ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ನಮ್ಮ ಮಕ್ಕಳನ್ನು ದುರ್ಬಳಕೆ ಮಾಡುತ್ತಿದ್ದಾರೆ: ಹತ್ಯೆಯಾದ ಸುಹಾಸ್ ಶೆಟ್ಟಿಯ ತಂದೆ

May 3, 2025 - 11:09
ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ನಮ್ಮ ಮಕ್ಕಳನ್ನು ದುರ್ಬಳಕೆ ಮಾಡುತ್ತಿದ್ದಾರೆ: ಹತ್ಯೆಯಾದ ಸುಹಾಸ್ ಶೆಟ್ಟಿಯ ತಂದೆ

ಮಂಗಳೂರು: ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ನಮ್ಮ ಮಕ್ಕಳನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಹತ್ಯೆಯಾದ ಸುಹಾಸ್ ಶೆಟ್ಟಿಯ ತಂದೆ ಮೋಹನ್ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ಈ ವಯಸ್ಸಿನಲ್ಲಿ ನಮ್ಮ ಮಕ್ಕಳು ನಮ್ಮ ಕಣ್ಣಾರೆ ಸಾವಿಗೀಡಾದರೆ ಹೇಗೆ ಸಹಿಸಲು ಸಾಧ್ಯ?. ನಮ್ಮ ಅಮಾಯಕ ಮಕ್ಕಳು ಹಿಂದೂ ಹಿಂದೂ ಅಂತ ಬೀದಿಗೆ ಇಳಿಯುತ್ತಾರೆ. ಮನೆಯ ಆಧಾರ ಸ್ತಂಭವಾಗಿದ್ದ ಅವನಿಗೆ ಕೇವಲ 31 ವರ್ಷ ಪ್ರಾಯ. ಈಗ ನಮಗೆ ಯಾರಿದ್ದಾರೆ ಎಂದು ಹೇಳಿದರು.

ರಾಜಕೀಯದವರು ನಾಲ್ಕು ದಿನ ನಮ್ಮ ಮನೆಗೆ ಬಂದು ಸಮಾಧಾನ ಹೇಳಿ ಹೋಗುತ್ತಾರೆ. ಮತ್ತೆ ತಿರುಗಿಯೂ ನೋಡುವುದಿಲ್ಲ ಎಂದು ಹೇಳಿಕೊಂಡರು.

ಮಗನನ್ನು ಕಳೆದುಕೊಂಡಿದ್ದೇವೆ. ನಮಗಿನ್ನು ಯಾರೂ ಇಲ್ಲ. ಈ ವಯಸ್ಸಿನಲ್ಲಿ ಮಗನನ್ನು ಕಳಕೊಂಡು ಅಪ್ಪ-ಅಮ್ಮ ಆದ ನಾವು ಕೊರಗುವಂತಾಗಿದೆ ಎಂದು ಮೋಹನ್ ಶೆಟ್ಟಿ ಭಾವುಕರಾದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0