ಬೆಳಗಾವಿ: ಲೋಕೇಶ್ವರ ಸ್ವಾಮಿ ಮೇಲೆ ಅತ್ಯಾಚಾರ ಕೇಸ್ ಬೆನ್ನಲ್ಲೇ ರಾಮ ಮಂದಿರ ಮಠವೂ ಧ್ವಂಸ
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿಯ ರಾಮಮಂದಿರ ಮಠವನ್ನು ಸ್ಥಳೀಯಾಡಳಿತ ಧ್ವಂಸಗೊಳಿಸಿದೆ.
ಅಪಹರಣ ಮತ್ತು ಅತ್ಯಾಚಾರ ಆರೋಪದಲ್ಲಿ ಮಠದ ಲೋಕೇಶ್ವರ ಮಹಾರಾಜ ಸ್ವಾಮಿಯನ್ನು ಕಳೆದ ವಾರ ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ, ಮಠ ಕೂಡ ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಸದ್ಯ ಮಠವನ್ನು ತೆರವು ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್, ತಹಶಿಲ್ದಾರ ಸಮ್ಮುಖದಲ್ಲೇ ಕಾರ್ಯಾಚರಣೆ ನಡೆದಿದೆ.
ಲೋಕೇಶ್ವರ ಮಹಾರಾಜ ಸ್ವಾಮಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿ 8-10 ವರ್ಷದ ಹಿಂದೆ ಮಠ ನಿರ್ಮಾಣ ಮಾಡಿ ರಾಮ ಮಂದಿರ ಎಂದು ಹೆಸರಿಟ್ಟಿದ್ದರು. ಆದರೆ, ಅಲ್ಲಿ ಮಾಡಬಾರದ ಕೆಲಸ ಮಾಡುವುದರ ಜೊತೆಗೆ ಬಾಲಕಿಯನ್ನು ರೇಪ್ ಮಾಡಿದ ಕೇಸ್ ಕೂಡ ಅವರ ವಿರುದ್ಧ ದಾಖಲಾಗಿದೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



