ಕೋಚಿಂಗ್ ಸೆಂಟ‌ರ್'ಗಳ ನೋಂದಣಿ ಕಡ್ಡಾಯ, ತಪ್ಪಿದ್ದಲ್ಲಿ ಕಾನೂನು ಕ್ರಮ.!

Jun 28, 2025 - 11:13
ಕೋಚಿಂಗ್ ಸೆಂಟ‌ರ್'ಗಳ ನೋಂದಣಿ ಕಡ್ಡಾಯ, ತಪ್ಪಿದ್ದಲ್ಲಿ ಕಾನೂನು ಕ್ರಮ.!

ಕರ್ನಾಟಕ ಶಿಕ್ಷಣ ಕಾಯ್ದೆ 1983 ಅನುಚ್ಚೇದ 35ರ ಪ್ರಕಾರ ಹಾಗೂ ಕರ್ನಾಟಕ ಟ್ಯುಟೋರಿಯಲ್ ಇನ್ಸಿಟ್ಯೂಷನ್ಸ್ ನಿಯಮಗಳು 2001 ಈ ನಿಯಮವು ಸರ್ಕಾರದ ಅಧಿಸೂಚನೆ ಇಡಿ 43 ವಿವಧ 2000, ದಿ: 05/03/2002 ರಿಂದ ಜಾರಿಗೆ ಬಂದಿದ್ದು, ಈ ನಿಯಮಗಳ ಅಡಿಯಲ್ಲಿ ಪದವಿ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದ ಕೋಚಿಂಗ್ ಸೆಂಟ‌ರ್/ ಸಂಸ್ಥೆಗಳನ್ನು ನಡೆಸಲು ಉದ್ದೇಶಿಸಿದ ಹಾಗೂ ಈಗಾಗಲೇ ನಡೆಸುತ್ತಿರುವ ಕೋಚಿಂಗ್ ಸೆಂಟರ್/ಸಂಸ್ಥೆಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕಾಗಿದ್ದು, ಮತ್ತು ಪ್ರತಿ ವರ್ಷ ನವೀಕರಿಸಿಕೊಳ್ಳಬೇಕು.
ಅನಧಿಕೃತವಾಗಿ ಕೋಚಿಂಗ್ ಸೆಂಟರ್/ಸಂಸ್ಥೆಗಳನ್ನು ನಡೆಸುತ್ತಿರುವುದು ಕಂಡುಬಂದಲ್ಲಿ ಕಾನೂನು ರೀತ್ಯಾ ಕ್ರಮಗಳನ್ನು ಜರುಗಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಹದವಿ ಪೂರ್ವ ಶಿಕ್ಷಣ ಇಲಾಖೆ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇವರನ್ನು ಸಂಪರ್ಕಿಸುವುದು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0