ಮುನವ್ವಿರುಲ್ ಇಸ್ಲಾಂ ಗಾಂಧಿನಗರ ಮದ್ರಸದಲ್ಲಿ ಮಾದಕ ದ್ರವ್ಯ ವಿರುದ್ಧ ಅಭಿಯಾನ & ಸ್ನೇಹ ಸಹವಾಸ ಏಕದಿನ ಶಿಬಿರ

May 26, 2025 - 18:31
ಮುನವ್ವಿರುಲ್ ಇಸ್ಲಾಂ ಗಾಂಧಿನಗರ ಮದ್ರಸದಲ್ಲಿ ಮಾದಕ ದ್ರವ್ಯ ವಿರುದ್ಧ ಅಭಿಯಾನ  & ಸ್ನೇಹ ಸಹವಾಸ ಏಕದಿನ ಶಿಬಿರ

ಮುನವ್ವಿರುಲ್ ಇಸ್ಲಾಂ ಹೈಯರ ಸೆಕೆಂಡರಿ ಮದ್ರಸ ಗಾಂಧಿನಗರದಲ್ಲಿ  ದಿನಾಂಕ 26-05-2025 ಸೋಮವಾರ ದಂದು ಮಾದಕ ದ್ರವ್ಯದ ವಿರುದ್ಧ ಅಭಿಯಾನ ಹಾಗೂ ಸ್ನೇಹ ಸಹವಾಸ ಕಾರ್ಯಕ್ರಮವು ಸದರ್ ಉಸ್ತಾದರ ಸಿರಾಜುದ್ದೀನ್ ಸಖಾಫಿಯವರ ನೇತೃತ್ವದಲ್ಲಿ ನಡೆಯಿತು. ಮದ್ರಸ ವಿದ್ಯಾರ್ಥಿ ಫರ್ಹಾನ್ ರವರ  ಖಿರಾಅತ್ ಮೂಲಕ ಆರಂಭಿಸಿ ಸಭೆಯ ಅಧ್ಯಕ್ಷತೆಯನ್ನು  SBS ಅಧ್ಯಕ್ಷ ಯಾಸಿರ್ ಅರಫಾತ್ ವಹಿಸಿ ಕಾರ್ಯದರ್ಶಿ ಮುಹಮ್ಮದ್ ಆಶಿಕ್ ಸ್ವಾಗತಿಸಿದರು. ಹುಸೈನಾರ್ ಮದನಿ ಕುಂಜಿಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾದಕತೆಯ ಅನಾಹುತಗಳ ಬಗ್ಗೆ ಮಾತನಾಡಿದರು. ರಿಯಾನ್ ಸಅದಿಯರವರು ಇಸ್ತಿರಾಹ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ನಂತರ ಅಬೂಬಕ್ಕರ್ ಸಖಾಫಿ ಉಸ್ತಾದರು ಮೋಟಿವೇಶನ್ ನಡೆಸಿದರು. ಹನೀಫ್ ಸಖಾಫಿ ಉಸ್ತಾದರು ಹದೀಸ್ ಮೂಲಕ ತಸ್ಬೀಹ್ ನ ಮಹತ್ವವನ್ನು ವಿವರಿಸಿದರು. ಇರ್ಫಾನ್ ಹಿಮಮಿ ವಿದ್ಯಾರ್ಥಿಗಳಿಗೆ  ಪೂರ್ವಿಕರ ಕಥೆಯ ಮೂಲಕ ಹಿತನುಡಿ ನೀಡಿದರು.  ನಂತರ ಉಝೈರ್ ಅಬ್ಬಾಸ್ ಕಥೆ ಹೇಳಿ ಫರಾಝ್ ಮತ್ತು ಅಬ್ರಾರ್ ಕ್ರಾಂತಿಗೀತೆಯನ್ನು ಹಾಡಿದರು. ನಂತರ ಸದರ್ ಉಸ್ತಾದ್ ಮಾದಕ ವಿರುದ್ಧ ಉತ್ತಮ ಸಂದೇಶ ನೀಡಿದರು.  ಕಾರ್ಯಕ್ರಮದಲ್ಲಿ ಮದ್ರಸ ಅಧ್ಯಾಪಕರದ ಇರ್ಫಾನ್ ಸ ಅದಿ ಉಬೈದುಲ್ಲಾಹ್ ಸ ಅದಿ ಶಿಹಾಬ್ ಫಾಳಿಲಿ ಜಲೀಲ್ ಸ ಅದಿ ಉಪಸ್ಥಿತರಿದ್ದರು. ಮುಸ್ತಫ ಅದನಿಯವರ ಧ್ಯನ್ಯವಾದದ ಮೂಲಕ ಕಾರ್ಯಕ್ರಮವು ಕೊನೆಗೊಂಡಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0