SSF ಮಡಂತ್ಯಾರು ಸೆಕ್ಟರ್ ವಾರ್ಷಿಕ ಮಹಾಸಭೆ : ನೂತನ ಸಮಿತಿ ಅಸ್ತಿತ್ವಕ್ಕೆ
ಅಧ್ಯಕ್ಷರಾಗಿ ಮಹಮ್ಮದ್ ರಾಝಿಕ್ ಮಾಲಾಡಿ, ಉಪಾಧ್ಯಕ್ಷರಾಗಿ ಹಾಶಿಮ್ ಸಅದಿ ಅರೋದ್ದು, ಪ್ರಧಾನ ಕಾರ್ಯದರ್ಶಿಯಾಗಿ ಅಲ್ಫಾಝ್ ಇರ್ವತ್ತೂರ್ ಪದವು ಕೋಶಾಧಿಕಾರಿಯಾಗಿ ಅಬ್ದುಲ್ ರಶೀದ್ ಮಾಲಾಡಿ ಆಯ್ಕೆ.
ಸಾತ್ವಿಕ ಪರಂಪರೆಯುಳ್ಳ ದೇಶದ ಅತಿದೊಡ್ಡ ವಿದ್ಯಾರ್ಥಿ ಸಂಘಟನೆ SSF ಇದರ ಮಡಂತ್ಯಾರು ಸೆಕ್ಟರಿನ ವಾರ್ಷಿಕ ಮಹಾ ಸಭೆಯು ದಿನಾಂಕ 20/12/2025 ರಂದು ಶನಿವಾರ ಮದ್ರಸ ಸಭಾಂಗಣ ಅರೋದ್ದಿನಲ್ಲಿ ನಡೆಯಿತು. ಸ್ಥಳೀಯ ಖತೀಬರಾದ ರಾಶಿದ್ ಅಹ್ಸನಿ ಉಸ್ತಾದರ ದುಆದ ಮುಖೇನ ಪ್ರಾರಂಭಗೊಂಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ರಶೀದ್ ಮಾಲಾಡಿ ವಹಿಸಿದ್ದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಾಶಿಮ್ ಸಅದಿ ಅರೋದ್ದು ಸ್ವಾಗತಿಸಿದ ಕಾರ್ಯಕ್ರಮವನ್ನು ಸ್ಥಳೀಯ ಖತೀಬರಾದ ರಾಶಿದ್ ಅಹ್ಸನಿ ಉಸ್ತಾದರು ಪ್ರಾಸ್ತವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ಉಧ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲಿದ್ದ ಸ್ಥಳೀಯ ಜಮಾಅತ್ ಕಮಿಟಿ ಅಧ್ಯಕ್ಷರು ಕಾರ್ಯಕ್ರಮಕ್ಕೆ ಶುಭಹಾರೈಸಿದರು, ಕಾರ್ಯಕ್ರಮದಲ್ಲಿ ಸ್ಥಳೀಯ ಸದರ್ ಉಸ್ತಾದರು ಮತ್ತು ಯೂನಿಟ್ ಗಳಿಂದ ಆಯ್ಕೆಯಾದ ಸೆಕ್ಟರ್ ಕೌನ್ಸಿಲರ್ ಗಳು ಉಪಸ್ಥಿತರಿದ್ದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವದಲ್ಲಿ ತಮ್ಮ ವಿಶಿಷ್ಟ ಸಾಧನೆಯ ಮೂಲಕ ಗಮನಸೆಳೆದು ಸೆಕ್ಟರ್ ನ ಕೀರ್ತಿಯನ್ನು ಉತ್ತುಂಗಕ್ಕೆರಿಸಿದ ರಾಷ್ಟ್ರ ಪ್ರತಿಭೆಗಳಿಗೆ ಗೌರವ ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು. SSF ಮಡಂತ್ಯಾರು ಸೆಕ್ಟರ್ ಸಮಿತಿಯ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ, ಎರಡು ಬಾರಿ ಅಧ್ಯಕ್ಷರಾಗಿ, ಸಾಹಿತ್ಯೋತ್ಸವ ಸಮಿತಿಯ ಚೇರ್ಮನ್ ಆಗಿ ಸಂಘಟನೆಯ ಬೆನ್ನೆಲುಬಾಗಿ ನಿಂತು, ತನು-ಮನ-ಧನಗಳಿಂದ ಹಗಲಿರುಳೆನ್ನದೆ ಸುನ್ನೀ ಸಂಘಟನೆಯ ಏಳಿಗೆಗಾಗಿ ಶ್ರಮಿಸಿ, ಕಿರಿಯರಿಗೆ ಮಾರ್ಗದರ್ಶಕರಾಗಿ, ಬೆನ್ನುತಟ್ಟಿ ಪ್ರೋತ್ಸಾಹಿಸಿದ ಅಬ್ದುಲ್ ರಶೀದ್ ಮಾಲಾಡಿಯವರ ನಾಯಕತ್ವವನ್ನು ಶ್ಲಾಘಿಸಿ ಸೆಕ್ಟರ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಡಿವಿಷನ್ ವೀಕ್ಷಕರಾಗಿ ಆಗಮಿಸಿದ್ದ SSF ಬೆಳ್ತಂಗಡಿ ಡಿವಿಷನ್ ಅಧ್ಯಕ್ಷರಾದ ಇಸಾಕ್ ಅಳದಂಗಡಿ, ಪ್ರಧಾನ ಕಾರ್ಯದರ್ಶಿ ನಾಸಿರ್ ಪಡ್ದಂದಡ್ಕ, ಕೋಶಾಧಿಕಾರಿ ಹಂಝ ಕಕ್ಕಿಂಜೆ ಯವರ ನಿರ್ದೇಶನದ ಮೇರೆಗೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಾಶಿಮ್ ಸಅದಿ ಅರೋದ್ದು ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು, ಲೆಕ್ಕಪತ್ರವನ್ನು ಕೋಶಾಧಿಕಾರಿಗಳಾದ ಹಾರಿಸ್ ಪಾಂಡವರಕಲ್ಲುರವರ ಅನುಮತಿ ಮೇರೆಗೆ ರಾಝಿಕ್ ಮಾಲಾಡಿ ವಾಚಿಸಿದರು, ಸಭೆಯು ವರದಿ ಮತ್ತು ಲೆಕ್ಕಪತ್ರವನ್ನು ಸರ್ವಾನುಮತದಿಂದ ಅಂಗೀಕರಿಸಿತು.
ಡಿವಿಷನ್ ವೀಕ್ಷಕರ ನೇತೃತ್ವದಲ್ಲಿ ಹಳೆ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ಅಧ್ಯಕ್ಷರು : ಮಹಮ್ಮದ್ ರಾಝಿಕ್ ಮಾಲಾಡಿ
ಉಪಾಧ್ಯಕ್ಷರು : ಹಾಶಿಮ್ ಸಅದಿ ಅರೋದ್ದು
ಪ್ರಧಾನ ಕಾರ್ಯದರ್ಶಿ : ಅಲ್ಫಾಝ್ ಇರ್ವತ್ತೂರ್ ಪದವು
ಕೋಶಾಧಿಕಾರಿ : ಅಬ್ದುಲ್ ರಶೀದ್ ಮಾಲಾಡಿ
ಕಾರ್ಯದರ್ಶಿಗಳು ಮತ್ತು ಕನ್ವಿನರ್ಗಳು :
ದಅವಾ : ಸಿರಾಜುದ್ದಿನ್ ಹಿಕಮಿ ಪುಂಜಾಲಕಟ್ಟೆ
ಕನ್ವಿನರ್ : ನೌಷದ್ ಅಸ್ಸಖಾಫಿ ಅಲ್-ಮುಈನಿ
WEFI : ಶಾಫಿ ಅರೋದ್ದು
ಕನ್ವಿನರ್ : ಶಫೀಕ್ ಹಾಶಿಮಿ ಕಾವಳಕಟ್ಟೆ
ರೈನ್ಬೋ : ಅದ್ನಾನ್ ಪಾಂಡವರಕಲ್ಲು
ಕ್ಯಾಂಪಸ್ : ರಾಝಿಕ್ ಬಂಗೇರಕಟ್ಟೆ
ಕನ್ವಿನರ್ : ಆಶಿಕ್ ಮಾಲಾಡಿ
ಮೀಡಿಯಾ : ಅಶಾದ್ ಇರ್ವತ್ತೂರ್ ಪದವು
ಕನ್ವಿನರ್ : ಇಕ್ಬಾಲ್ ಪುಂಜಾಲಕಟ್ಟೆ
QD(Quality Development) : ಫಝಲ್ ಇರ್ವತ್ತೂರ್ ಪದವು
ಕನ್ವಿನರ್ : ಇರ್ಷಾದ್ ಸಅದಿ ಅರೋದ್ದು
GD(Growth and Development) : ಹಸೀಬ್ ಕಾವಳಕಟ್ಟೆ
ಕನ್ವಿನರ್ : ಜಮ್ಶೀರ್ ಪುಂಜಾಲಕಟ್ಟೆ
ಕಾರ್ಯಕಾರಿಣಿ ಸಮಿತಿ ಸದಸ್ಯರು :
ಹಾರಿಸ್ ಪಾಂಡವರಕಲ್ಲು, ಹಂಝ ಪಾಂಡವರಕಲ್ಲು ಸೇರಿದಂತೆ ಒಟ್ಟು 19 ಮಂದಿಯನ್ನೊಳಗೊಂಡ 2026-27 ನೇ ಸಾಲಿನ ಸಾಂಘಿಕ ವರ್ಷಕ್ಕೆ ನೂತನ ಸಮಿತಿಯಾಗಿ ಆಯ್ಕೆ ಮಾಡಲಾಯಿತು.
ನೂತನ ಪ್ರಧಾನ ಕಾರ್ಯದರ್ಶಿಯಾದ ಅಲ್ಫಾಝ್ ಇರ್ವತ್ತೂರ್ ಪದವು ಧನ್ಯವಾದ ಮಾಡಿದ ಸಭೆಯು ಮೂರು ಜೋಡಿ ಸ್ವಲಾತಿನೊಂದಿಗೆ ಅಂತ್ಯಗಾನಿತು.
What's Your Reaction?
Like
1
Dislike
0
Love
1
Funny
0
Angry
0
Sad
0
Wow
1



