ಮೈಸೂರಿನಲ್ಲಿ ಖಿದ್ಮಾ ಕನ್ನಡ ಸಂಗಮ
ಖಿದ್ಮಾ ಫೌಂಡೇಶನ್ ಕರ್ನಾಟಕ, ಅನ್ನದಾತ ಪ್ರಕಾಶನ ಹಾಗು ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಇವರ ಸಹಯೋಗದಲ್ಲಿ ದಿನಾಂಕ 25/01/2026 ಭಾನುವಾರ ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಖಿದ್ಮಾ ಕನ್ನಡ ಸಂಗಮ ನಡೆಯಲಿದೆ ಎಂದು ಖಿದ್ಮಾ ಫೌಂಡೇಶನ್ ಕರ್ನಾಟಕ ಅಧ್ಯಕ್ಷ ಆಮಿರ್ ಅಶ್ಅರೀ ಬನ್ನೂರು ತಿಳಿಸಿದ್ದಾರೆ. ಪ್ರೌಢಶಾಲೆ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಚಟುವಟಿಕೆ, ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಚಾಮರಾಜ ಶಾಸಕ ಹರೀಶ್ ಗೌಡರು, ಮಡ್ಡೀಕೆರೆ ಗೋಪಾಲ್, ಎಸ್.ಬಿ.ಎಂ. ಮಂಜು, ಹುಮಾಯೂನ್ ಮೈಸೂರು, ಎಂ.ಎಂ ಬಾಷಾ ನಂದಿ, ಯುಸುಫ್ ಎಚ್.ಬಿ, ಸುಹೈಲ್ ಕಂದಕ್, ನೂರ್ ಅಸ್ಮಾ, ರಾಧಾಮಣಿ ಎಂ, ನವೀದ್ ಮುಲ್ಲಾ, ಮೆಹಬೂಬ್ ಸಾಹೇಬ್ ವೈ.ಜೆ, ಮಲ್ನಾಡ್ ಮೆಹಬೂಬ್, ಹಾಶಿಂ ಬನ್ನೂರು ಹಾಗೂ ಅಮಿತಾ ಅಶೋಕ್ ಪ್ರಸಾದ್ ಭಾಗವಹಿಸಲಿದ್ದಾರೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



