ನಾಳೆ ಚೆನ್ನಾರ್ ನಲ್ಲಿ ತಹ್ಲೀಲ್ ಮಜ್ಲಿಸ್ : ಯಶಸ್ವಿಗೊಳಿಸಲು ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ.ಈಸ್ಟ್ ಜಿಲ್ಲೆ ಕರೆ
ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಝೋನ್ ವತಿಯಿಂದ ಹಾಗೂ ಸ್ಥಳೀಯ ಸರ್ವ ಸುನ್ನಿ ಸಂಘಟನೆಗಳ ಸಹಭಾಗಿತ್ವದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಸುನ್ನಿ ಸಂಘ ಕುಟುಂಬದ ಉಮರಾ ನಾಯಕರೂ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕೌನ್ಸಿಲರೂ, ಜಿಲ್ಲಾ ಸದಸ್ಯರೂ, ಪುತ್ತೂರು ಅಧ್ಯಕ್ಷರಾದ ಮರ್ಹೂಂ ಅಬ್ದುಲ್ ಕರೀಂ ಹಾಜಿ ಚೆನ್ನಾರ್ ಹಾಗೂ ಅವರ ಸಹೋದರ ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಅಲ್ ಕಸೀಮ್ ಝೋನ್ ಸದಸ್ಯರಾದ ಮರ್ಹೂಂ ಫಯಾಝ್ ಹಾಜಿ ಚೆನ್ನಾರ್ ರವರ ಹೆಸರಿನಲ್ಲಿ ನಾಳೆ (15.05.2025) ಚೆನ್ನಾರ್ ಮನೆಯಲ್ಲಿ ಅಸರ್ ನಮಾಝ್ ಬಳಿಕ ನಡೆಯಲಿರುವ ಬೃಹತ್ ತಹ್ಲೀಲ್ ಹಾಗೂ ದುಆಃ ಮಜ್ಲಿಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕರು, ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷರಾದ ಜಿಎಂಎಂ ಕಾಮಿಲ್ ಸಖಾಫಿ ಉಸ್ತಾದರು ಕರೆ ನೀಡಿದ್ದಾರೆ.
ಅವರು ದಿನಾಂಕ 11.05.2025 ರಂದು ಪುತ್ತೂರು ಬನ್ನೂರು ಸುನ್ನಿ ದಅವಾ ಸೆಂಟರಿನಲ್ಲಿ ನಡೆದ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯ ಪ್ರಥಮ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಸಾದಾತುಗಳು, ಪ್ರಮುಖ ಉಲಮಾ ಉಮರಾ ನಾಯಕರು, ರಾಜ್ಯ ಸಂಘಟನಾ ನಾಯಕರು ಭಾಗವಹಿಸಲಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುನ್ನಿ ಸಂಘ ಕುಟುಂಬದ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
What's Your Reaction?
Like
0
Dislike
0
Love
0
Funny
0
Angry
1
Sad
0
Wow
0



