ವೈವಿಧ್ಯತೆಗಳಿಂದ ವಿದ್ಯಾರ್ಥಿಗಳ ಗಮನ ಸೆಳೆದು ಮಾದರೀಯಾದ ಜಟ್ಟಿಪಳ್ಳ ಮದ್ರಸ ಶೈಕ್ಷಣಿಕ ಪ್ರವಾಸ

Dec 31, 2025 - 10:39
ವೈವಿಧ್ಯತೆಗಳಿಂದ ವಿದ್ಯಾರ್ಥಿಗಳ ಗಮನ ಸೆಳೆದು ಮಾದರೀಯಾದ ಜಟ್ಟಿಪಳ್ಳ ಮದ್ರಸ ಶೈಕ್ಷಣಿಕ ಪ್ರವಾಸ

ಹಯಾತುಲ್ ಇಸ್ಲಾಂ ಕಮಿಟಿ ರಿ. ಜಟ್ಟಿಪಳ್ಳ ಇದರ ಬುಸ್ತಾನುಲ್ ಉಲೂಂ ಮದ್ರಸ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸದಲ್ಲಿ ಮತ್ತೊಮ್ಮೆ ಮಾದರೀಯರಾಗಿ ನಾಡಿನ ಗಮನ ಸೆಳೆದರು.ಕೊಡಗಿನ ಪ್ರಸಿದ್ಧ ಝಿಯಾರತ್ ಕೇಂದ್ರ ಎಮ್ಮೆಮಾಡು ಮಖಾಂ ಝಿಯಾರತ್ ಗೈದು ಆ ಬಳಿಕ ಚೆರಿಯ ಪರಂಬು ಮಖಾಂ ಝಿಯಾರತ್ ನಡೆಸಿ ನಾಡಿನ ಕ್ಷೇಮಾಭಿವೃದ್ಧಿಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಮಡಿಕೇರಿಯ ರಾಜಾಸೀಟ್ ಭೇಟಿಯಾಗಿ ಪ್ರಕೃತಿಯ ಸುಂದರ ಸೊಭಗನ್ನು ಅನುಭವಿಸಿದರು
ನಂತರ ಹಾರಂಗಿ ಜಲಾಶಯಕ್ಕೆ ತೆರಳಿ ಆ ಬಗ್ಗೆ ವಿವರಣೆ ಪಡೆದರು.ನೇರವಾಗಿ ಕಾವೇರಿ ನಿಸರ್ಗಧಾಮಕ್ಕೆ ತೆರಳಿ ವಿವಿಧ ಮನುಷ್ಯ ಕಲ್ಚರಲ್ ಸ್ಟಾಚ್ಯೋಗಳ ಮೂಲಕ ಚಿಂತಿಸಿದರು.ಅಲ್ಪ ಮಟ್ಟಿನ ಆಟೋಟಗಳಲ್ಲಿ ವಿದ್ಯಾರ್ಥಿಗಳು ತಲ್ಲೀನರಾದರು.ಇದೇ ಸಂಧಂರ್ಭ ಕಾವೇರಿ ನಿಸರ್ಗಧಾಮದ ಅಭಿವೃದ್ಧಿಯಲ್ಲಿ ಸಂಬಂಧ ಪಟ್ಟವರು ಗಮನ ಹರಿಸಬೇಕಾದ ಅನಿವಾರ್ಯತೆ ಬಗ್ಗೆ ಪರಸ್ಪರ ಹೇಳಿಕೊಂಡರು.
ಪಕ್ಕದಲ್ಲಿರುವ ಸ್ಕೇರಿ ಹೌಸ್ ವೀಕ್ಷಿಸಿ ಸಂತಸ ಪಟ್ಟರು
ಮರುದಿನ ಶ್ರೀ ಚಾಮರಾಜೇಂದ್ರ ಮೃಗಾಲಯ ಮೈಸೂರು ಸಂದರ್ಶಿಸಿ ವೈವಿಧ್ಯಮಯ ವನ್ಯ ಜೀವಿಗಳ ವೀಕ್ಷಣೆ ನಡೆಸಿ ಅವುಗಳ ಬಗ್ಗೆ ಅಧ್ಯಯಯನ ನಡೆಸಲು ಉತ್ಸುಕರಾದರು.ಲೋಕ ರಾಜನ್ ಅಕ್ವಾ ವೆಲ್ಡ್ ಭೇಟಿಯಾಗಿ ನೂರಾರು ಬಗೆಯ ಜಲಚರ ಜೀವಿಗಳನ್ನು ವೀಕ್ಷಿಸಿ ಕಣ್ತುಂಬಿದ್ದು,ಅವುಗಳ ಅನ್ವೇಷಣೆಗೆ ದಾರಿಯಾಯಿತು.
ಮಿರರ್ ಮೇಝ್ ನಲ್ಲಿ ದಾರಿ ಹುಡುಕಿ ಬಚಾವಾದರು.
ಸ್ನೋ ಸಿಟಿಯ ಹಿಮ - ವಿಷಯದ ಚಟುವಟಿಕೆಗಳೊಂದಿಗೆ ಆನಂದ ಪಡೆದರು.
ಜನ ಜಂಗುಳಿಯ ಮಧ್ಯೆ ಪ್ರಖ್ಯಾತ ಮೈಸೂರು ಪಾಲೇಸ್ ವೀಕ್ಷಿಸಿದರು. ಮೈಸೂರು ರೈಲ್ವೆ ಮ್ಯೂಸಿಯಂ ವಿದ್ಯಾರ್ಥಿಗಳ ಗಮನ ಸೆಳೆಯಿತು.ಅಲ್ಲಿಯ ಪುರಾತನ ರೈಲ್ ಬೋಗಿಗಳಲ್ಲಿ ಕುಣಿದು ಕುಪ್ಪಳಿಸಿದರು
ಪುಟಾಣಿ ರೈಲ್ ನ ಸಂಚಾರ ಆನಂದವಾಯಿತು.ರೈಲ್ವೆ ಕಾರ್ಯ ಚಟುವಟಿಕೆಗಳ ತಿಳುವಳಿಕೆಗೆ ಇದೊಂದು ಹೆಜ್ಜೆಯಾಯಿತು.
ಕೊನೆಯದಾಗಿ ಕೃಷ್ಣರಾಜಸಾಗರ ಬೃಂದಾವನ ಉದ್ಯಾನವನಕ್ಕೆ ತೆರಳಿ ಅದ್ಬುತವಾದ ಸಂಜೆ ನೀರಿನ ಕಾರಂಜಿ ಪ್ರದರ್ಶನವನ್ನು ವೀಕ್ಷಿಸಿ ವಿದ್ಯಾರ್ಥಿ ಮನಸ್ಸು ಹುರಿದುಂಬಿತು. ವಿಶಾಲವಾದ ನೀರಿನ ಅಣೆಕಟ್ಟು ಮತ್ತು ಅದರ ಸದುಪಯೋಗದ ಮಾಹಿತಿ ಪಡೆದುಕೊಂಡರು.
ಪ್ರಸ್ತುತ ಕೆ ಆರ್ ಎಸ್ ತೆರಳುವ ರಸ್ತೆ ಅಭಿವೃದ್ಧಿಯಾಗಿ ಸಂಚಾರ ಸುಗಮ ಗೊಳಿಸುವುದು ಕಾಲದ ಬೇಡಿಕೆಯಾಗಿದೆಯೆಂದು  ಅಭಿಪ್ರಾಯಪಟ್ಟರು.
ಆಧ್ಯಾತ್ಮಿಕತೆ,ಪಾಠ,ಆಟ,ಊಟ ಗಳೊಂದಿಗೆ ಪ್ರವಾಸವು ಸಂಪನ್ನವಾಯಿತು.ಮಾರ್ಗದರ್ಶಕರಾಗಿ ಮದ್ರಸ ಸದರ್ ಉಸ್ತಾದ್ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ,ಸಹಾಧ್ಯಾಪಕ ಸಿರಾಜ್ ಸಅದಿ ಅಲೆಕ್ಕಾಡಿ ನೇತೃತ್ವ ವಹಿಸಿದರು.
ರಕ್ಷಕ ಪೋಷಕರು ಸಹಕರಿಸಿದರು.
ಹಯಾತುಲ್ ಇಸ್ಲಾಂ ಕಮಿಟಿ ರಿ. ಜಟ್ಟಿಪಳ್ಳ ಪ್ರೋತ್ಸಾಹಿಸಿದರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0