇಜ್ ತಂಬಿನಮಕ್ಕಿಯಲ್ಲಿ ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ರಚನೆ: ಅಧ್ಯಕ್ಷರಾಗಿ ರಾಶಿದ್ ಬಾಳೆಪುಣಿ ಆಯ್ಕೆ

Jul 7, 2025 - 10:09
ದಾರುಲ್ ಹುದಾ ದಅವಾ ಕಾಲೇಜ್ ತಂಬಿನಮಕ್ಕಿಯಲ್ಲಿ ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ರಚನೆ: ಅಧ್ಯಕ್ಷರಾಗಿ ರಾಶಿದ್ ಬಾಳೆಪುಣಿ ಆಯ್ಕೆ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ವ್ಯಾಪ್ತಿಯ ತಂಬಿನಮಕ್ಕಿ ಎಂಬ ಸಂಸ್ಥೆಯೊಂದರಲ್ಲಿ ಸುಮಾರು 20 ವರ್ಷಗಳಿಂದ ಕಾರ್ಯಚರಿಸಿ ಬರುತ್ತಿರುವ "manshaul Bayaan Students Union" ಸಾಹಿತ್ಯ ಒಕ್ಕೂಟದ 2025- 26 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ದಿನಾಂಕ 29/06/2025 ರಂದು ಚುನಾವಣೆ ಆಯೋಜಿಸಿದ್ದು, ವಿದ್ಯಾರ್ಥಿಗಳಿಂದಲೇ ಪದಾಧಿಕಾರಿಗಳನ್ನು ಮತದಾನದ ಮೂಲಕ ಆಯ್ಕೆ ಮಾಡಲಾಯಿತು.
ಸಂಸ್ಥೆಯ ನೇತೃತ್ವ ಸೈಯದ್ ಮುಸ್ತಫಾ ಪೂಕೋಯ ತಂಙಳ್ರವರು ಹೊಸ ಸಮಿತಿಯನ್ನು ಪ್ರಕಟಿಸಿದರು.
ಅದ್ಯಕ್ಷರಾಗಿ ರಾಶಿದ್ ಬಾಳೆಪುಣಿ , ಕಾರ್ಯದರ್ಶಿಯಾಗಿ ಝಿಯಾದ್ ಬೆಳ್ಳಾರೆ , ಹಣಕಾಸು ಕಾರ್ಯದರ್ಶಿಯಾಗಿ ಸಾಬಿತ್ ಅಯ್ಯಂಗೇರಿ ಯವರನ್ನು ನೇಮಿಸಲಾಯಿತು. ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗಾಗಿ ತುಫೈಲ್ ತುರ್ಕಳಿಕೆ & ಸಅದ್ ಬೆಳ್ಳಾರೆ, ಎಂಬ್ರೇಝ್ 4.0 ಕಾರ್ಯನಿರ್ವಾಹಕರಾಗಿ ಸಾಬಿತ್ ನಿಂತಿಕಲ್ & ತ್ವಲ್ಹತ್ ತಿಂಗಳಾಡಿ , ಬುರ್ದಾ ಪ್ರಚಾರಕರಾಗಿ ಆಸಿಫ್ ಕಾಸರಗೋಡು & ಮಹರೂಫ್ ಕೊಡಗು , ಕ್ಯಾಂಪಸ್ ನಾಯಕರಾಗಿ ಫಾಯಿಝ್ ಮಂಚಿ & ಸ್ವಾದಿಕ್ ಬೆಳ್ಳಾರೆ , ಗ್ರಂಥಾಲಯ ನಿರ್ವಾಹಕರಾಗಿ ಮುರ್ಷಿದ್ ಮಲ್ಲೂರು & ಅಜೀಂ ಎಣ್ಮೂರು , ಆರೋಗ್ಯ ಮಂತ್ರಿಗಳಾಗಿ ತ್ವಾಹ ಕೊಡಗು & ರಫೀಕ್ ವಿಟ್ಲ ಹಾಗೂ ಪಬ್ಲಿಷಿಂಗ್ ಆಶಿಕ್ ತಿಂಗಳಾಡಿ & ಜುನೈದ್ ಕಡಬ ರವರನ್ನು ಆಯ್ಕೆ ಮಾಡಲಾಯಿತು.
ಪ್ರಸ್ತುತ ಸಭೆಯಲ್ಲಿ ಸಂಸ್ಥೆಯ ಜನರಲ್ ಮ್ಯಾನೇಜರ್ ಖಲೀಲ್ ಹಿಮಮಿ ಸಖಾಫಿ, ಸಂಸ್ಥೆಯ ಮುದ್ರಿಸರಾಗಿರುವ ಜಾಫರ್ ಅಲ್ ವಾರಿಸ್ ಸಖಾಫಿ, ಕಲಂದರ್ ಹಿಮಮಿ ಸಖಾಫಿ, ಸಿದ್ದೀಕ್ ಹಿಮಮಿ ಸಖಾಫಿ, ನಾಸಿರ್ ಸುಖೈಫಿ, ಮೂಸ ಜೌಹರಿ ಉಪಸ್ಥಿತರಿದ್ದರು.

What's Your Reaction?

Like Like 4
Dislike Dislike 0
Love Love 4
Funny Funny 0
Angry Angry 0
Sad Sad 0
Wow Wow 2